ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಾಂಗ್‌ ಪ್ರಮಾಣವಚನ ಸ್ವೀಕಾರ
ಸಿಕ್ಕಿಂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರೇಮ್‌ ಸಿಂಗ್‌ ತಮಾಂಗ್‌ ಅವರಿಗೆ ಅಭಿನಂದನೆಗಳು. ಅಧಿಕಾರದ ಅವಧಿ ಉತ್ತಮವಾಗಿರಲಿ ಎಂದು ಹಾರೈಸುತ್ತೇನೆ. ಸಿಕ್ಕಿಂ ಪ್ರಗತಿಗಾಗಿ, ಅವರ (ತಮಾಂಗ್‌) ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
1994ರಿಂದ 2019ರ ವರೆಗೆ (25 ವರ್ಷ) ಅಧಿಕಾರದಲ್ಲಿದ್ದ, ಸಿಕ್ಕಿಂ ಡೆಮಾಕ್ರಟಿಕ್‌ ಫ್ರಂಟ್‌ (ಎಸ್‌ಡಿಎಫ್) ಕೇವಲ 1 ಸ್ಥಾನವನ್ನಷ್ಟೇ ಗೆದ್ದಿದೆ. ಇಲ್ಲಿನ ಏಕೈಕ ಲೋಕಸಭಾ ಕ್ಷೇತ್ರದಲ್ಲೂ ಗೆಲುವು ಸಾಧಿಸಿರುವ ಎಸ್‌ಕೆಎಂ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದೆ.