ಟಾಟಾನಗರ ಬಳಿ ರೈಲು ಅಪಘಾತ: ಇಬ್ಬರು ಪ್ರಯಾಣಿಕರ ಸಾವು, 20 ಮಂದಿಗೆ ಗಾಯ
ಮುಂಬೈ:ಮಂಗಳವಾರ ಜಾರ್ಖಂಡ್‌ನ ಟಾಟಾನಗರ ಬಳಿ ದೊಡ್ಡ ರೈಲು ಅಪಘಾತ ಸಂಭವಿಸಿದೆ.
ಹೌರಾದಿಂದ ಮುಂಬೈಗೆ ಹೋಗುತ್ತಿದ್ದ 12810 ಹೌರಾ- ಮೇಲ್‌ನ ಹಲವಾರು ಕೋಚ್‌ಗಳು ಟಾಟಾನಗರ ಬಳಿಯ ಚಕ್ರಧರಪುರದಲ್ಲಿ ಹಳಿ ತಪ್ಪಿದವು. ಅವಘಡದಲ್ಲಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿ, 20 ಮಂದಿ ಗಾಯಗೊಂಡಿದ್ದಾರೆ.
ಪರಿಹಾರ ಮತ್ತು ರಕ್ಷಣೆಗಾಗಿ ಪಾಟ್ನಾದಿಂದ  ತಂಡವನ್ನು ಕಳುಹಿಸಲಾಗಿದೆ. ರೈಲ್ವೇ ಅಪಘಾತದಿಂದಾಗಿ ಹಲವು ರೈಲುಗಳು ರದ್ದಾಗಿವೆ, ಹಲವು ರೈಲುಗಳನ್ನು ಅಲ್ಪಾವಧಿಗೆ ನಿಲ್ಲಿಸಲಾಗಿದೆ.
ಮಾಹಿತಿಯ ಪ್ರಕಾರ, ಈ ಹಿಂದೆ ರಾಜ್‌ಖರ್ಸ್ವಾನ್ ವೆಸ್ಟ್ ಔಟರ್ ಮತ್ತು ಬಾರಾಬಾಂಬು ನಡುವೆ ಗೂಡ್ಸ್ ರೈಲು ಹಳಿತಪ್ಪಿತ್ತು, ಅದರ ವ್ಯಾಗನ್‌ಗಳು ಇನ್ನೂ ಟ್ರ್ಯಾಕ್‌ನಲ್ಲಿದ್ದವು. ಹೌರಾ-ಮುಂಬೈ ಮೇಲ್ ಮತ್ತೊಂದು ಟ್ರ್ಯಾಕ್‌ನಿಂದ ಬರುತ್ತಿತ್ತು ಮತ್ತು ಆ ವ್ಯಾಗನ್‌ಗಳಿಗೆ ಡಿಕ್ಕಿ ಹೊಡೆದ ನಂತರ ಅದರ ಬೋಗಿಗಳೂ ಹಳಿತಪ್ಪಿದವು.
ಈ ರೈಲು ಅಪಘಾತದಿಂದ ಅಲ್ಲಿ ಸಿಲುಕಿರುವ ಜನರನ್ನು ಬಸ್‌ಗಳ ಮೂಲಕ ಹತ್ತಿರದ ಮತ್ತೊಂದು ರೈಲು ನಿಲ್ದಾಣಕ್ಕೆ ಕಳುಹಿಸಲಾಗಿದೆ. ಹೌರಾ-ಕಾಂತಬಾಜಿ ಎಕ್ಸ್‌ಪ್ರೆಸ್, ಖರಕ್‌ಪುರ-ಧನ್‌ಬಾದ್ ಎಕ್ಸ್‌ಪ್ರೆಸ್, 12021/12022 ಹೌರಾ ಬಾರ್ಬಿಲ್ ಎಕ್ಸ್‌ಪ್ರೆಸ್ ಈ ಮಾರ್ಗದಲ್ಲಿ ಓಡುವುದನ್ನು ರದ್ದು ಗೊಳಿಸಬೇಕಾಗಿತ್ತು, ಆದರೆ ಕೆಲವು ರೈಲುಗಳನ್ನು ಮಧ್ಯದಲ್ಲಿ ನಿಲ್ಲಿಸಬೇಕಾಯಿತು.