ಶ್ರೀರಾಮನ ಫೋಟೋವಿರುವ ಪ್ಲೇಟ್​ಗಳಲ್ಲಿ ಬಿರಿಯಾನಿ ಸಪ್ಲೈ: ಓರ್ವ ವಶಕ್ಕೆ
ಜಹಾಂಗೀರ್‌ಪುರಿ:ಭಗವಂತ ಶ್ರೀರಾಮನ ಫೋಟೋವಿರುವ ಪೇಪರ್​ ಪ್ಲೇಟ್​ಗಳಲ್ಲಿ ಗ್ರಾಹಕರಿಗೆ ಬಿರಿಯಾನಿ ಬಡಿಸುತ್ತಿರುವ ಆಘಾತಕಾರಿ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಂಗಡಿ ಮಾಲೀಕನ ವಿರುದ್ಧ ವ್ಯಾಪಕವಾಗಿ ಛೀಮಾರಿ ಹಾಕಿದ್ದಾರೆ.
ದೆಹಲಿಯ ಜಹಾಂಗೀರ್‌ಪುರಿಯಲ್ಲಿರುವ ಬಿರಿಯಾನಿ ಜಾಯಿಂಟ್‌ನಲ್ಲಿ ಈ ಘಟನೆ ವರದಿಯಾಗಿದ್ದು, ಸದ್ಯ ಅಂಗಡಿ ಮಾಲೀಕನನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಭಗವಂತ ಶ್ರೀರಾಮನ ಚಿತ್ರಗಳನ್ನು ಒಳಗೊಂಡ ಪೇಪರ್​ ಪ್ಲೇಟ್​ಗಳಲ್ಲಿ ಗ್ರಾಹಕರಿಗೆ ಬಿರಿಯಾನಿ ಹಾಕಿಕೊಡುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದು, ಎಲ್ಲೆಡೆ ಹರಿಬಿಟ್ಟಿದ್ದಾರೆ. ಬಿರಿಯಾನಿಗಾಗಿ ಅಂಗಡಿಯ ಬಳಿ ಜನರು ಗುಂಪುಗಟ್ಟಿ ಸಾಲು ಸಾಲಾಗಿ ನಿಂತಿರುವುದು ಕಾಣಬಹುದು.
ಇದು ಮಾರ್ಕೆಟಿಂಗ್ ಉದ್ದೇಶಕ್ಕಾಗಿ ಹೀಗೆ ಮಾಡಿದ್ದಾರೆಯೇ ಅಥವಾ ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದ ಇದನ್ನು ಮಾಡಿದ್ದಾರೆಯೇ ಎಂಬುದನ್ನು ಸದ್ಯ ಪರಿಶೀಲಿಸುತ್ತಿದ್ದಾರೆ,