ಸಮಾಜವಾದಿ ಪಕ್ಷದ ಸಂಸದ ಶಫಿಕುರ್ ರೆಹಮಾನ್ ಬಾರ್ಕ್ ನಿಧನ
ನವದೆಹಲಿ:ಸಮಾಜವಾದಿ ಪಕ್ಷದ ಸಂಸದ ಶಫಿಕುರ್ ರೆಹಮಾನ್ ಬಾರ್ಕ್ (94) ದೀರ್ಘಕಾಲದ ಅನಾರೋಗ್ಯದ ನಂತರ ನಿಧನರಾದರು.
ಬಾರ್ಕ್ ಅವರು ಸಂಸತ್ತಿನ ಅತ್ಯಂತ ಹಿರಿಯ ಸಂಸದ. ಅವರು ಮೊರಾದಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
2024 ರ ಲೋಕಸಭಾ ಚುನಾವಣೆಗೆ ಸಮಾಜವಾದಿ ಪಕ್ಷವು ಸಂಭಾಲ್ನಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.
ಅವರು 5 ಬಾರಿ ಸಂಸದರಾಗಿದ್ದಾರೆ. ಫೆಬ್ರವರಿ 21 ರಂದು ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಮೊರಾದಾಬಾದ್‌ನ ಖಾಸಗಿ ಆಸ್ಪತ್ರೆಗೆ ತೆರಳಿ ಸಂಸದರ ಸ್ಥಿತಿಯ ಬಗ್ಗೆ ವಿಚಾರಿಸಿದ್ದರು.
ವಿವಾದಾತ್ಮಕ ನಾಯಕ ಎಂದೇ ಹೆಸರಾಗಿದ್ದ ಅವರು, ಯಾವಾಗಲೂ ತನ್ನ ಹೇಳಿಕೆಗಳಿಗಾಗಿ ಸುದ್ದಿಯಾಗುತ್ತಿದ್ದರು. ಕೋವಿಡ್ ಬಗ್ಗೆ ಕೇಂದ್ರವು “ಪ್ರಚಾರ” ದಲ್ಲಿ ತೊಡಗಿದೆ ಎಂದು ಬಾರ್ಕ್ ಆರೋಪಿಸಿದ್ದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯನ್ನು ತಡೆಯಲು ಬಿಜೆಪಿ “ರಾಜಕೀಯ ಕರೋನಾ” ವನ್ನು ಬಳಸುತ್ತಿದೆ ಎಂದಿದ್ದರು. ದರೋಡೆಕೋರ ಅತೀಕ್ ಅಹ್ಮದ್ ಮತ್ತು ಸಹೋದರ ಅಶ್ರಫ್ ಹತ್ಯೆಯಾದ ನಂತರ ಅವರಿಗೆ ನ್ಯಾಯ ಸಿಗಲಿಲ್ಲ ಎಂದು ಬಾರ್ಕ್ ಹೇಳಿದ್ದರು.