 :  ಮಹಿಳೆಯರೊಂದಿಗೆ ಅನುಚಿತ ವರ್ತನೆ ಆರೋಪ: ಬಿಜೆಪಿ ಕಾರ್ಪೊರೇಟರ್‌ಗೆ ಧರ್ಮದೇಟು
ಭೋಪಾಲ್:ಬಿಜೆಪಿ ಕಾರ್ಪೊರೇಟರ್ ( ) ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೂವರು ಮಹಿಳೆಯರು ಸೇರಿ ನಾಲ್ವರು ಭೋಪಾಲ್‌ನ () ಸಾರ್ವಜನಿಕ ಸ್ಥಳದಲ್ಲಿ ಥಳಿಸಿರುವ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ( ) ಆಗಿದೆ.
ಭೋಪಾಲ್‌ನ ವಾರ್ಡ್ 48ರ ಕಾರ್ಪೊರೇಟರ್ ಅರವಿಂದ್ ವರ್ಮಾ ಅವರ ದೂರಿನ ಮೇರೆಗೆ ಪರಾಸ್ ಮೀನಾ, ಅವರ ಪತ್ನಿ, ತಾಯಿ ಮತ್ತು ಅವರ ಕುಟುಂಬದ ಇನ್ನೋರ್ವ ಮಹಿಳೆ ವಿರುದ್ಧ ಭಾನುವಾರ ರಾತ್ರಿ ಚುನಭಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶಹಪುರದಲ್ಲಿ ಈ ಘಟನೆ ನಡೆದಿದೆ. ಸಂಪೂರ್ಣ ಘಟನೆಯನ್ನು ವಿಡಿಯೋದಲ್ಲಿ ದಾಖಲಿಸಲಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮೂವರು ಮಹಿಳೆಯರು ವರ್ಮಾ ಅವರ ಕಾಲರ್‌ ಹಿಡಿದುಕೊಂಡು, ಕುರ್ಚಿ, ಟೇಬಲ್‌ ಮತ್ತು ಚಪ್ಪಲಿಯಿಂದ ಹೊಡೆಯುವುದನ್ನು ಕಾಣಬಹುದು. ಮಹಿಳೆಯರೊಂದಿಗಿನ ಅನುಚಿತ ವರ್ತನೆಯ ಬಗ್ಗೆಯೂ ಅವರು ಆರೋಪಿಸಿದ್ದರು.
ಹತ್ತಿರದ ಅಂಗಡಿಯವನು ಇದರ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಮಾಹಿತಿಯ ಪ್ರಕಾರ, ವರ್ಮಾ ಅವರು ಬೀದಿ ಬದಿ ಆಹಾರ ಮಳಿಗೆಯವರ ಅಂಗಡಿಯವರಿಂದ ಹಣಕ್ಕೆ ಬೇಡಿಕೆಯಿಟ್ಟಾಗ ಈ ಘಟನೆ ಸಂಭವಿಸಿದೆ.
ಅಂಗಡಿಯವನು ಹಣ ಪಾವತಿಸಲು ಸಾಧ್ಯವಾಗದಿದ್ದಾಗ, ವರ್ಮಾ ಮಹಿಳೆಯರ ಬಗ್ಗೆ ಅನುಚಿತವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ವರ್ಮಾ ವಿರುದ್ಧ ಈ ಆರೋಪ ಹೊಸದೇನಲ್ಲ. ಈ ಹಿಂದೆಯೂ ಮಹಿಳೆಯರೊಂದಿಗೆ ಅನುಚಿತ ವರ್ತನೆಯ ಆರೋಪಗಳು ಕೇಳಿ ಬಂದಿದ್ದವು.
      . 48           .          .@DrMohanYadav51ji@@@    .../coZ0G4pKIb
ಬಿಜೆಪಿ ಕಾರ್ಪೊರೇಟರ್ ಅರವಿಂದ್ ವರ್ಮಾ ಮೇಲೆ ಈ ಮೂವರು ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾರೆ . ನಿಂದನೆ ಮತ್ತು ಬೆದರಿಕೆ ಹಾಕಿರುವುದಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಚುನಭಟ್ಟಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಭೂಪೇಂದ್ರ ಕೌರ್ ಸಿಂಧು ಹೇಳಿದ್ದಾರೆ.
ಕಾರ್ಪೊರೇಟರ್ ತಮ್ಮಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೀನಾ ಅವರೂ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಕೂಡ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದರು.
 : ವಿವಾಹಿತಮಹಿಳೆಯಮನೆಗೆ ಬಂದ ಪ್ರಿಯಕರನಿಗೆ ಕುಟುಂಬಸ್ಥರಿಂದ ಬಿತ್ತು ಗೂಸಾ!
ಎರಡೂ ಕಡೆಯವರಿಂದಲೂ ದೂರು ಸ್ವೀಕರಿಸಲಾಗಿದೆ. ದೂರಿನ ಬಗ್ಗೆ ತನಿಖೆ ನಡೆಸಲಾಗುವುದು. ಅದರಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಭೂಪೇಂದ್ರ ಕೌರ್ ಹೇಳಿದರು.