ಪಂಜಾಬ್​​ನ ಶಿವಸೇನಾ ನಾಯಕನ ಮೇಲೆ ಹಲ್ಲೆ
ಘಟನೆಯ ಸಿಸಿಟಿವಿ ದೃಶ್ಯ ನೋಡಿದರೆ ಆರೋಪಿಯು ಆಸ್ಪತ್ರೆಯಿಂದ ನಿರ್ಗಮಿಸುವಾಗ ಥಾಪರ್‌ನನ್ನು ಕಾಲ್ನಡಿಗೆಯಲ್ಲಿ ಹಿಂಬಾಲಿಸಿದ್ದಾನೆ. ಆಗ ದಾಳಿಕೋರರಲ್ಲಿ ಒಬ್ಬ ಕತ್ತಿಯಿಂದ ಥಾಪರ್ ತಲೆಯ ಮೇಲೆ ಪದೇ ಪದೇ ಹೊಡೆಯಲು ಪ್ರಾರಂಭಿಸಿದ್ದು, ಥಾಪರ್ ಕೈ ಜೋಡಿಸಿ ಬಿಟ್ಟು ಬಿಡಿ ಎಂದು ಅಂಗಾಲಾಚುತ್ತಿರುವುದು ಕಂಡು ಬಂತು. ಮತ್ತೊಬ್ಬ ನಿಹಾಂಗ್ ಕತ್ತಿಯಿಂದ ದಾಳಿ ಮುಂದುವರಿಸಿದಾಗ ಶಿವಸೇನಾ ಪಂಜಾಬ್ ನಾಯಕ ಸಮತೋಲನ ಕಳೆದುಕೊಂಡು ಸ್ಕೂಟರ್ ಸಮೇತ ರಸ್ತೆಯಲ್ಲಿ ಬಿದ್ದಿದ್ದಾರೆ.
ಥಾಪರ್‌ನ ಏಕಾಂಗಿ ಬಂದೂಕುಧಾರಿ ರಸ್ತೆಬದಿಯಲ್ಲಿ ನಡೆದು ಮೂಕ ಪ್ರೇಕ್ಷಕನಂತೆ ನೋಡುತ್ತಿದ್ದ. ಆತ ಥಾಪರ್ ಅವರನ್ನು ರಕ್ಷಿಸುವುದಾಗಲೀ ಅಥವಾ ದಾಳಿಕೋರರನ್ನು ಬೆನ್ನಟ್ಟುವ ಪ್ರಯತ್ನವನ್ನೂ ಮಾಡಲಿಲ್ಲ.
ಪ್ರತ್ಯಕ್ಷದರ್ಶಿಗಳು ಗಂಭೀರವಾಗಿ ಗಾಯಗೊಂಡ ನಾಯಕನನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಸ್ಥಳೀಯ ದಯಾನಂದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಯಿತು.