 : ಮೊಬೈಲ್ ಕಳವು ಆರೋಪ; ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಥಳಿಸಿದ ಯುವಕರು
ಮೊಬೈಲ್ ಕದ್ದಿದ್ದಾನೆ ( ) ಎಂದು ಆರೋಪಿಸಿ ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಥಳಿಸಿರುವ ಘಟನೆ ಬಿಹಾರದ () ಸಮಸ್ತಿಪುರದಲ್ಲಿ  ನಡೆದಿದೆ. ಸಿದ್ದಾರ್ಥ್ ಕುಮಾರ್ ಹಲ್ಲೆಗೊಳಗಾದ ಯುವಕ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ( ) ಆಗಿತ್ತು.
ಸೋನು ಕುಮಾರ್ ಎಂಬಾತನ ಮನೆಯಲ್ಲಿದ್ದ ಮೊಬೈಲ್ ಅನ್ನು ಸಿದ್ದಾರ್ಥ್ ಕುಮಾರ್ ಕದ್ದಿದ್ದಾನೆ ಎಂದು ಆರೋಪಿಸಿ ಸೋನು ಕುಮಾರ್ ಮತ್ತು ಆತನ ಸ್ನೇಹಿತ ಗುಲಾಬ್ ಎಂಬಾತ ಸಿದ್ದಾರ್ಥ್ ನನ್ನು ಮರಕ್ಕೆ ಕಟ್ಟಿ ಹಾಕಿದ್ದಾರೆ. ಬಳಿಕ ದೊಣ್ಣೆಗಳಿಂದ ಥಳಿಸಿದ್ದಾರೆ.
ಸಿದ್ದಾರ್ಥ್ ಕುಮಾರ್ ತಾನು ಮೊಬೈಲ್ ಕದ್ದಿಲ್ಲ ಎಂದು ಪದೇ ಪದೇ ಹೇಳಿದರೂ ಕೇಳದೆ ಆತನಿಗೆ ಚಿತ್ರಹಿಂಸೆ ನೀಡಿದ್ದಾರೆ. ಕೆಲವು ಗ್ರಾಮಸ್ಥರು ಸಿದ್ಧಾರ್ಥ್ ನನ್ನು ರಕ್ಷಿಸಿ ಅವರ ಮನೆಗೆ ಕರೆದೊಯ್ದು ಕುಟುಂಬ ಸದಸ್ಯರಿಗೆ ಒಪ್ಪಿಸಿದ್ದಾರೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬಳಿಕ ಹಸನ್‌ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಆರೋಪಿಗಳಾದ ಸೋನು ಕುಮಾರ್ ಮತ್ತು ಗುಲಾಬ್‌ನನ್ನು ಪೊಲೀಸರು ಬಂಧಿಸಿದ್ದಾರೆ.
 : ಈ ನಗರದಲ್ಲಿ ಪುರುಷರು ಮಹಿಳೆಯರಂತೆ ಸೀರೆ ಉಡುತ್ತಾರೆ! ಇದೆಂಥಾ ಶಾಪ ಗೊತ್ತಾ?
ಕಳೆದ ತಿಂಗಳು ರಾಜ್ಯದ ರಾಜಧಾನಿ ಪಾಟ್ನಾದಲ್ಲಿ ಟ್ರಾನ್ಸ್‌ಫಾರ್ಮರ್ ರಿಪೇರಿ ಅಂಗಡಿಯಲ್ಲಿ ಕಳ್ಳತನದ ಶಂಕೆಯಲ್ಲಿ ಇಬ್ಬರು ಯುವಕರನ್ನು ಜನರ ಗುಂಪು ಹೊಡೆದು ಕೊಂದಿತ್ತು. ಮೃತರನ್ನು 20ರ ಹರೆಯದ ರೋಹಿತ್ ಶಾ ಮತ್ತು ರಾಕೇಶ್ ರಾಯ್ ಎಂದು ಗುರುತಿಸಲಾಗಿದೆ.