ಜಗನ್ನಾಥ ರಥಯಾತ್ರೆಯಲ್ಲಿ ಇಬ್ಬರ ಸಾವು, 130 ಜನರಿಗೆ ಗಾಯ
ನವದೆಹಲಿ:ಒಡಿಶಾದಲ್ಲಿ ಜಗನ್ನಾಥ ರಥಯಾತ್ರೆಯ ಸಂದರ್ಭದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 130 ಜನರು ಗಾಯಗೊಂಡಿ ದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಪುರಿಯಲ್ಲಿ ರಥಯಾತ್ರೆಯ ಸಮಯದಲ್ಲಿ, ಬೋಲಾಂಗೀರ್ ಜಿಲ್ಲೆಯ ನಿವಾಸಿ ಕಾಲ್ತುಳಿತದಂತಹ ಪರಿಸ್ಥಿತಿಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೋರ್ವ ಭಕ್ತ ರಥದ ಚಕ್ರಗಳ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ವರದಿ ಮಾಡಿದ್ದಾರೆ.