ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಂಡರ್‌ಲಾದಲ್ಲಿ 2 ಟಿಕೆಟ್‌ ಖರೀದಿಸಿದರೆ 1 ಟಿಕೆಟ್‌ ಉಚಿತವಾಗಿ ಪಡೆಯಿರಿ
ಬೆಂಗಳೂರು– ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ ಹಾಲಿಡೇಸ್, ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿಶೇಷ ಕೊಡುಗೆ ಯನ್ನು ಆಗಸ್ಟ್ 6 ರಿಂದ ಬೆಂಗಳೂರು ಪಾರ್ಕ್‌ನಲ್ಲಿ ಘೊಷಿಸಿದೆ.
* ಸಾರ್ವಜನಿಕರು ಆನ್‌ಲೈನ್‌ನಲ್ಲಿ “2 ಟಿಕೆಟ್‌ ಖರೀದಿಸಿದರೆ 1 ಟಿಕೆಟ್‌ನನ್ನು ಉಚಿತವಾಗಿ ಪಡೆಯಬಹುದು. ಆಗಸ್ಟ್ 6 ರಿಂದ ಆನ್‌ಲೈನ್‌ ಬುಕ್ಕಿಂಗ್‌ ಆರಂಭಗೊಂಡು, ಆಗಸ್ಟ್‌ 15 ರಿಂದ 19ರ ಅವಧಿಯಲ್ಲಿ ಪಾರ್ಕ್‌ಗೆ ಭೇಟಿ ನೀಡಬಹುದು. ಇನ್ನು, ನೇರವಾಗಿ ಪಾರ್ಕ್‌ಗೆ ತೆರಳಿ ಟಿಕೆಟ್‌ ಖರೀದಿಸುವವರಿಗೆ 3 ಟಿಕೆಟ್‌ ಖರೀದಿಸಿದರೆ, 1 ಉಚಿತ ಟಿಕೆಟ್‌ ಪಡೆಯಬಹುದು. ಆಫ್‌ಲೈನ್‌ನಲ್ಲಿ ಖರೀದಿಸುವ ಕೊಡುಗೆಯು ಆಗಸ್ಟ್‌ 6 ರಿಂದ 31ರ ವರೆಗೆ ಇರಲಿದೆ, ಬೆಳಗ್ಗೆ 11 ಗಂಟೆ ಮುಂಚಿತವಾಗಿ ಟಿಕೆಟ್‌ ಖರೀದಿಸಿದವರಿಗೆ ಮಾತ್ರ ಈ ಕೊಡುಗೆ ಅನ್ವಯವಾಗಲಿದೆ.
ವಂಡರ್‌ಲಾ ಹಾಲಿಡೇಸ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲು ವಂಡರ್‌ಲಾ ಪ್ರತಿಯೊಬ್ಬರಿಗೂ ಈ ಕೊಡುಗೆಯನ್ನು ನೀಡಿದೆ. ಇದರ ಜೊತೆಗೆ, ಸ್ವಾತಂತ್ರ್ಯೋತ್ಸವ ನಿಮನ್ನು ಇನ್ನಷ್ಟು ವಿಶೇಷಗೊಳಿಸಲು ಪಾರ್ಕ್ ರೆಸ್ಟೊರೆಂಟ್‌ಗಳಲ್ಲಿ ತ್ರಿವರ್ಣ ಧ್ವಜದ ಮೆನುವನ್ನು ನೀಡಿದೆ. ಇದರಲ್ಲಿ ವಿಶೇಷ ಸ್ವಾತಂತ್ರ್ಯ ದಿನದ ಥಾಲಿ, ಸೇರಿದಂತೆ ವಿವಿಧ ರೀತಿಯ ಆಹಾರವೂ ಲಭ್ಯವಿದೆ. ಅಷ್ಟೇ ಅಲ್ಲದೆ, ಬೆಳಗ್ಗಿನ ಸಮಯದಲ್ಲಿ ಸ್ವಾತಂತ್ರ್ಯ ದಿನದ ಪರೇಡ್ ಹಾಗೂ ವಾರಾಂತ್ಯದಲ್ಲಿ ವಿಶೇಷ  ಪ್ರದರ್ಶನವನ್ನು ಆನಂದಿಸಬಹುದು, ಈ ಮೂಲಕ ಪಾರ್ಕ್‌ನಲ್ಲಿ ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತದೆ.
ವಂಡರ್‌ಲಾ ಆನ್‌ಲೈನ್ ://../ ಪೋರ್ಟಲ್ ಮೂಲಕ ಮುಂಗಡ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಅಥವಾ ಗ್ರಾಹಕರು ನೇರವಾಗಿ ಪಾರ್ಕ್ ಕೌಂಟರ್‌ಗಳಿಗೆ ತೆರಳಿ ಟಿಕೆಟ್‌ಗಳನ್ನು ಖರೀದಿಸಬಹುದು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:* ಬೆಂಗಳೂರು ಪಾರ್ಕ್: +91 80372 30333 ಅಥವಾ +91 80350 73966