ಮೊದಲ ಹಂತದ ಮತದಾನ ಆರಂಭ ಇಂದು
ಹೊಸದಿಲ್ಲಿ: ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಇಂದು ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನ ಆರಂಭವಾಗಿದೆ. ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯಲಿದೆ.
ಮುಂಜಾನೆ 7 ಗಂಟೆಗೇ ಆರಂಭವಾದ ವೋಟಿಂಗ್‌ಗೆ ಎಲ್ಲೆಡೆ ಉತ್ಸಾಹದ ಪ್ರತಿಕ್ರಿಯೆ ಕಂಡುಬಂತು.
ಸಾರ್ವತ್ರಿಕ ಚುನಾವಣೆ ದೇಶಾದ್ಯಂತ ಏಳು ಹಂತಗಳಲ್ಲಿ ನಡೆಯಲಿದ್ದು, ಜೂನ್ 1ರಂದು ಕೊನೆಗೊಳ್ಳಲಿದೆ. ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಮತ್ತು ಫಲಿತಾಂಶ ಘೋಷಣೆ ಜೂನ್ 4ರಂದು ನಡೆಯಲಿದೆ. ಇಂದು ಒಟ್ಟು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಇಂದು ಈ ರಾಜ್ಯಗಳಲ್ಲಿ ಮತದಾನ ನಡೆಯಿತು..
ತಮಿಳುನಾಡಿನ 39 ಕ್ಷೇತ್ರಗಳುರಾಜಸ್ಥಾನದ 12 ಕ್ಷೇತ್ರಗಳುಉತ್ತರ ಪ್ರದೇಶದ 8 ಕ್ಷೇತ್ರಗಳುಮಧ್ಯ ಪ್ರದೇಶದ 6 ಕ್ಷೇತ್ರಗಳುಉತ್ತರಾಖಂಡದ 5 ಕ್ಷೇತ್ರಗಳುಮಹಾರಾಷ್ಟ್ರದ 5 ಕ್ಷೇತ್ರಗಳುಅಸ್ಸಾಂನ 5 ಕ್ಷೇತ್ರಗಳುಬಿಹಾರದ 4 ಕ್ಷೇತ್ರಗಳುಪಶ್ಚಿಮ ಬಂಗಾಳದ 3 ಕ್ಷೇತ್ರಗಳುಮಣಿಪುರದ 2 ಕ್ಷೇತ್ರಗಳುಅರುಣಾಚಲ ಪ್ರದೇಶದ 2 ಕ್ಷೇತ್ರಗಳುಮೇಘಾಲಯ 2 ಕ್ಷೇತ್ರಗಳುಪುದುಚೆರಿ, ಅರುಣಾಚಲ ಪ್ರದೇಶ, ಛತ್ತೀಸ್‌ಘಡ, ಜಮ್ಮು ಕಾಶ್ಮೀರ, ಲಡಾಕ್, ಲಕ್ಷದೀಪ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದ ತಲಾ 1 ಕ್ಷೇತ್ರಗಳಿಗೆ ಮತದಾನ ನಡೆಯಿತು.
21 ರಾಜ್ಯಗಳ 102 ಕ್ಷೇತ್ರಗಳಲ್ಲಿ 11 ಎಸ್ಟಿ, 18 ಎಸ್ಸಿ, 73 ಸಾಮಾನ್ಯ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಿತು. 18 ಲಕ್ಷ ಮತಗಟ್ಟೆ ಸಿಬ್ಬಂದಿ ನಿಯೋಜಿಸಲಾಗಿತ್ತು. 1.87 ಲಕ್ಷ ಮತಗಟ್ಟೆಗಳ ನಿರ್ಮಾಣವಾಗಿದ್ದು, 16.63 ಕೋಟಿ ಮತದಾರರಿಂದ ಮತದಾನ ನಡೆಯಲಿದೆ. ಇವರಲ್ಲಿ 8.4 ಕೋಟಿ ಪುರುಷ, 8.23 ಕೋಟಿ ಮಹಿಳಾ ಮತ್ತು 11,371 ತೃತೀಯ ಲಿಂಗಿ ಮತದಾರರು ಇದ್ದಾರೆ. 35.67 ಲಕ್ಷ ಯುವ ಸಮೂಹದಿಂದ ಮೊದಲ ಸಲ ಓಟಿಂಗ್ ನಡೆಯುತ್ತಿದೆ. 3.51 ಕೋಟಿ ಯುವ ಮತದಾರರು ಹಾಗೂ 14.14 ಲಕ್ಷ 85+ ವಯಸ್ಸಿನ ಮತದಾರರು ಇದ್ದಾರೆ.
ಕಣದಲ್ಲಿ 1625 ಅಭ್ಯರ್ಥಿಗಳು, 1491 ಪುರುಷ, 134 ಮಹಿಳಾ ಅಭ್ಯರ್ಥಿಗಳು ಇದ್ದಾರೆ. 41 ಹೆಲಿಕಾಪ್ಟರ್, 84 ವಿಶೇಷ ರೈಲು ಹಾಗೂ 1 ಲಕ್ಷ ವಾಹನಗಳು ಚುನಾವಣಾ ಕಾರ್ಯಕ್ಕೆ ಬಳಕೆಯಾಗುತ್ತಿದೆ. 127 ಸಾಮಾನ್ಯ, 67 ಪೊಲೀಸ್, 167 ಇತರೆ ಸೇರಿ ಒಟ್ಟು 361 ಮಂದಿ ಚುನಾವಣಾ ಮೇಲ್ವಿಚಾರಕರ ನೇಮಕವಾಗಿದೆ.
ಮೊದಲ ಹಂತದ ಚುನಾವಣೆಯಲ್ಲಿನ ಹೈ ವೋಲ್ಟೇಜ್ ಕ್ಷೇತ್ರಗಳು
ಬಿಕಾನೆರ್: (ರಾಜಸ್ಥಾನ )ಅರ್ಜುನ್ ರಾಮ್ ಮೇಘವಾಲ್ (ಬಿಜೆಪಿ)ಗೋವಿಂದ್ ರಾಮ್ ಮೇಘವಾಲ್ (ಕಾಂಗ್ರೆಸ್)
ಅಲ್ವಾರ್ : (ರಾಜಸ್ಥಾನ )ಭೂಪೇಂದರ್ ಯಾದವ್ (ಬಿಜೆಪಿ)ಲಲಿತ್ ಯಾದವ್ (ಕಾಂಗ್ರೆಸ್)
ಛಿಂದ್ವಾರಾ : (ಮಧ್ಯ ಪ್ರದೇಶ )ವಿವೇಕ್ ಬಂಟಿ ಸಾಹು (ಬಿಜೆಪಿ)ನಕುಲ್ ಕಮಲ್ ನಾಥ್ (ಕಾಂಗ್ರೆಸ್)
ನಾಗ್ಪುರ :ನಿತಿನ್ ಜೈರಾಮ್ ಗಡ್ಕರಿ (ಬಿಜೆಪಿ)ವಿಕಾಸ್ ಪಾಂಡುರಂಗ ಠಾಕ್ರೆ (ಕಾಂಗ್ರೆಸ್)
ಅರುಣಾಚಲ ಪಶ್ಚಿಮಕಿರಣ್ ರಿಜಿಜು (ಬಿಜೆಪಿ)ನಬಮ್ ತುಕಿ (ಕಾಂಗ್ರೆಸ್)
ಕೊಯಮತ್ತೂರು:ಗಣಪತಿ ರಾಜ್ ಕುಮಾರ್ (ಡಿಎಂಕೆ)ಸಿಂಗೈ ಜಿ ರಾಮಚಂದ್ರನ್ (ಎಐಎಡಿಎಂಕೆ)ಕೆ ಅಣ್ಣಾಮಲೈ (ಬಿಜೆಪಿ)ಪಿ.ಆರ್ ನಟರಾಜನ್ (ಸಿಪಿಎಂ)
ಚೆನ್ನೈ ದಕ್ಷಿಣ :ತಮಿಳಚ್ಚಿ ತಂಗಪಾಂಡಿಯನ್ (ಡಿಎಂಕೆ)ಜೆ ಜಯವರ್ಧನ್ (ಎಐಎಡಿಎಂಕೆ)ತಮಿಳಿಸಾಯಿ ಸೌಂದರ್ಯರಾಜನ್ (ಬಿಜೆಪಿ)
ನೀಲಗಿರಿ :ಎ ರಾಜಾ (ಡಿಎಂಕೆ)ಡಿ ಲೋಕೇಶ್ ತಮಿಳ್ಸೆಲ್ವನ್ (ಎಐಎಡಿಎಂಕೆ)ಎಲ್ ಮುರುಗನ್ (ಬಿಜೆಪಿ)
ಶಿವಗಂಗಾ:ಕಾರ್ತಿ ಪಿ ಚಿದಂಬರಂ (ಕಾಂಗ್ರೆಸ್)ಕ್ಸೇವಿಯರ್‌ದಾಸ್ (ಎಐಎಡಿಎಂಕೆ)ಡಿ ದೇವನಾಥನ್ ಯಾದವ್ (ಬಿಜೆಪಿ)
ಚೆನ್ನೈ ಸೆಂಟ್ರಲ್:ದಯಾನಿಧಿ ಮಾರನ್ (ಡಿಎಂಕೆ)ಬಿ ಪಾರ್ಥಸಾರಥಿ (ಡಿಎಂಡಿಕೆ)ವಿನೋಜ್ ಪಿ ಸೆಲ್ವಂ (ಬಿಜೆಪಿ)
ತಿರುವಳ್ಳೂರ್:ಸಸಿಕಾಂತ್ ಸೆಂಥಿಲ್ (ಕಾಂಗ್ರೆಸ್)ಕೆ ನಲ್ಲ ತಂಬಿ ()ಪೊನ್ ವಿ ಬಾಲಗಣಪತಿ (ಬಿಜೆಪಿ)
ಪಿಲಿಭಿತ್ : (ಉತ್ತರ ಪ್ರದೇಶ )ಜಿತಿನ್ ಪ್ರಸಾದ (ಬಿಜೆಪಿ)ಭಗವತ್ ಶರಣ್ ಗಂಗ್ವಾರ್ (ಎಸ್‌ಪಿ)ಅನಿಸ್ ಅಹ್ಮದ್ ಖಾನ್ (ಬಿಎಸ್ಪಿ)
ಗಯಾ: (ಬಿಹಾರ್ )ಜಿತನ್ ರಾಮ್ ಮಾಂಝಿ (-) (ಹಿಂದುಸ್ಥಾನಿ ಅವಾಮ್ ಮೋರ್ಚಾ )ಕುಮಾರ್ ಸರ್ವಜೀತ್ (ಆರ್ಜೆಡಿ)ವಿಜಯ್ ಮಾಂಝಿ (ಜೆಡಿಯು)
ಜೋರ್ಹತ್ : (ಅಸ್ಸಾಂ )ತೊಪೋನ್ ಕುಮಾರ್ ಗೊಗೊಯ್ (ಬಿಜೆಪಿ)ಗೌರವ್ ಗೊಗೊಯ್ (ಕಾಂಗ್ರೆಸ್)
ಉತ್ತರಾಖಂಡ
ಹರಿದ್ವಾರ:ವೀರೇಂದ್ರ ರಾವತ್ (ಕಾಂಗ್ರೆಸ್)ತ್ರಿವೇಂದ್ರ ಸಿಂಗ್ ರಾವತ್ (ಬಿಜೆಪಿ )[7:00 , 19/04/2024]  : ಲೋಕಸಭಾ ಚುನಾವಣೆಯ ಮೊದಲ ಹಂತದ ರಾಜ್ಯ ಹಾಗೂ ಕ್ಷೇತ್ರಗಳು
ತಮಿಳುನಾಡು
26.ಥೇನಿ:ತಂಗ ತಮಿಳ್ ಸೆಲ್ವನ್ (ಡಿಎಂಕೆ)ವಿಟಿ ನಾರಾಯಣಸ್ವಾಮಿ (ಎಐಎಡಿಎಂಕೆ)ಟಿಟಿವಿ ದಿನಕರನ್ (ಎಎಂಎಂಕೆ)
ರಾಜಸ್ಥಾನ
47.ಅಲ್ವಾರ್ :ಭೂಪೇಂದರ್ ಯಾದವ್ (ಬಿಜೆಪಿ)ಲಲಿತ್ ಯಾದವ್ (ಕಾಂಗ್ರೆಸ್)
ಉತ್ತರಪ್ರದೇಶ
ಮಧ್ಯಪ್ರದೇಶ
ಉತ್ತರಾಖಂಡ
ಮಹಾರಾಷ್ಟ್ರ
ಅಸ್ಸಾಂ
ಬಿಹಾರ್
ಪಶ್ಚಿಮ ಬಂಗಾಳ
ಅರುಣಾಚಾಲ ಪ್ರದೇಶ
ಮೇಘಾಲಯ
ಮಣಿಪುರ
94.ಪಶ್ಚಿಮ ತ್ರಿಪುರಾಬಿಪ್ಲಬ್ ಕುಮಾರ್ ದೇಬ್ (ಬಿಜೆಪಿ)ಆಶಿಶ್ ಕುಮಾರ್ ಸಹಾ (ಕಾಂಗ್ರೆಸ್)
ಛತ್ತೀಸ್‌ಗಢ
ಜಮ್ಮು & ಕಾಶ್ಮೀರ