ಇಯರ್ ಮತ್ತು ಇಯರ್ (ಎ) ಹಾಗೂ ಹೊಸ ಚಾಟ್‌ಜಿಪಿಟಿ ಇಂಟಿಗ್ರೇಶನ್‌ ಪರಿಚಯಿಸಿದ ನಥಿಂಗ್
ಈವರೆಗಿನ ನಥಿಂಗ್‌ನ ಅತ್ಯುತ್ತಮ ಆಡಿಯೋ ಪ್ರಾಡಕ್ಟ್‌ಗಳಿಗೆ ಮಹತ್ವದ ಅಪ್‌ಗ್ರೇಡ್‌
ಜಪಾನ್‌ನ ಟೋಕಿಯೋದಿಂದ ಲೈವ್‌ನಲ್ಲಿ ನಥಿಂಗ್ ತನ್ನ 1ನೇ ತ್ರೈಮಾಸಿಕ ಕಮ್ಯುನಿಟಿ ಅಪ್‌ಡೇಟ್‌ನಲ್ಲಿ ತನ್ನ ಆಡಿಯೋ ಪ್ರಾಡಕ್ಟ್ ಗುಚ್ಛಕ್ಕೆ ಹೊಸ ಅಡಿಪಾಯ ಹಾಕಿರುವುದಾಗಿ ಘೋಷಿಸಿದ್ದು, ಇದರ ಅಡಿಯಲ್ಲಿ ಎರಡು ವೈರ್‌ಲೆಸ್ ಇಯರ್‌ಬಡ್‌ಗಳಾದ ನಥಿಂಗ್ ಇಯರ್ ಮತ್ತು ನಥಿಂಗ್‌ ಇಯರ್ (ಎ) ಅನ್ನು ಬಿಡುಗಡೆ ಮಾಡಿದೆ. ಇದೇ ವೇಳೆ, ತನ್ನ ಆಡಿಯೋ ಮತ್ತು ಸ್ಮಾರ್ಟ್‌ಫೋನ್ ಪ್ರಾಡಕ್ಟ್‌ಗಳಲ್ಲಿ ಉದ್ಯಮದಲ್ಲೇ ಪ್ರಥಮ ಚಾಟ್‌ಜಿಪಿಟಿ ಇಂಟಿಗ್ರೇಶನ್‌ಗಳನ್ನು ಮಾಡುವ ಮೂಲಕ ಒಟ್ಟಾರೆ ಬಳಕೆದಾರರ ಅನುಭವವನ್ನು ಸುಧಾರಿಸುವುದಾಗಿಯೂ ಘೋಷಿಸಿದೆ.
ಕಳೆದ ಮೂರು ವರ್ಷಗಳಿಂದಲೂ ವಿನ್ಯಾಸ ಮತ್ತು ಇಂಜಿನಿಯರಿಂಗ್‌ನಲ್ಲಿ ನಿರಂತರವಾಗಿ ಸುಧಾರಣೆ ಮಾಡುತ್ತ ಬಂದಿರುವ ನಥಿಂಗ್‌ನ ಹೊಚ್ಚ ಹೊಸ ಆಡಿಯೋ ಉತ್ಪನ್ನಗಳು ಆಡಿಯೋ ಪ್ರಿಯರಿಗೆ ಮತ್ತು ದೈನಂದಿನ ಶ್ರೋತೃಗಳಿಗೆ ಪ್ರೀಮಿಯಂ ಬಳಕೆದಾರರ ಅನುಭವವನ್ನು ಒದಗಿಸುತ್ತದೆ. ತನ್ನ ಆಡಿಯೋ ಪ್ರಾಡಕ್ಟ್‌ಗಳಿಗೆ ಲಗತ್ತಿಸುತ್ತಿದ್ದ ಸಂಖ್ಯೆಯ ಸರಣಿಯನ್ನು ಕಂಪನಿ ನಿಲ್ಲಿಸಿದ್ದು, ಈಗ ಉತ್ಪನ್ನ ಮತ್ತು ಬಳಕೆದಾರರ ಅನುಭವದ ಮೇಲೆ ಹೆಚ್ಚಿನ ಗಮನ ಹರಿಸಲಿದೆ. ಉತ್ತಮ ಧ್ವನಿ ಗುಣಮಟ್ಟವನ್ನು ಬಯಸುವರಿಗಾಗಿ ನಥಿಂಗ್ ಇಯರ್ ಅನ್ನು ರೂಪಿಸಲಾಗಿದೆ. ದೈನಂದಿನ ಆಡಿಯೋ ಜೊತೆಗಾರನನ್ನು ಹುಡುಕುತ್ತಿರುವವರಿಗೆ ನಥಿಂಗ್ ಇಯರ್ (ಎ) ಸೂಕ್ತವಾಗಿದೆ.
“ನಥಿಂಗ್ ಇಯರ್ ಮತ್ತು ನಥಿಂಗ್ ಇಯರ್ (ಎ) ಜೊತೆಗೆ ನಥಿಂಗ್ ಇಯರ್‌ಬಡ್‌ಗಳಿಗೆ ಹಾಗೂ ನಥಿಂಗ್ ಒಎಸ್‌ಗೆ ಚಾಟ್‌ಜಿಪಿಟಿ ಅನ್ನೂ ಅಳವಡಿಸುವ ಮೂಲಕ ಮಹತ್ವದ ಬದಲಾವಣೆಯ ಕಡೆಗೆ ನಾವು ಮೊದಲ ಹೆಜ್ಜೆ ಇಟ್ಟಿದ್ದೇವೆ. ಹಿಂದಿನಂತೆಯೇ, ನಮ್ಮ ಸಮುದಾಯದ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ” ಎಂದು ನಥಿಂಗ್‌ನ ಸಿಇಒ ಮತ್ತು ಸಹಸಂಸ್ಥಾಪಕ ಕಾರ್ಲ್‌ ಪೈ ಹೇಳಿದ್ದಾರೆ.
ನಥಿಂಗ್ ಇಯರ್ – ಧ್ವನಿಗೆ ಹೊಸ ರೂಪ
ಇಯರ್ (ಎ) ಅನ್ನು ಸುಧಾರಿಸಲಾಗಿದ್ದು, ಈ ಇಯರ್‌ ನಥಿಂಗ್‌ನ ಪಾರದರ್ಶಕ ಇಯರ್‌ಬಡ್ ವಿನ್ಯಾಸವನ್ನು ಉಳಿಸಿಕೊಂಡಿದೆ ಮತ್ತು ಇನ್ನಷ್ಟು ಸುಧಾರಿಸಿದೆ. ಇದು ಕಂಪನಿಯ ಈವರೆಗಿನ ಅತ್ಯುತ್ತಮ ಆಡಿಯೋ ಅನುಭವವನ್ನು ನೀಡುತ್ತದೆ. ಶ್ರೀಮಂತ ಧ್ವನಿಯು ಇದರಲ್ಲಿ ಲಭ್ಯವಿದ್ದು, ಕಾರ್ಯ ಕ್ಷಮತೆಯಲ್ಲೂ ಯಾವುದೇ ರಾಜಿ ಇಲ್ಲ.
ಧ್ವನಿಆಡಿಯೋ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ನಥಿಂಗ್ ಇಯರ್‌ ನಥಿಂಗ್‌ನ ಅತ್ಯಂತ ಆಧುನಿಕ ಡ್ರೈವರ್ ಸಿಸ್ಟಮ್ ಅನ್ನು ಅಳವಡಿಸಿ ಕೊಂಡಿದೆ ಮತ್ತು ಕಸ್ಟಮ್‌ 11 ಎಂಎಂ ಡೈನಾಮಿಕ್ ಡ್ರೈವರ್ ಇದೆ. ಇದರಿಂದ ಅತ್ಯಂತ ಅಸಲಿ ಮತ್ತು ಸ್ಪಷ್ಟ ಧ್ವನಿಯನ್ನು ಒದಗಿಸುವುದಕ್ಕಾಗಿ ಪ್ರೀಮಿಯಂ ಸಾಮಗ್ರಿಗಳನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ. ಒಟ್ಟಾರೆ ಸೌಂದರ್ಯಕ್ಕೆ ಮತ್ತು ಸ್ಪಷ್ಟ ಧ್ವನಿಗಾಗಿ ಸೆರಾಮಿಕ್ ಡಯಾಫ್ರಾಗ್ಮ್‌ ಅನ್ನು ನಾವು ಬಳಸಿದ್ದೇವೆ. ನಥಿಂಗ್‌ ಇಯರ್ (2) ದಲ್ಲಿ ಇದ್ದ ಡ್ಯೂಯೆಲ್ ಚೇಂಬರ್ ವಿನ್ಯಾಸವನ್ನು ಸುಧಾರಿಸಲಾಗಿದ್ದು, ಗಾಳಿ ಹರಿವನ್ನು ಸುಧಾರಿಸಲು ಎರಡು ಹೆಚ್ಚುವರಿ ವೆಂಟ್‌ಗಳನ್ನು ನೀಡಿದ್ದೇವೆ. ಇದರಿಂದ ಸ್ಪಷ್ಟ ಧ್ವನಿ ಕೇಳಿಸುತ್ತದೆ.
ಬ್ಲ್ಯೂಟೂತ್ ಮೂಲಕ ಹೈ ರೆಸೊಲ್ಯೂಶನ್ ಸ್ಟ್ರೀಮಿಂಗ್‌ಗೆ ಇಯರ್‌  5.0 ಮತ್ತು  ಕೊಡೆಕ್ ಅನ್ನು ಬೆಂಬಲಿಸುತ್ತದೆ. ಇದರಿಂದ ಶಕ್ತಿಯುತ ವಾದ ಶುದ್ಧ ಆಡಿಯೋ ಕೇಳಿಬರುತ್ತದೆ. ಕಿವಿಯು 1  24 /192  ಅನ್ನು  5.0 ಮೂಲಕ ತಲುಪಬಹುದಾಗಿದೆ ಮತ್ತು  ಯಲ್ಲಿ 990  ಹಾಗೂ 24 /96  ಫ್ರೀಕ್ವೆನ್ಸಿಗಳವರೆಗೆ ತಲುಪಬಹುದಾಗಿದೆ.
ನಥಿಂಗ್‌ನ ಸುಧಾರಿತ ಈಕ್ವಲೈಸರ್‌ ಹೆಚ್ಚಿನ ಕಸ್ಟಮೈಸೇಶನ್ ಸೌಲಭ್ಯವನ್ನು ನೀಡುತ್ತದೆ. ಇದಕ್ಕಾಗಿ ಸರಳ ಗ್ರಾಫಿಕಲ್ ಇಂಟರ್‌ಫೇಸ್ ಅನ್ನು ನಥಿಂಗ್ ಎಕ್ಸ್‌ ಆಪ್‌ನಲ್ಲಿ ಒದಗಿಸಲಾಗಿದೆ. ಕ್ಯೂ ಫ್ಯಾಕ್ಟರ್ ಮತ್ತು ಫ್ರೀಕ್ವೆನ್ಸಿ ಕಂಟ್ರೋಲ್ ಮೂಲಕ ಬಳಕೆದಾರರು ತಮ್ಮ ಶ್ರವಣ ಅನುಭವವನ್ನು ಸುಧಾರಿಸಿ ಕೊಳ್ಳಬಹುದು. ಅಷ್ಟೇ ಅಲ್ಲ, ಬೇರೆ ಬೇರೆ ಜಾನರ್‌ಗಳಿಗೆ ಪ್ರತ್ಯೇಕ ಪ್ರೊಫೈಲ್‌ಗಳನ್ನು ರಚಿಸಬಹುದು. ನಥಿಂಗ್ ಎಕ್ಸ್ ಆಪ್‌ನಲ್ಲಿ ಪರ್ಸನಲ್ ಸೌಂಡ್ ಪ್ರೊಫೈಲ್ ಅನ್ನು ರಚಿಸಿದಾಗ, ರೆಕಾರ್ಡ್ ಆದ ಡೇಟಾವು ಶ್ರವಣ ಪರೀಕ್ಷೆ ಫಲಿತಾಂಶಗಳನ್ನು ಆಧರಿಸಿ ಈಕ್ವಲೈಸರ್ ಲೆವೆಲ್‌ಗಳನ್ನು ಹೊಂದಿಸುವುದಕ್ಕೆ ನೈಜ ಸಮಯದಲ್ಲಿ ಹೊಂದಿಕೆಯಾಗುತ್ತದೆ.
ANCಇಯರ್‌ನಲ್ಲಿ ನಥಿಂಗ್‌ನ ಅತ್ಯಂತ ಪರಿಣಾಮಕಾರಿ ಮತ್ತು ಇಂಟಲಿಜೆಂಟ್ ಆದ ನಾಯ್ಸ್ ಕ್ಯಾನ್ಸಲಿಂಗ್ ಪವರ್ ಇರುತ್ತದೆ. ಹೊಸ ಸ್ಮಾರ್ಟ್‌ ಎಎನ್‌ಸಿ ಅಲ್ಗೊರಿಥಂ ಈಗ ಇಯರ್‌ಬಡ್ ಮತ್ತು ಕಿವಿಯ ಒಳಭಾಗದಲ್ಲಿ ನಾಯ್ಸ್ ಸೋರಿಕೆಯನ್ನು ಪತ್ತೆ ಮಾಡುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಹೆಚ್ಚಿನ ನಾಯ್ಸ್‌ ಕ್ಯಾನ್ಸಲಿಂಗ್ ಅನ್ನು ಸೇರಿಸುತ್ತದೆ. ಅಡಾಪ್ಟಿವ್ ಎಎನ್‌ಸಿ ಹೊಂದಿರುವ ಇಯರ್ ಹಿನ್ನೆಲೆ ಅಡೆತಡೆಗಳನ್ನೂ ನಿರ್ವಹಿಸುತ್ತದೆ. ಇದು 3 ನಾಯ್ಸ್ ಕ್ಯಾನ್ಸಲೇಶನ್ ಲೆವೆಲ್‌ಗಳಾದ ಹೈ, ಮೀಡಿಯಂ ಮತ್ತು ಲೋ ಅನ್ನು ಅನ್ವಯಿಸುತ್ತದೆ. 45 ಡಿಬಿ ಸಾಮರ್ಥ್ಯದಲ್ಲಿ ಇಯರ್‌ ನಾಯ್ಸ್ ಕ್ಯಾನ್ಸಲೇಶನ್ ಅನ್ನು ಒದಗಿಸುತ್ತದೆ ಮತ್ತು ಇಯರ್ (2) ದುಪ್ಪಟ್ಟು ಪ್ರಮಾಣದಲ್ಲಿ ಇರುತ್ತದೆ. 5000 ಹರ್ಟ್ಸ್‌ ವರೆಗೆ ಬ್ಯಾಂಡ್‌ವಿಡ್ತ್‌ ಹೊಂದಿರುವ ಇಯರ್‌ ಇನ್ನಷ್ಟು ಸವಾಲಿನ ಧ್ವನಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪತ್ತೆ ಮಾಡುತ್ತದೆ ಮತ್ತು ಕಡಿಮೆ ಮಾಡುತ್ತದೆ.
ಕಾರ್ಯಕ್ಷಮತೆಇಯರ್‌ನ ಕಾಂಪ್ಯಾಕ್ಟ್ ಕಸ್ಟಮ್ ಡ್ರೈವರ್‌ಗಳು ದೊಡ್ಡ ಬ್ಯಾಟರಿಯನ್ನು ಹೊತ್ತುಕೊಂಡಿದೆ. ಇದರಿಂದ ಇಯವರ್‌ (2) ಗೆ ಹೋಲಿಸಿದರೆ 25% ಹೆಚ್ಚು ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಒಮ್ಮೆ ಸಂಪೂರ್ಣ ಚಾರ್ಜ್‌ ಮಾಡಿದರೆ, ಚಾರ್ಜಿಂಗ್ ಕೇಸ್ ಸಹಿತ 40.5 ಗಂಟೆಗಳು ಅಥವಾ ನಾನ್ ಸ್ಟಾಪ್ ಪ್ಲೇಬ್ಯಾಕ್‌ನಲ್ಲಿ 8.5 ಗಂಟೆಗಳವರೆಗೆ ಆಲಿಸಬಹುದು. ಬೇಗ ಚಾರ್ಜಿಂಗ್ ಮಾಡುವುದಕ್ಕೆ ಇಯರ್‌ 2.5 ವ್ಯಾಟ್ ವೈರ್‌ಲೆಸ್ ಚಾರ್ಜಿಂಗ್ ಅನ್ನೂ ಬೆಂಬಲಿ ಸುತ್ತದೆ. ಹತ್ತು ನಿಮಿಷ ಫಾಸ್ಟ್‌ ಚಾರ್ಜ್ ಮಾಡಿದರೆ, ಕೇಸ್‌ನಲ್ಲಿದ್ದಾಗ ಹತ್ತು ಗಂಟೆಗಳವರೆಗೆ ಕೇಳಬಹುದು.
ಇಯರ್‌ನಲ್ಲಿ ನಥಿಂಗ್‌ನ ಅತ್ಯಂತ ಅತ್ಯಾಧುನಿಕ ಕ್ಲಿಯರ್ ವಾಯ್ಸ್‌ ಟೆಕ್ನಾಲಜಿ ಇದೆ. ಹೊಸ ಟಾಕ್ ಮೈಕ್ ಡಿಸೈನ್‌ನಿಂದಾಗಿ ಕಾಲ್‌ನಲ್ಲಿ ಮಾತನಾಡು ವಾಗ ಕಡಿಮೆ ಅಡೆತಡೆಯ ಅನುಭವ ಉಂಟಾಗುತ್ತದೆ. ಸ್ಟೆಮ್‌ ಮೇಲೆ ಹೊಸ ಹೆಚ್ಚುವರಿ ಏರ್‌ವೇ ಸೇರಿಸಲಾಗಿದೆ. ಇದರಿಂದ ಗಾಳಿಯು ಸುಲಭವಾಗಿ ಹಾದು ಹೋಗುತ್ತದೆ. ಇದರಿಂದ ಇಯರ್‌ (2) ಗೆ ಹೋಲಿಸಿದರೆ 60% ಅಡೆತಡೆ ಕಡಿಮೆಯಾಗುತ್ತದೆ.
ಡ್ಯೂಯೆಲ್ ಕನೆಕ್ಷನ್ ಮೂಲಕ ಬಳಕೆದಾರರು ಸುಲಭವಾಗಿ ಒಂದು ಸಾಧನದಿಂದ ಇನ್ನೊಂದು ಸಾಧನಕ್ಕೆ ಬದಲಿಸಿಕೊಳ್ಳಬಹುದು. ಲೋ ಲ್ಯಾಗ್ ಮೋಡ್‌ನಲ್ಲಿ, ಸಾಮಾನ್ಯ ಬಳಕೆಗೆ ಹೋಲಿಸಿದರೆ ಆಡಿಯೋ ಲ್ಯಾಗ್ ಅನ್ನು ಇಯರ್ ಕಡಿಮೆ ಮಾಡಿಕೊಳ್ಳಬಲ್ಲದು. ಸರಾಗವಾಗಿ ಗೇಮಿಂಗ್‌ ಅನುಭವಕ್ಕೆ ಇದು ಅತ್ಯಂತ ಮುಖ್ಯ ಸೌಲಭ್ಯವಾಗಿದೆ. ಪಿಂಚ್ ಕಂಟ್ರೋಲ್‌ಗಳಿದ್ದು, ಟ್ರ್ಯಾಕ್‌ಗಳನ್ನು ಸ್ಕಿಪ್ ಮಾಡಲು, ನಾಯ್ಸ್ ಕ್ಯಾನ್ಸಲೇಶನ್ ಮೋಡ್‌ಗಳನ್ನು ಆಯ್ಕೆ ಮಾಡಲು ಮತ್ತು ವಾಲ್ಯೂಮ್ ಹೊಂದಿಸಲು ಬಳಸಬಹುದಾಗಿದೆ.
ನಥಿಂಗ್ ಇಯರ್ (ಎ) – ಪ್ಲೇ ಮಾಡೋಣ ಬನ್ನಿಪ್ರತಿದಿನ ಪ್ರತಿ ಸನ್ನಿವೇಶಕ್ಕೂ ಹೊಂದುವಂತಹ ನಥಿಂಗ್ ಇಯರ್ (ಎ) ವಿಶೇಷವಾಗಿ ಸಂಗೀತ ಪ್ರಿಯರಿಗೆ ಇಷ್ಟವಾಗುತ್ತದೆ. ಆಕರ್ಷಕವಾದ ವಿನ್ಯಾಸ ಮತ್ತು ಶಕ್ತಿಶಾಲಿ ನಾಯ್ಸ್‌ ಕ್ಯಾನ್ಸಲಿಂಗ್ ತಂತ್ರಜ್ಞಾನವನ್ನು ಹೊಂದಿರುವ ಇದು ಪ್ರತಿ ದಿನದ ಆಡಿಯೋ ಸಂಗಾತಿಯಾಗಿ ಕೆಲಸ ಮಾಡುತ್ತದೆ.
ಲಂಡನ್‌ನಲ್ಲಿ ವಿನ್ಯಾಸಲಂಡನ್‌ನಲ್ಲಿ ವಿನ್ಯಾಸ ಮಾಡಿದ ಮತ್ತು ನಥಿಂಗ್‌ನ ವಿಶಿಷ್ಟ ವಿನ್ಯಾಸವನ್ನು ಹೊಂದಿರುವ ಇಯರ್ (ಎ) ಪಾರದರ್ಶಕ ವಿನ್ಯಾಸವನ್ನು ಹೊಂದಿದೆ. ಆದರೆ, ಹೊಸ ಬಬಲ್ ಡಿಸೈನ್ ಮತ್ತು ಹಳದಿ ಬಣ್ಣದ ಮೂಲಕ ಹೊಸ ಸ್ಪರ್ಶವನ್ನೂ ಪಡೆದುಕೊಂಡಿದೆ. ಸಾಫ್ಟ್ ಕಾಂಟೌರ್‌ಗಳು ಮತ್ತು ತೆಳ್ಳನೆಯ ಆಯತಾಕಾರದ ಫ್ರೇಮ್ ಅನ್ನು ಹೊಂದಿರುವ ಇಯರ್ (ಎ), ಜೇಬಿನಲ್ಲಿ ಉತ್ತಮವಾಗಿ ಹೊಂದಿಕೆಯಾಗುತ್ತದೆ.
ಹೆಲೋ, ಯೆಲ್ಲೋ!ಇಯರ್ (ಎ) ಯೆಲ್ಲೋ ನಥಿಂಗ್‌ನ ಮೊಟ್ಟ ಮೊದಲ ಹಳದಿ ಪ್ರಾಡಕ್ಟ್ ಆಗಿದೆ. ಸಾಮಾನ್ಯವಾಗಿ ಕಪ್ಪು ಮತ್ತು ಬಿಳುಪಿನಲ್ಲಿ ನಥಿಂಗ್ ಉತ್ಪನ್ನಗಳು ಇರುತ್ತಿದ್ದವು. ಇಯರ್ (ಎ) ವಿನ್ಯಾಸ ವೈಶಿಷ್ಟ್ಯವನ್ನು ಹಳದಿಯು ಅತ್ಯಂತ ಉತ್ತಮವಾಗಿ ಹೊಂದಿಕೆಯಾಗುವುದಷ್ಟೇ ಅಲ್ಲ, ಇದರ ಬಣ್ಣವು ನಥಿಂಗ್‌ನ ಪಾರದರ್ಶಕತೆ ಮೌಲ್ಯಕ್ಕೂ ಹೊಂದಿಕೆಯಾಗುತ್ತದೆ. ಈ ಶುದ್ಧ ವಿಧಾನವೇ ನಥಿಂಗ್‌ನ ಇಯರ್ (ಎ) ಗೆ ಹೊಸ ರೂಪವನ್ನು ನೀಡಿದೆ.
ಎಎನ್‌ಸಿನಥಿಂಗ್‌ನ ಹೊಸ ಸ್ಮಾರ್ಟ್‌ ಎಎನ್‌ಸಿ ಅಲ್ಗೊರಿಥಂ ಬಳಸಿಕೊಳ್ಳುವ ಇಯರ್ (ಎ) ಕಿವಿಯ ಒಳ ಭಾಗದಲ್ಲಿ ಶಬ್ದ ಸೋರಿಕೆಯನ್ನು ತಡೆಯುತ್ತದೆ ಮತ್ತು ಹೆಚ್ಚು ಹೆಚ್ಚು ನಾಯ್ಸ್‌ ಕ್ಯಾನ್ಸಲೇಶನ್ ಅನ್ನು ಉತ್ಪಾದನೆ ಮಾಡಿ, ಸಾಧ್ಯವಾದಷ್ಟೂ ಶಬ್ದವನ್ನು ತಡೆಯುತ್ತದೆ. ಇದರಲ್ಲಿರುವ ಅಡಾಪ್ಟಿವ್ ಎಎನ್‌ಸಿ ನಿಮ್ಮ ಪರಿಸರದಲ್ಲಿನ ಅಡೆತಡೆಗಳನ್ನು ಪತ್ತೆ ಮಾಡುತ್ತದೆ ಮತ್ತು ಸ್ವಯಂಚಾಲಿತವಾಗಿ ಹೈ, ಮೀಡಿಯಂ ಅಥವಾ ಲೋ ನಾಯ್ಸ್‌ ಕ್ಯಾನ್ಸಲೇಶನ್ ಲೆವೆಲ್‌ಗಳನ್ನು ಹೊಂದಿಕೆ ಮಾಡುತ್ತದೆ. 45 ಡಿಬಿಯಲ್ಲಿ ಇಯರ್ (ಎ) ಬಹುತೇಕ ಇಯರ್ (2) ಗಿಂತ ದುಪಟ್ಟು ನಾಯ್ಸ್ ಕ್ಯಾನ್ಸಲೇಶನ್ ಅನ್ನು ಒದಗಿಸು ತ್ತದೆ. ಇದು 5000  ವರೆಗೆ ಬ್ಯಾಂಡ್‌ವಿಡ್ತ್‌ ಹೊಂದಿದೆ. ಹೆಚ್ಚು ಸವಾಲಿನ ಧ್ವನಿಗಳನ್ನೂ ಇಯರ್ (ಎ) ಪತ್ತೆ ಮಾಡಿ, ಕಡಿಮೆ ಮಾಡಬಲ್ಲದು.
ಧ್ವನಿಇಯರ್ (ಎ) ಹೊಸ ಡ್ರೈವರ್‌ 2.5 ಪಟ್ಟು ಹೆಚ್ಚು ಪಾರದರ್ಶಕ ಪವರ್ ಅನ್ನು ನೀಡುತ್ತದೆ. ಇದು ನಥಿಂಗ್‌ನ ಗೇಮ್ ಚೇಂಜಿಂಗ್ ಡ್ಯೂಯೆಲ್ ಚೇಂಬರ್ ವಿನ್ಯಾಸದ ಪ್ರಯೋಜನವನ್ನು ಪೆದುಕೊಳ್ಳುತ್ತದೆ. ಪವರ್ ಡೆಲಿವರಿಯಲ್ಲಿ ಈ ಏರಿಕೆಯು ಇನ್ನೂ ಆಳವಾದ ಮತ್ತು ಹೆಚ್ಚು ಶಕ್ತಿಯುತ ಬೇಸ್ ಪರ್ಫಾ ರ್ಮೆನ್ಸ್‌ಗೆ ಕಾರಣವಾಗುತ್ತದೆ. ಧ್ವನಿ ಸೂಕ್ಷ್ಮಗಳನ್ನು ರಕ್ಷಿಸಲು, ಇಯರ್ (ಎ) ಹೈರೆಸೊಲ್ಯುಶನ್ ಆಡಿಯೋ ಸರ್ಟಿಫೈಡ್ ಆಗಿದೆ. ಬ್ಲ್ಯೂಟೂತ್ ಕನೆಕ್ಷನ್‌ ಗಳಲ್ಲಿ ಹೈ ರೆಸೊಲ್ಯುಶನ್ ಆಡಿಯೋವನ್ನು ಇದು ಸ್ಟ್ರೀಮ್ ಮಾಡಬಹುದಾಗಿದ್ದು, 24 /96  ನಲ್ಲಿ 990  ವರೆಗೆ ಕಳುಹಿಸಬಹುದು ಮತ್ತು ವ್ಯಾಪಕವಾಗಿ ಬೆಂಬಲ ಹೊಂದಿರುವ  ಕೊಡೆಕ್ ಅನ್ನು ಬ್ಲ್ಯೂಟೂತ್‌ನಲ್ಲಿ ಹೈ ರೆಸೊಲ್ಯುಶನ್ ಸ್ಟ್ರೀಮ್ ಮಾಡುವಾಗ ಬೆಂಬಲ ನೀಡುತ್ತದೆ.
ಕಾರ್ಯಕ್ಷಮತೆಇಯರ್ (ಎ) ಚಾರ್ಜಿಂಗ್ ಕೇಸ್‌ನಲ್ಲಿ 500  ಬ್ಯಾಟರಿ ಮತ್ತು ಇಯರ್‌ಬಡ್‌ನಲ್ಲಿ 46  ಬ್ಯಾಟರಿ ಇದೆ. ಒಂದು ಪೂರ್ತಿ ಚಾರ್ಜ್‌ ಮಾಡಿದಾಗ ಚಾರ್ಜಿಂಗ್ ಕೇಸ್‌ನಲ್ಲಿ 42.5 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಅನ್ನು ಪಡೆಯಬಹುದು. ಬೇಗ ಚಾರ್ಜಿಂಗ್ ಮಾಡುವುದಕ್ಕಾಗಿ ಇಯರ್ (ಎ) ಅನ್ನು ಹತ್ತು ನಿಮಿಷಗಳವರೆಗೆ ಫಾಸ್ಟ್ ಚಾರ್ಜ್‌ ಮಾಡಿದರೆ, ಹತ್ತು ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ (ಕೇಸ್ ಒಳಗೆ ಮತ್ತು ಎಎನ್‌ಸಿ ಆಫ್ ಮಾಡಿದರೆ) ಪಡೆಯ ಬಹುದು.
ಆಕ್ಟಿವಿಟಿಯನ್ನು ಸುಲಭವಾಗಿ ಬದಲಾವಣೆ ಮಾಡುವುದಕ್ಕೆ ಇಯರ್ (ಎ) ಅನ್ನು ಒಂದೇ ಬಾರಿಗೆ ಎರಡು ಸಾಧನಗಳಿಗೆ ಸಂಪರ್ಕ ಮಾಡಬಹುದು. ಇಯರ್ ರೀತಿಯಲ್ಲಿಯೇ, ಇಯರ್ (ಎ) ಕೂಡಾ ಲೋ ಲ್ಯಾಗ್ ಮೋಡ್ ಅನ್ನು ಹೊಂದಿದೆ. ಇದು ಸಾಮಾನ್ಯ ಬಳಕೆಗೆ ಹೋಲಿಸಿದರೆ ಆಡಿಯೋ ಲ್ಯಾಗ್ ಅನ್ನು ಕಡಿಮೆ ಮಾಡುತ್ತದೆ. ಆದರೆ, ಇದು ಸಂಪರ್ಕಗೊಂಡ ಸಾಧನದ ಕನೆಕ್ಷನ್ ಅನ್ನು ಅವಲಂಬಿಸಿರುತ್ತದೆ. ಪಿಂಚ್ ಕಂಟ್ರೋಲ್‌ಗಳಿದ್ದು, ಟ್ರ್ಯಾಕ್‌ ಗಳನ್ನು ಸ್ಕಿಪ್ ಮಾಡಲು, ನಾಯ್ಸ್ ಕ್ಯಾನ್ಸಲೇಶನ್ ಮೋಡ್‌ಗಳನ್ನು ಆಯ್ಕೆ ಮಾಡಲು ಮತ್ತು ವಾಲ್ಯೂಮ್ ಹೊಂದಿಸಲು ಬಳಸಬಹುದಾಗಿದೆ.
ಚಾಟ್‌ಜಿಪಿಟಿ ಇಂಟಿಗ್ರೇಶನ್‌ಕನ್ಸ್ಯೂಮರ್ ಟೆಕ್ ಉತ್ಪನ್ನಗಳಿಗೆ ಸುಧಾರಿತ ತಂತ್ರಜ್ಞಾನವನ್ನು ಒದಗಿಸಬೇಕು ಎಂಬ ಧ್ಯೇಯವನ್ನು ಹೊಂದಿರುವ ನಾವು ಎಐ ಅನ್ನು ಪರಿಚಯಿಸಿ ದ್ದೇವೆ ಮತ್ತು ಬಳಕೆದಾರರ ಅನುಭವವನ್ನು ಸರಳಗೊಳಿಸಿದ್ದೇವೆ ಮತ್ತು ಸುಧಾರಿಸಿದ್ದೇವೆ. ನಥಿಂಗ್ ಇಯರ್‌ಬಡ್‌ಗಳು, ನಥಿಂಗ್ ಒಎಸ್‌ಗೆ ಚಾಟ್‌ಜಿಪಿಟಿ ಅನ್ನು ನಥಿಂಗ್ ಅಳವಡಿಸಿದೆ. ತಾವು ಅತಿ ಹೆಚ್ಚು ಬಳಕೆ ಮಾಡುವ ಇಯರ್‌ಬಡ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳಿಂದ ನೇರವಾಗಿ ಜ್ಞಾನವನ್ನು ಪಡೆಯುವುದಕ್ಕೆ ಬಳಕೆದಾರರಿಗೆ ಇದು ಅನುವು ಮಾಡುತ್ತದೆ.
ಈ ಹೊಸ ಇಂಟಿಗ್ರೇಶನ್‌ನಿಂದಾಗಿ, ಇತ್ತೀಚಿನ ನಥಿಂಗ್ ಒಎಸ್ ಮತ್ತು ಚಾಟ್‌ಜಿಪಿಟಿ ಇನ್‌ಸ್ಟಾಲ್ ಮಾಡಿಕೊಂಡಿರುವ ಬಳಕೆದಾರರು, ತಮ್ಮ ನಥಿಂಗ್ ಫೋನ್‌ಗಳಲ್ಲಿ ಪಿಂಚ್ ಟು ಸ್ಪೀಕ್ ಸೌಲಭ್ಯವನ್ನು ಬಳಸಬಹುದು. ಇದರಲ್ಲಿ ಅತ್ಯಂತ ಜನಪ್ರಿಯವಾದ ಎಐ ಟೂಲ್‌ ಮೂಲಕ ನಥಿಂಗ್ ಇಯರ್ ಬಡ್‌ಗಳಿಂದ ಸಂವಹನ ನಡೆಸಬಹುದು. ಹೊಸದಾಗಿ ಬಿಡುಗಡೆಯಾದ ಇಯರ್ ಮತ್ತು ಇಯರ್(ಎ) ಕೂಡ ಈ ಸೌಲಭ್ಯವನ್ನು ಹೊಂದಿವೆ. ಚಾಟ್‌ ಜಿಪಿಟಿಗೆ ಸಿಸ್ಟಮ್ ಲೆವೆಲ್ ಎಂಟ್ರಿ ಪಾಯಿಂಟ್‌ಗಳನ್ನು ಅಳವಡಿಸುವ ಮೂಲಕ ನಥಿಂಗ್ ಒಎಸ್‌ನಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರ ಅನುಭವವನ್ನೂ ನಥಿಂಗ್ ಸುಧಾರಿಸಿದೆ. ಸ್ಕ್ರೀನ್‌ಶಾಟ್ ಹಂಚಿಕೊಳ್ಳುವುದು, ನಥಿಂಗ್ ಸ್ಟೈಲ್ ವಿಜೆಟ್‌ಗಳು ಇತ್ಯಾದಿ ಸೌಲಭ್ಯವೂ ಇದರಲ್ಲಿದೆ. ಈ ಬಿಡುಗಡೆಯ ಬಗ್ಗೆ ಇನ್ನಷ್ಟು ಮಾಹಿತಿಗಾಗಿ, . ಗೆ ಭೇಟಿ ನೀಡಿ.
ಬೆಲೆ ನಿಗದಿ ಮತ್ತು ಲಭ್ಯತೆಇಯರ್‌ ಬೆಲೆಯು 11,999 ರೂ ಆಗಿದೆ. ಏಪ್ರಿಲ್ 29 ರಿಂದ ಮಾರಾಟ ಆರಂಭವಾಗಲಿದೆ. ಇಯರ್ (ಎ) ಬೆಲೆ 7,999 ರೂ. ಆಗಿದ್ದು, ಏಪ್ರಿಲ್ 22 ರಿಂದ ಮಾರಾಟ ಆರಂಭವಾಗಲಿದೆ. ಇವು ಫ್ಲಿಪ್‌ಕಾರ್ಟ್‌, ಕ್ರೋಮಾ ಮತ್ತು ವಿಜಯ್‌ ಸೇಲ್ಸ್‌ನಲ್ಲಿ ಲಭ್ಯವಿರಲಿದೆ. ಇಯರ್ ಮತ್ತು ಇಯರ್ (ಎ) ವಿಶೇಷ ಆರಂಭಿಕ ದರ ರೂ. 10,999 ಮತ್ತು ರೂ. 5,999 ದರದಲ್ಲಿ (ಕೊಡುಗೆಗಳ ಜೊತೆಗೆ) ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರಲಿದೆ. ಸಂಪೂರ್ಣ ವಿವರಗಳು ಮತ್ತು ವೈಶಿಷ್ಟ್ಯಗಳ ಪಟ್ಟಿಯನ್ನು . ನಲ್ಲಿ ನೋಡಬಹುದು. ಎಲ್ಲ ಇತ್ತೀಚಿನ ಮಾಹಿತಿಯ ಬಗ್ಗೆ ಅಪ್‌ಡೇಟ್ ಹೊಂದಿರಲು, ದಯವಿಟ್ಟು ಇನ್‌ ಸ್ಟಾಗ್ರಾಮ್ ಮತ್ತು ಎಕ್ಸ್‌/ಟ್ವಿಟರ್‌ನಲ್ಲಿ ನಥಿಂಗ್ ಫಾಲೋ ಮಾಡಿ.