 : ಮಹಾತ್ಮಾ ಗಾಂಧಿ ಕುರಿತ 20 ಕುತೂಹಲಕಾರಿ ಸಂಗತಿಗಳಿವು
ನಾವು ಬಾಪು, ರಾಷ್ಟ್ರಪಿತ (  ), ರಾಷ್ಟ್ರದ ಪಿತಾಮಹ ಎಂದೇ ಕರೆಯಲ್ಪಡುವ ಮೋಹನ್‌ದಾಸ್ ಕರಮಚಂದ್ ಗಾಂಧಿ ( ) ಅವರ ಜನ್ಮ ದಿನಾಚರಣೆಯ (  ) ಸಂಭ್ರಮದಲ್ಲಿದ್ದಾರೆ. ಅವರ ಆದರ್ಶ ತತ್ತ್ವಗಳಾದ ಅಹಿಂಸೆ, ಸತ್ಯಕ್ಕೆ ವಿಶ್ವವೇ ತಲೆ ಬಾಗಿತ್ತು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ ಅವಿಸ್ಮರಣೀಯ. ಜಾತಿ, ಬಣ್ಣ ಮತ್ತು ಧರ್ಮದ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ್ದ ಅವರು ಸರಳ ವ್ಯಕ್ತಿತ್ವದಿಂದಲೇ ಎಲ್ಲರ ಗಮನ ಸೆಳೆದಿದ್ದರು.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಜನವರಿ 30ರಂದು ಬಿರ್ಲಾ ಹೌಸ್‌ನಲ್ಲಿರುವ ಗಾಂಧಿ ಸ್ಮೃತಿಯಲ್ಲಿ ಹತ್ಯೆ ಮಾಡಲಾಯಿತು. ಆದ್ದರಿಂದ ಈ ದಿನವನ್ನು ಹುತಾತ್ಮರ ದಿನ ಅಥವಾ ಶಹೀದ್ ದಿವಸ್ ಎಂದು ಆಚರಿಸಲಾಗುತ್ತದೆ.1869ರ ಅಕ್ಟೋಬರ್ 2ರಂದು ಗುಜರಾತ್‌ನ ಪೋರಬಂದರ್‌ನಲ್ಲಿ ಜನಿಸಿದ ಗಾಂಧೀಜಿ ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಒಂದು ವರ್ಷದ ಕಾನೂನನ್ನು ಅಧ್ಯಯನ ನಡೆಸಿ ಬಳಿಕ ಲಂಡನ್ ನ ಯೂನಿವರ್ಸಿಟಿ ಕಾಲೇಜ್ ಗೆ ತೆರಳಿ ಅಲ್ಲಿ ತಮ್ಮ ಪದವಿಯನ್ನು 1891ರಲ್ಲಿ ಪೂರ್ಣಗೊಳಿಸಿದರು.
ಅನಂತರ ಅವರು ಇಂಗ್ಲೆಂಡ್‌ನ ಬಾರ್ ಕೌನ್ಸಿಲ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ದಕ್ಷಿಣ ಆಫ್ರಿಕಾಕ್ಕೆ ಹೋದ ಅವರಿಗೆ ವರ್ಣಭೇದ ನೀತಿಯನ್ನು ಅನುಭವಿಸಿದರು. ಬಳಿಕ ಭಾರತಕ್ಕೆ ಮರಳಿದ ಅವರು ಇಲ್ಲಿನ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ತೊಡಗಿಕೊಂಡರು.
   : ವಿದ್ಯಾರ್ಥಿಗಳಿಗಾಗಿ ಇಲ್ಲಿವೆ ಗಾಂಧಿ ಜಯಂತಿ ಕುರಿತ ವಿವಿಧ ಪದ ಮಿತಿಯ ಪ್ರಬಂಧಗಳು
ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯ ಸಂಭ್ರಮದಲ್ಲಿರುವಾಗ ಅವರ ಕುರಿತಾದ 20 ಕುತೂಹಲಕಾರಿ ಸಂಗತಿಗಳು ಇಲ್ಲಿವೆ.