ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಓಂ ಬಿರ್ಲಾ, ಕೆ ಸುರೇಶ್​ ನಾಮಪತ್ರ ಸಲ್ಲಿಕೆ
ಹೀಗಾಗಿ ಎರಡು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಇಂದು 12 ಗಂಟೆಯವರೆಗೆ ಅವಕಾಶವಿತ್ತು. 72 ವರ್ಷಗಳ ನಂತರ ಮೂರನೇ ಬಾರಿಗೆ ಸ್ಪೀಕರ್ ಚುನಾವಣೆ ನಡೆಯುತ್ತಿದೆ.72 ವರ್ಷಗಳಲ್ಲಿ ಮೊದಲ ಬಾರಿಗೆ ಲೋಕಸಭಾ ಸ್ಪೀಕರ್​(  ) ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಎನ್​ಡಿಎ ಅಭ್ಯರ್ಥಿಯಾಗಿ ಓಂ ಬಿರ್ಲಾ( ) ಹಾಗೂ ಇಂಡಿಯಾ ಒಕ್ಕೂಟ ಅಭ್ಯರ್ಥಿಯಾಗಿ ಕೆ ಸುರೇಶ್​ ನಾಮಪತ್ರ ಸಲ್ಲಿಸಿದ್ದಾರೆ.
ಲೋಕಸಭೆ ಸ್ಪೀಕರ್ ಹುದ್ದೆಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಎನ್​ಡಿಎ ಮತ್ತು ಪ್ರತಿಪಕ್ಷ ಇಂಡಿಯಾ ಒಕ್ಕೂಟ ಒಮ್ಮತಕ್ಕೆ ಬಂದಿಲ್ಲ. ಹೀಗಾಗಿ ಎರಡು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಇಂದು 12 ಗಂಟೆಯವರೆಗೆ ಅವಕಾಶವಿತ್ತು. 72 ವರ್ಷಗಳ ನಂತರ ಮೂರನೇ ಬಾರಿಗೆ ಸ್ಪೀಕರ್ ಚುನಾವಣೆ ನಡೆಯುತ್ತಿದೆ.
ಈ ಹಿಂದೆ 1952 ಹಾಗೂ 1974ರಲ್ಲಿಯೂ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಸ್ವತಂತ್ರ ಭಾರತದಲ್ಲಿ 1952ರಲ್ಲಿ ಮೊಟ್ಟ ಮೊದಲ ಬಾರಿಗೆ ಜಿವಿ ಮಾಳವಂಕರ್ ಮತ್ತು ಶಂಕರ್ ಶಾಂತಾರಾಮ್ ನಡುವೆ ಸ್ಪೀಕರ್ ಹುದ್ದೆಗೆ ಚುನಾವಣೆ ಪೈಪೋಟಿ ಏರ್ಪಟ್ಟಿತ್ತು. ಆ ಬಳಿಕ 1976ರಲ್ಲಿ ತುರ್ತು ಪರಿಸ್ಥಿತಿ ಸಮಯದಲ್ಲಿ ಸ್ಪೀಕರ್ ಚುನಾವಣೆ ನಡೆದಿತ್ತು. ಆ ಸಮಯದಲ್ಲಿ ಬಲಿಗ್ರಾಮ ಭಗತ್ ಹಾಗೂ ಜಗನ್ನಾಥ ರಾವ್ ನಡುವೆ ಚುನಾವಣೆ ನಡೆದಿತ್ತು.
ಈಗ 2024ರಲ್ಲಿ ಮೂರನೇ ಬಾರಿಗೆ ಚುನಾವಣೆ ನಡೆಯಲಿದೆ. ಇಲ್ಲಿಯವರೆಗೆ ಪಕ್ಷ ಮತ್ತು ವಿರೋಧ ಪಕ್ಷಗಳ ಒಮ್ಮತದ ಮೇರೆಗೆ ಸ್ಪೀಕರ್ ನೇಮಕ ಮಾಡಲಾಗಿತ್ತು.