ಆಕ್ಸ್‌ಫರ್ಡ್ ಕೊರೋನಾ ಲಸಿಕೆ ಪ್ರಯೋಗ ಸ್ಥಗಿತ
ಚೆನ್ನೈ :ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸುತ್ತಿರುವ ಕರೋನವೈರಸ್ ಲಸಿಕೆಗಾಗಿ ಭಾರತದಲ್ಲಿ ಪ್ರಯೋಗ ಗಳನ್ನು ನಡೆಸುತ್ತಿದ್ದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಇದೀಗ ಲಸಿಕೆಯ ಕ್ಲಿನಿಕಲ್ ಯೋಗಗಳನ್ನು ನಿಲ್ಲಿಸಿದೆ.
ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಜಿಸಿಐ) ಹೆಚ್ಚಿನ ಸೂಚನೆ ನೀಡುವವರೆಗೆ ಲಸಿಕೆ ಪ್ರಯೋಗಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿದು ಬಂದಿದೆ. ಆಕ್ಸ್‌ಫರ್ಡ್‌ನಲ್ಲಿ ಲಸಿಕೆ ಪ್ರಯೋಗ ಮಾಡಿದ ನಂತರ ಕೆಲವು ಸ್ವಯಂ ಸೇವಕರಿಗೆ ಡೋಸೇಜ್ ನೀಡೀದ ನಂತರ ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ಎರಡು ದಿನಗಳ ನಂತರ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಈ ಹೇಳಿಕೆಯನ್ನು ನೀಡಿದೆ.