ಭಾರತ ಮೂಲದ ಇಂಜಿನ್ ಎಂಆರ್ ಓ ವ್ಯವಹಾರದ ಆರಂಭಕ್ಕೆ ಆಕ್ವಸ್ ನೊಂದಿಗೆ‌ ಪಾಲುದಾರಿಕೆಗೆ ಸಹಿ ಹಾಕಿದ ಮೆಗೆಲ್ಲನ್ ಏರೋಸ್ಪೇಸ್
ಫಾರ್ಮ್ಬೋರೋ ಅಂತಾರಾಷ್ಟ್ರೀಯ ಏರ್ ಶೋ, ಯುನೈಟೆಡ್ ಕಿಂಗ್ಡಮ್-25 ಜುಲೈ 2024- ಮೆಗ್ಗೆಲ್ಲೆನ್ ಏರೋಸ್ಪೇಸ್ ಕಾರ್ಪೊರೇಷನ್ (“ಮೆಗ್ಗೆಲ್ಲೆನ್”), ಕರ್ನಾಟಕದ ಬೆಳಗಾವಿಯಲ್ಲಿ ಆ್ಯಕ್ವೆಸ್ ವಿಶೇಷ ಆರ್ಥಿಕ ವಲಯದಲ್ಲಿ ಜಂಟಿ ಮಾಲೀಕತ್ವದ ಇಂಜಿನ ಎಆರ್ ಓ ವ್ಯವಹಾರಕ್ಕಾಗಿ ಅಭಿವೃದ್ಧಿ ವ್ಯವಹಾರ ಯೋಜನೆಯನ್ನು ಆವಿಷ್ಕರಿಸಲು ಆಕ್ವೆಸ್ ಪ್ರೈವೇಟ್ ಲಿಮಿಟೆಡ್ (ಆಕ್ವೆಸ್”) ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಕಳೆದ ಒಂದು ದಶಕದಲ್ಲಿ ಮೇಕ್ ಇನ್ ಇಂಡಿಯಾ, ಉಡಾನ್ ಯೋಜನೆದಂತಹ ಉಪಕ್ರಮಗಳು, ಖಾಸಗಿ ವಲಯ ಗಳ ಅಭಿವೃದ್ಧಿ ಮತ್ತು ವಾಯು ಸಂಚಾರದ ಹೆಚ್ಚಳದಿಂದಾಗಿ ಭಾರತದ ಏರೋಸ್ಪೇಸ್ ವಲಯವು ಪ್ರಗತಿಯನ್ನು ಕಂಡಿದೆ. ಭಾರತವು ವಾಯು ಪ್ರಯಾಣದ ಬೇಡಿಕೆ ಹೆಚ್ಚಾಗಿದೆ. ಇದು ದೇಶವನ್ನು ಅತಿ-ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಮಾರುಕಟ್ಟೆಗಳಲ್ಲಿ ಒಂದನ್ನಾಗಿಸಿದೆ.
ಭಾರತದಲ್ಲಿ ಏರೋಸ್ಪೇಸ್ ಮತ್ತು ವಾಯುಯಾನದ ಗಣನೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ, ಎಂಆರ್ ಓ ವಲಯವು ಗಮನಾರ್ಹ ಅಭಿವೃದ್ಧಿಗೆ ಸಜ್ಜಾಗಿದೆ. ಈ ಒಪ್ಪಂದದ ನಿಯಮಗಳ ಅಡಿಯಲ್ಲಿ, ಮೆಗೆಲ್ಲನ್ ಮತ್ತು ಆಕ್ವೆಸ್ ಜೊತೆಯಾಗಿ ವ್ಯಾಪಾರ, ವಾಣಿಜ್ಯ ಮತ್ತು ಮಿಲಿಟರಿ ವಿಮಾನ ಎಂಜಿನ್ ಎಂಆರ್ ಓ ಸೇವೆಗಳ ಮಾರುಕಟ್ಟೆ ಯನ್ನು ಮೌಲ್ಯಮಾಪನ ಮಾಡಲು, ಈ ಉತ್ತೇಜಕ ಹೊಸ ಯೋಜನೆಯ ಮೂಲಕ  ವಲಯಕ್ಕೆ ನಮ್ಮ ಅಸ್ತಿತ್ವ ದಲ್ಲಿರುವ ಪಾಲುದಾರಿಕೆಯನ್ನು ವಿಸ್ತರಿಸುವ ಸಮಗ್ರ ವ್ಯಾಪಾರ ಯೋಜನೆಯನ್ನು ಅಭಿವೃದ್ಧಿಪಡಿಸಲು ಒಟ್ಟಾಗಿ ಕೆಲಸ ಮಾಡಲಿವೆ.
2008 ರಲ್ಲಿ, ಆಕ್ವೆಸ್ ಮತ್ತು ಮೆಗೆಲ್ಲನ್ ಜಂಟಿಯಾಗಿ ಏರೋಸ್ಪೇಸ್ ಪ್ರೊಸೆಸಿಂಗ್ ಇಂಡಿಯಾ (ಎಪಿಐ), ಜಂಟಿ ಉದ್ಯಮ (ಜೆವಿ) ಅನ್ನು ಸ್ಥಾಪಿಸಿದ್ದರು. ಇದು ಭಾರತದಲ್ಲಿ ಮೊದಲ ಏರ್‌ಬಸ್ ಮತ್ತು ಬೋಯಿಂಗ್ ಇಂದ ಅನುಮೋದನೆ ಪಡೆದ ಸ್ಥಾವರವಾಗಿದ್ದು, ಆ ಸಮಯದಲ್ಲಿ ದೇಶದಲ್ಲಿ ಸುಲಭವಾಗಿ ಲಭ್ಯವಿಲ್ಲದ ಓಇಎಂಗಳಿಗೆ ಏರೋಸ್ಪೇಸ್ ಮೇಲ್ಮೈ ಚಿಕಿತ್ಸೆಗಳನ್ನು ಒದಗಿಸಿತು. ಈ ಯಶಸ್ವಿ ಪ್ರಯೋಗವು ಕಳೆದ 15+ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಾಗಿದೆ ಮತ್ತು ಭಾರತವು ಈಗ ವರ್ಷಕ್ಕೆ 1.5 ಮಿಲಿಯನ್‌ಗಿಂತಲೂ ಹೆಚ್ಚು ಭಾಗಗಳನ್ನು ಸಂಸ್ಕರಿಸುವ ಮಟ್ಟಕ್ಕೆ ಬೆಳೆದಿದೆ ಇದು ಜಾಗತಿಕ ಗ್ರಾಹಕರಿಗೆ ವಿನೂತನ ಹಾಗೂ ವೆಚ್ಚ-ಪರಿಣಾಮಕಾರಿ ಪರಿಹಾರಗಳನ್ನು ನೀಡುವ ಆಕ್ವೆಸ್/ಮೆಗಲ್ಲನ್ ಸಂಬಂಧದ ಭದ್ರ ಅಡಿಪಾಯಕ್ಕೆ ಇದು ಸಾಕ್ಷಿಯಾಗಿದೆ.
ಹೊಸ ಒಪ್ಪಂದದ ಕುರಿತು ಮಾತನಾಡಿದ ಆಕ್ವಸ್ ನ ಅಧ್ಯಕ್ಷ ಮತ್ತು ಸಿಇಓ ಅರವಿಂದ ಮೆಲ್ಲಿಗೆರಿ, “ ಕಳೆದ 15 ವರ್ಷಗಳಿಂದ ನಾವು ಮೆಗಲ್ಲನ್ ಏರೋ ಸ್ಪೇಸ್ ನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ ಮತ್ರು ಇಂದು ಆಕ್ವೆಸ್ ಎಸ್ ಇ ಝೆಡ್ ಅಲ್ಲಿ ಭಾರತದ ಹೊಡ ಆವಿಷ್ಕಾರಿ ಮತ್ತು ಪರಿಣಾಮ ಕಾರಿ ವಿಮಾನಯಾನ ಪರಿಸರವನ್ನು ನಿರ್ಮಿಸಲು ಕೈಜೋಡಿಸಿದ್ದೇವೆ. ನಾವು ಭಾರತದ ವೇಗವಾಗಿ ಬೆಳೆಯುತ್ತಿರುವ ನಾಗರಿಕ ಮತ್ತು ಸೇನಾ ವಿಮಾ ನಯಾನ ಉದ್ಯಮದ ವ್ಯವಾಹರಕ್ಕೆ ಇನ್ನಷ್ಟು ಸೇವೆ ಒದಗಿಸಲು ಇನ್ನಷ್ಟು ಅವಕಾಶಗಳನ್ನು ಆವಿಷ್ಕರಿಸಲಿದ್ದೇವೆ. ಈ ಸೌಲಭ್ಯವು ಇಂಜಿನ್ ಗಳನ್ನು ಬಿಚ್ಚಲು, ಮರುನಿರ್ಮಾಣ ಮಾಡಲು ಮತ್ತು ಪರೀಕ್ಷಿಸುವ ಸಾಮರ್ಥ್ಯವನ್ನು ಒದಗಿಸಲಿದೆ ಎಂಬುದು ನಮ್ಮ ವಿಶ್ವಾಸವಾಗಿದೆ. ಈ ಜೆವಿ ಆಕ್ವೆಸ್ ಎಸ್ ಇ ಝೆಡ್ ಅಲ್ಲಿ ಸಂಯೋಜಿತ ಏರೋಸ್ಪೇಸ್ ಉತ್ಪಾದಕ ಪರಿಸರವನ್ನು ಒದಗಿಸಲಿದೆ. ಮೆಗೆಲ್ಲನ ನ ಜಾಗತಿಕ ಉಪಸ್ಥಿತಿಯೊಂದಿಗೆ ಕೈಜೋಡಿಸಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರ ಮತ್ತು ಸೇನಾ ವಿಮಾನಯಾನ ಬಳಕೆದಾರರಿಗೆ ಉತ್ತಮವಾಗಿ ಹೊಂದಿಕೆಯಾಗುವ ಇಂಜಿನ್ ಎಂಆರ್ ಓ ಸೇವೆಗಳನ್ನು ಒದಗಿಸುವ ವಿಶ್ವಾಸವಿದೆ” ಎಂದಿದ್ದಾರೆ.
ಮೆಗಲ್ಲನೆ ಏರೋಸ್ಪೇಸ್ ನ ಅಧ್ಯಕ್ಷ ಮತ್ರು ಸಿಇಓ ಫಿಲಿಪ್ ಅಂಡರ್ ವುಡ್ ಮಾತನಾಡಿ “ವಿಮಾನಯಾನ ಮತ್ತು ಏರೋಸ್ಪೇಸ್ ಪ್ರಗತಿಯೊಂದಿಗೆ ಈ ಸಂಭಾವ್ಯ ಇಂಜಿನ್ ಎಂಆರ್ ಓ ಸಾಹಸವು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ದರದ ಲಾಭಗಳು, ಮತ್ತು ಉಪಕ್ರಮಗಳ ಮೇಲೆ ಗಮನ ಕೇಂದ್ರೀಕರಿಸಲಿದೆ. ಮೆಗಲ್ಲನ್ ವಿಮಾನನಿಲ್ದಾಣದ ಇಂಜಿನ್ ರಂಆರ್ ಓ ದಲ್ಲಿ ದೇಶದ ಪರಿಣತಿಯನ್ನು ಪ್ರಚಾರ ಮಾಡಲಿದೆ. ಇದು ಎಂಆರ್ ಓ ಗ್ರಾಹಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮತ್ತು ತಜ್ಞರ ಗುಣಮಟ್ಟದ ಪರಿಹಾರವನ್ನು ಒದಗಿಸಲು” ಎಂದರು.