ಸಾವಂತ್‌ ಸೆ.9ರವರೆಗೆ ಎನ್‌ಸಿಬಿ ಕಸ್ಟಡಿಗೆ
ಮುಂಬೈ:ಬಾಲಿವುಡ್‌ ಡ್ರಂಗ್ಸ್‌ ದಂಧೆ ಪ್ರಕರಣದಲ್ಲಿ ಬಂಧಿಸಲಾಗಿರುವ ನಟ ಸುಶಾಂತ್ ಸಿಂಗ್ ಆಪ್ತ ಸಿಬ್ಬಂದಿ ದೀಪೇಶ್ ಸಾವಂತ್‌ನನ್ನು ಮುಂಬೈ ನ್ಯಾಯಾಲಯ ಸೆ.9ರವರೆಗೆ ಎನ್‌ಸಿಬಿ ಕಸ್ಟಡಿಗೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಂತ್‌ನನ್ನು ಮಾದಕವಸ್ತು ನಿಯಂತ್ರಣ ದಳದ ಅಧಿಕಾರಿಗಳು (ಎನ್‌ಸಿಬಿ)ಶನಿವಾರ ಬಂಧಿಸಿದ್ದರು. ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಸಾವಂತ್‌ನನ್ನು ಎನ್‌ಸಿಬಿ ಕಸ್ಟಡಿಗೆ ನೀಡಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಿಯಾ ಚಕ್ರವರ್ತಿ ಸಹೋದರ ಶೌವಿಕ್ ಚಕ್ರವರ್ತಿ, ಸುಶಾಂತ್ ಸಿಂಗ್ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಂಡ, ಸಾವಂತ್ ಮತ್ತು ಡ್ರಗ್ ಡೀಲರ್ ಜಯಿದಾ ವಿಲಾತ್ರ ಸೇರಿ ಏಳು ಮಂದಿಯನ್ನು ಬಂಧಿಸಿದೆ. ತನಿಖೆ ಮುಂದುವರಿದಿದೆ.
