ಸರಣಿ ಸೇತುವೆ ಕುಸಿತ: 14 ಎಂಜಿನಿಯರ್ ಗಳ ಅಮಾನತು
ಪಾಟ್ನಾ:ಬಿಹಾರ ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಸರಣಿ ಸೇತುವೆ ಕುಸಿತದ ಘಟನೆಗಳಿಗೆ ಸಂಬಂಧಿಸಿ ಬಿಹಾರ ಸರ್ಕಾರ ಶುಕ್ರವಾರ 14 ಎಂಜಿನಿಯರ್ ಗಳನ್ನು ಅಮಾನತುಗೊಳಿಸಿದೆ.
ತನಿಖಾ ಸಮಿತಿಯು ತನ್ನ ವರದಿಯನ್ನು ಜಲಸಂಪನ್ಮೂಲ ಇಲಾಖೆಗೆ ಸಲ್ಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
“ಎಂಜಿನಿಯರ್ ಗಳು ನಿರ್ಲಕ್ಷ್ಯ ವಹಿಸಿದ್ದಾರೆ ಮತ್ತು ಮೇಲ್ವಿಚಾರಣೆ ನಿಷ್ಪ್ರಯೋಜಕವಾಗಿದೆ ಎಂದು ಕಂಡುಬಂದಿದೆ, ಇದು ರಾಜ್ಯದಲ್ಲಿ ಸಣ್ಣ ಸೇತುವೆ ಗಳು ಮತ್ತು ಸೇತುವೆಗಳು ಕುಸಿಯಲು ಮುಖ್ಯ ಕಾರಣವಾಗಿದೆ” ಎಂದು ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚೈತನ್ಯ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.
ಅಮಾನತುಗೊಂಡವರಲ್ಲಿ ಮೂವರು ಕಾರ್ಯನಿರ್ವಾಹಕ ಎಂಜಿನಿಯರ್ ಗಳು ಸೇರಿದ್ದಾರೆ.
ಕಳೆದ 17 ದಿನಗಳಲ್ಲಿ ಸಿವಾನ್, ಸರನ್, ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಮತ್ತು ಕಿಶನ್ಗಂಜ್ ಜಿಲ್ಲೆಗಳಲ್ಲಿ ಒಟ್ಟು 10 ಸೇತುವೆಗಳು ಕುಸಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.