‘ಹೊಸ ಚಿಂತನೆಯ ಹೊಳಪು’ ಆರಂಭಿಸಿದ ಕೋಲಿನ್ ಮನೆ ಕೆಲಸದವರನ್ನು ಗೌರವಿಸುವ ಮತ್ತು ತಾರತಮ್ಯ ನಿವಾರಿಸಲು ಪ್ರೋತ್ಸಾಹ
ಮನೆ ಕೆಲಸದವರನ್ನೂ ನಮ್ಮೊಳಗೊಬ್ಬರು ಎಂದು ನಡೆಸಿಕೊಂಡು, ಅವರ ವಿರುದ್ಧದ ಬೇಧ ಭಾವವನ್ನು ನಿವಾರಿಸುವುದು ಮತ್ತು ಆಧುನಿಕ ಕಾಲದ ತಾರತಮ್ಯವನ್ನು ನಿವಾರಿಸುವುದು
ಭಾರತ ನಂ.1 ಗ್ಲಾಸ್ ಮತ್ತು ಮನೆ ಸ್ವಚ್ಛತೆ ಬ್ರ್ಯಾಂಡ್ ಆಗಿರುವ ಕೋಲಿನ್ #* ಎಂಬ ಸ್ಫೂರ್ತಿದಾಯಕ ಅಭಿಯಾನ ಆರಂಭಿಸಿದ್ದು, ಮನೆ ಕೆಲಸದವರ ಘನತೆಯನ್ನು ಕಾಪಾಡುವುದು ಮತ್ತು ತಾರತಮ್ಯವನ್ನು ಕೊನೆಗೊಳಿಸುವುದನ್ನು ಇದು ಪ್ರೋತ್ಸಾಹಿಸುತ್ತದೆ. ಮನೆ ಕೆಲಸದವರಿಗೆ ಪ್ರತ್ಯೇಕ ಪಾತ್ರೆಗಳು ಅಥವಾ ಉಳಿದ ತಿಂಡಿ ತಿನಿಸುಗಳು ಅಥವಾ ಬಳಸಿದ ಬಟ್ಟೆಗಳನ್ನು ಕೊಡುವುದು ಇತ್ಯಾದಿ ಪೂರ್ವಗ್ರಹಗಳನ್ನು ತೊರೆಯುವಂತೆ ಗ್ರಾಹಕರಿಗೆ ಈ ಅಭಿಯಾನವು ಆಗ್ರಹಿಸುತ್ತದೆ. ಅಷ್ಟೇ ಅಲ್ಲ, ಮನೆ ಕೆಲಸದವರನ್ನು ಸಮಾನರಾಗಿ ಮತ್ತು ನಮ್ಮೊಳಗೊಬ್ಬರು ಎಂಬಂತೆ ನೋಡಬೇಕು ಎಂಬುದನ್ನು ಪ್ರೋತ್ಸಾಹಿಸುತ್ತದೆ.
# ಎಂಬುದು ನಮ್ಮ ಮನಸ್ಥಿತಿಯಲ್ಲಿ ಹೊಸ ನಂಬಿಕೆ ಮತ್ತು ಹೊಳಪನ್ನು ತರುವ ಮೂಲಕ ಸಾಮಾಜಿಕ ಬದಲಾವಣೆಯನ್ನು ಪ್ರಚುರಪಡಿಸುತ್ತದೆ. ಇದೇ ವೇಳೆ ಮನೆಗಳಲ್ಲಿನ ಹಲವು ರೀತಿಯ ನೆಲವನ್ನು ಸ್ವಚ್ಛಗೊಳಿಸುವ ಭರವಸೆಯನ್ನು ಕೋಲಿನ್ ನೀಡುತ್ತದೆ.
ಇಂದಿನ ಕಾಲದಲ್ಲಿ ನಮ್ಮ ಮನೆ ಕೆಲಸದವರ ಸೇವೆಯಿಂದಾಗಿ ನಮ್ಮ ಜೀವನ ಸರಾಗವಾಗಿ ನಡೆಯುತ್ತದೆ. ಆದರೆ, ಪ್ರತ್ಯೇಕ ಪಾತ್ರೆಗಳನ್ನು ಬಳಸುವುದು ಮತ್ತು ಹಳೆಯ ಬಟ್ಟೆಗಳನ್ನು ನೀಡುವಿಕೆಯೂ ಮುಂದುವರಿದಿದೆ. ಅಭಿಯಾನದ ಮುಂದುವರಿಕೆಯಾಗಿ, ಮನೆ ಕೆಲಸದವರ ಬಳಕೆಗೆ ಇಟ್ಟಿರುವ ಬಳಸಿದ ಪಾತ್ರೆಗಳನ್ನು ತ್ಯಜಿಸಿ, ಮನೆ ಕೆಲಸದವರ ವಿರುದ್ಧ ತಾರತಮ್ಯವನ್ನು ಕೊನೆಗೊಳಿಸುವ ಅಭಿಯಾನದಲ್ಲಿ ಕೈಜೋಡಿಸುವಂತೆ ಜನರನ್ನು ಪ್ರೋತ್ಸಾಹಿಸುವ *ಡಿಸ್‌ಕಾರ್ಡ್‌ ದಿ ಕಪ್ *ಅಭಿಯಾನವನ್ನು ಕೂಡಾ ಕೋಲಿನ್ ಆರಂಭಿಸಿದೆ. ಈ ಅಭಿಯಾನದ ಮೂಲಕ, ಮನೆ ಕೆಲಸದವರ ಕಡೆಗೆ ಅನುಕಂಪವನ್ನು ಪ್ರೋತ್ಸಾಹಿಸುವ ಮತ್ತು ತಾದಾತ್ಮ್ಯದ ಭಾವವನ್ನು ಉಂಟು ಮಾಡುವುದಕ್ಕೆ ಪ್ರೋತ್ಸಾಹಿಸುತ್ತಿದೆ.
ರೆಕಿಟ್‌ ಕಂಪನಿಯ ದಕ್ಷಿಣ ಏಷ್ಯಾ, ಶುಚಿತ್ವ ವಿಭಾಗದ ಪ್ರಾದೇಶಿಕ ಮಾರ್ಕೆಟಿಂಗ್ ನಿರ್ದೇಶಕ ಸೌರಭ್‌ ಜೈನ್ ಹೇಳುವಂತೆ “ದಶಕಗಳಿಂದಲೂ, ಕೋಲಿನ್ ಮನೆಮಾತಾಗಿದ್ದು, ಗ್ರಾಹಕರ ಮನೆಗಳ ವಿವಿಧ ಮೇಲ್ಮೈಗಳನ್ನು ಹೊಳಪು ಮಾಡುವ ನಿಟ್ಟಿನಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಿದೆ. ಈ ಹೊಳಪಿನಿಂದಾಗಿ ಗ್ರಾಹಕರು ಹೆಚ್ಚು ಪ್ರಜ್ಞಾವಂತರಾಗುತ್ತಿದ್ದಾರೆ. ಅವರಲ್ಲಿ ಆಧುನಿಕ ಮತ್ತು ಸಮಾನತೆಯ ಭಾವವೂ ಮೂಡುತ್ತಿದೆ. ಮನೆ ಕೆಲಸದವರು ಮತ್ತು ನಮ್ಮ ಗ್ರಾಹಕರ ಜೀವನವು ಈ ವಿಭಾಗದ ಬ್ರ್ಯಾಂಡ್‌ಗೆ ಅತ್ಯಂತ ಮುಖ್ಯವಾಗಿರುತ್ತಾರೆ. ಕಾಲಿನ್‌ನ ಹೊಸ ಅಭಿಯಾನ ‘ಚಮಕ್ ನಯೀ ಸೋಚ್‌ ಕಿ’ ಅಂದರೆ ಹೊಸ ಚಿಂತನೆಯ ಹೊಳಪು ಎಂಬುದು ಮನೆಗಳಲ್ಲಿ ಪರಿಸರ ಇನ್ನಷ್ಟು ಆತ್ಮೀಯವನ್ನಾಗಿಸುವುದಕ್ಕೆ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ, ಮನೆ ಕೆಲಸದವರಿಗೆ ಬೇಕಿರುವ ಘನತೆಯನ್ನು ತಂದುಕೊಡುವ ಧ್ಯೇಯಕ್ಕೂ ಇದು ಸಾಕ್ಷಿಯಾಗಿದೆ. ‘ಸಣ್ಣ ಸಂಗತಿಯೂ ಅತ್ಯಂತ ಮಹತ್ವದ್ದು’ ಎಂಬ ಮಾತಿನಿಂದ ಪ್ರೇರೇಪಣೆ ಪಡೆದಿರುವ ಅಭಿಯಾನವು ಮನೆ ಕೆಲಸದವರಿಗೆ ಪ್ರತ್ಯೇಕ ಪಾತ್ರೆಗಳನ್ನು ಬಳಸುವ ಪದ್ಧತಿಯನ್ನು ನಿರ್ಮೂಲನೆ ಮಾಡುವುದಕ್ಕೆ ಪ್ರೋತ್ಸಾಹಿಸುತ್ತದೆ. ನಮ್ಮ ಮನೆಗಳಂತೆಯೇ ನಮ್ಮ ಮನಸುಗಳೂ ಸ್ವಚ್ಛಗೊಳ್ಳಬೇಕು ಎಂಬ ನಿಟ್ಟಿನಲ್ಲಿ ನಾವು ಪ್ರಯತ್ನಿಸುತ್ತಿದ್ದು, ಇದಕ್ಕಾಗಿ ನಮ್ಮ ಜೊತೆಗೆ ಕೈಜೋಡಿಸುವಂತೆ ಮತ್ತು ಮನೆ ಕೆಲಸದವರ ಕಡೆಗೆ ನಾವು ತೋರುವ ವರ್ತನೆಯನ್ನು ಬದಲಿಸಿಕೊಳ್ಳುವಂತೆ ನಾವು ಜನರಲ್ಲಿ ಕೇಳಿಕೊಳ್ಳುತ್ತಿದ್ದೇವೆ.”
 ಪರಿಕಲ್ಪನೆಯ ಅಭಿಯಾನದಲ್ಲಿ ಜಾಹೀರಾತು ಫಿಲಂ ಅನ್ನೂ ಬಿಡುಗಡೆ ಮಾಡಲಾಗಿದ್ದು, ಇದು ಮನೆಕೆಲಸದವರಿಗೆ ನಾವು ಮಾಡುವ ತಾರತಮ್ಯವನ್ನು ತಡೆಯುವುದಕ್ಕೆ ಜನರನ್ನು ಪ್ರೋತ್ಸಾಹಿಸುತ್ತದೆ. ಚಹಾ ಮಾಡುತ್ತಿರುವಾಗ ಇಬ್ಬರು ಸ್ನೇಹಿತರು ಮಾತನಾಡುತ್ತಿರುವುದನ್ನು ಸುಂದರವಾಗಿ ಈ ಜಾಹೀರಾತು ಫಿಲಂ ಚಿತ್ರಿಸುತ್ತದೆ. ಮನೆ ಕೆಲಸದವರು ಬಂದಾಗ, ಒಬ್ಬ ಸ್ನೇಹಿತರು ಹಳೆಯ ಕಪ್ ಹುಡುಕಲು ಆರಂಭಿಸುತ್ತಾರೆ. ಇದನ್ನು ಗಮನಿಸಿದ ಇನ್ನೊಬ್ಬ ಸ್ನೇಹಿತರು ಮನೆ ಕೆಲಸದವರೂ ನಮ್ಮಲ್ಲಿ ಒಬ್ಬರು ಎಂಬಂತೆ ನೋಡುತ್ತಾರೆ ಮತ್ತು ಮನೆ ಕೆಲಸದವರಿಗೆ ತಮ್ಮಂತೆಯೇ ಇರುವ ಕಪ್‌ನಲ್ಲಿ ಚಹಾ ಕೊಡುತ್ತಾರೆ. ಸಿಸಿಒ ಮತ್ತು ಸಹ ಸಂಸ್ಥಾಪಕ ಆಲಾಪ್ ದೇಸಾಯಿ ಹೇಳುವಂತೆ “ಪ್ರತ್ಯೇಕ ಕಪ್‌, ಪ್ರತ್ಯೇಕ ಪ್ಲೇಟ್ ಮತ್ತು ಪ್ರತ್ಯೇಕ ಪಾತ್ರೆಗಳು ನಮ್ಮನ್ನು ಪ್ರತ್ಯೇಕವಾಗಿಡುತ್ತವೆ. ಇದು ನಾವು ನಮಗೆ ಗೊತ್ತಿಲ್ಲದೇ ಅನುಸರಿಸುವ ಆಧುನಿಕ ಕಾಲದ ಜಾತಿ ವ್ಯವಸ್ಥೆ. ನಾವು ಏನು ಮಾಡುತ್ತಿದ್ದೇವೆ ಎಂಬುದು ಗೊತ್ತಿಲ್ಲದೆಯೇ ಇದನ್ನು ಅನುಸರಿಸುತ್ತಿರುತ್ತೇವೆ. ಇಂತಹ ಬೇದ ಭಾವ ಇಲ್ಲದ ಮನೆಗಳಲ್ಲಿ ಈ ಅಭಿಯಾನವು ಒಂದು ಹೆಮ್ಮೆಯ ಸಂಗತಿಯಾಗುತ್ತದೆ ಮತ್ತು ಈ ಪದ್ಧತಿಯನ್ನು ಅನುಸರಿಸುತ್ತಿರುವವರಿಗೆ ಇದೊಂದು ಜಾಗೃತಿಯ ಸಂದೇಶವಾಗಿರುತ್ತದೆ.”
ಫಿಲಂ ಲಿಂಕ್‌: ://./F_o69WFjpjAಏಜೆನ್ಸಿ ಮತ್ತು ಪ್ರೊಡಕ್ಷನ್ ಹೌಸ್‌: ಟಿಜಿಟಿಎಚ್‌ಆರ್‌ನಿರ್ದೇಶಕರು: ವಿಶಾಲ್ ಸಾಗರ್
ಕೋಲಿನ್ 125 ಮಿ.ಲೀ, 250 ಮಿ.ಲೀ. 500 ಮಿ.ಲೀ ಮತ್ತು 1000 ಮಿ.ಲೀ ಗಾತ್ರದಲ್ಲಿ ಲಭ್ಯವಿದ್ದು,  39,  72,  109,  197 ದರದಲ್ಲಿ ಆಫ್‌ಲೈನ್ ಮತ್ತು ಆನ್‌ಲೈನ್ ಸ್ಟೋರ್‌ಗಳಲ್ಲಿ ಭಾರತದಾದ್ಯಂತ ಲಭ್ಯವಿದೆ.