ಕೇರಳದಲ್ಲಿ ಎಚ್‌5ಎನ್‌1 ಹಕ್ಕಿಜ್ವರ ಭೀತಿ
ತಿರುವನಂತಪುರ:ಕೇರಳದಲ್ಲಿ ಎಚ್‌5ಎನ್‌1 ಹಕ್ಕಿಜ್ವರದ ಭೀತಿ ಹೆಚ್ಚುತ್ತಿದೆ. ಆಲಪ್ಪುಳ ಜಿಲ್ಲೆಯ 2 ಗ್ರಾಮಗಳಲ್ಲಿ ಮತ್ತಷ್ಟು ಬಾತುಕೋಳಿಗಳು ಸೋಂಕಿಗೆ ತುತ್ತಾಗಿವೆ. ಅವುಗಳಿಂದ ಮನುಷ್ಯ ರಿಗೂ ಸೋಂಕು ಹರಡುವ ಸಾಧ್ಯತೆ ಗಳಿರುವ ಹಿನ್ನೆಲೆಯಲ್ಲಿ ಹಕ್ಕಿಜ್ವರದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕೇರಳ ಆರೋಗ್ಯ ಸಚಿವಾ ಲಯ ಸಚಿವಾಲಯ ಮುಂದಾಗಿದೆ.
ಈಗಾಗಲೇ ಹಕ್ಕಿಜ್ವರದ ಸೋಂಕಿಗೆ ತುತ್ತಾಗಿರುವ 17 ಸಾವಿರಕ್ಕೂ ಅಧಿಕ ಬಾತುಕೋಳಿಗಳನ್ನು ಕೊಲ್ಲಲಾಗಿದೆ. ಪ್ರತೀ ಗ್ರಾ.ಪಂ. ಮಟ್ಟದಲ್ಲಿ ಸಮಿತಿ ಗಳನ್ನು ರಚಿಸಿ ಕೋಳಿ ಸಾಕಣೆದಾರರಿಗೆ ಹಕ್ಕಿ ಜ್ವರದ ಬಗ್ಗೆ ಗಮನ ಹರಿಸಲು ಸೂಚಿಸಲಾಗಿದೆ.
ತಮಿಳುನಾಡು ಕೂಡ ಈ ಬಗ್ಗೆ ಮುಂಜಾಗ್ರತೆ ಕೈಗೊಂಡಿದೆ. ಕೇರಳ ಗಡಿಯ ಎಲ್ಲ 12 ಚೆಕ್‌ಪೋಸ್ಟ್‌ ಗಳಲ್ಲಿ ಕಣ್ಗಾವಲು ಹೆಚ್ಚಿಸಿದೆ. ಅಧಿಕಾರಿಗಳು ಮಾಹಿತಿ ನೀಡಿ ಕೇರಳದಿಂದ ಕೋಳಿ, ಬಾತುಕೋಳಿಗಳನ್ನು ಸಾಗಿಸುವ ವಾಹನ ಗಡಿ ಪ್ರವೇಶ ನಿರ್ಬಂಧಿಸಲಾಗಿದೆ ಎಂದಿದ್ದಾರೆ.