  : ಗೆಳೆಯನೊಂದಿಗೆ ಸರಸವಾಡುವಾಗ ಗುಪ್ತಾಂಗದಿಂದ ರಕ್ತ ಸ್ರಾವ, 23 ವರ್ಷದ ಯುವತಿ ದುರ್ಮರಣ
ಅಹಮದಾಬಾದ್‌:ತನ್ನ ಬಾಯ್‌ಫ್ರೆಂಡ್ ಜತೆ ಹೋಟೆಲ್‌ನ ಲೈಂಗಿಕ ಕ್ರಿಯೆ ನಡೆಸುವಾಗ ಗುಪ್ತಾಂಗದಲ್ಲಿ ರಕ್ತಸ್ರಾವ ಉಂಟಾಗಿ 23 ವರ್ಷದ ಯುವತಿಯೊಬ್ಬಳು ಮೃತಪಟ್ಟ ಘಟನೆ  ಗುಜರಾತ್‌ನ ನವಸಾರಿಯಲ್ಲಿ ( ) ನಡೆದಿದೆ. ಅಚ್ಚರಿಯೆಂದರೆ ಆಕೆ ನರ್ಸಿಂಗ್ ಪದವೀಧರೆ. ತಮ್ಮ ತಪ್ಪು ಬಹಿರಂಗೊಳ್ಳುತ್ತದೆ ಎಂಬ ಭಯದಿಂದ ಆಕೆ ತಕ್ಷಣದಲ್ಲೇ ಆಸ್ಪತ್ರೆಗೆ ಹೋಗದೇ ಪ್ರಾಣ ಕಳೆದುಕೊಂಡಿದ್ದಾಳೆ.
ಪೊಲೀಸರು ನೀಡಿದ  ಮಾಹಿತಿ ಪ್ರಕಾರ,  ನರ್ಸಿಂಗ್ ಪದವೀಧರೆಯಾಗಿದ್ದ ಯುವತಿ ತನ್ನ ಗೆಳೆಯನೊಂದಿಗೆ ಲಾಡ್ಜ್‌ತೆ ತೆರಳಿ ಲೈಂಗಿಕತೆಯಲ್ಲಿ ತೊಡಗಿದ್ದರು. ಈ ವೇಳೆ ಯುವತಿಯ ಗುಪ್ತಾಂಗದಿಂದ  ತೀವ್ರ ರಕ್ತಸ್ರಾವವಾಗಿತ್ತು. ಆಕೆ ತಕ್ಷಣ ಆಸ್ಪತ್ರೆಗೆ ಹೋಗದ ಕಾರಣ ರಕ್ತ ನಷ್ಟವಾಗಿ  ಪ್ರಜ್ಞಾಹೀನಳಾಗಿ ಮೃತಪಟ್ಟಿದ್ದಾಳೆ. ರಕ್ತ ಸ್ರಾವ ಉಂಟಾದ ತಕ್ಷಣ ಆತನ ಗೆಳೆಯನೂ ಗಾಬರಿಯಾಗಿದ್ದಾನೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಔಷಧಕ್ಕಾಗಿ ಆಲ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದಾನೆ. ಆದರೆ, ಅದು ಹೋಟೆಲ್‌ಗೆ ಬಂದು ತಲುಪವಷ್ಟರಲ್ಲಿ ಆಕೆ ಗಂಭೀರ ಸ್ಥಿತಿಗೆ ತಲುಪಿದ್ದಳು.
ತನ್ನ ಪ್ರೇಯಸಿಯ ಸ್ಥಿತಿಯ ಹೊರತಾಗಿಯೂ ಯುವಕ ತಕ್ಷಣದ ವೈದ್ಯಕೀಯ ಸಹಾಯ ಪಡೆಯಲು ವಿಫಲನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಡವಾಗಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು.
ಇದನ್ನೂ ಓದಿ:  : ಹೃದಯ ಚಿಕಿತ್ಸೆ ನಡೆಸಿದ ವೈದ್ಯ ಎಂಬಿಬಿಎಸ್ ಫೇಲ್‌; ರೋಗಿ ಸಾವು!
ಲೈಂಗಿಕ ಕ್ರಿಯೆಯ ಸಮಯದಲ್ಲಿ ಆಕೆಯ ಜನನಾಂಗದ ಪ್ರದೇಶಕ್ಕೆ ಗಂಭೀರ ಗಾಯವಾದ ಕಾರಣ ರಕ್ತಸ್ರಾವವಾಗಿದೆ ಎಂದು ಆಕೆಯ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ಪೊಲೀಸರು ಆಕೆಯ ಗೆಳೆಯನನ್ನು ಬಂಧಿಸಿದ್ದು, ನಿರ್ಲಕ್ಷ್ಯಕ್ಕೆ ಅವನನ್ನು ಹೊಣೆಗಾರನನ್ನಾಗಿ ಮಾಡಿದ್ದಾರೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 105 (ಕೊಲೆಗೆ ಕಾರಣವಲ್ಲದ ನರಹತ್ಯೆ) ಮತ್ತು 238 (ಸಾಕ್ಷ್ಯಗಳು ಕಣ್ಮರೆಯಾಗುವಂತೆ ಮಾಡುವುದು) ಅಡಿಯಲ್ಲಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಶೀಲ್ ಅಗರ್ವಾಲ್ ಖಚಿತಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದೆ.