ಈರುಳ್ಳಿ ರಫ್ತಿಗೆ ನಿಷೇಧ ಹೇರಿದ ಸರ್ಕಾರ
ನವದೆಹಲಿ :ಏಪ್ರಿಲ್-ಜುಲೈ ಅವಧಿಯಲ್ಲಿ ರಫ್ತು ಶೇ.30 ರಷ್ಟು ಹೆಚ್ಚಾದ ಕಾರಣ ಸರ್ಕಾರವು ಈರುಳ್ಳಿ ರಫ್ತು ನಿಷೇಧಿಸಿದೆ.ಎಲ್ಲಾ ಬಗೆಯ ಈರುಳ್ಳಿಯನ್ನು ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ ಎಂದು ವಿದೇಶಾಂಗ ವ್ಯಾಪಾರ ನಿರ್ದೇಶನಾಲಯಅಧಿಸೂಚನೆಯಲ್ಲಿ ತಿಳಿಸಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಈರುಳ್ಳಿಯ ಸಗಟು ಮತ್ತು ಚಿಲ್ಲರೆ ಬೆಲೆ ಕ್ರಮವಾಗಿ, ಶೇ.35 ಮತ್ತು ಶೇ.4 ರಷ್ಟು ಕುಸಿದ ಸಮಯದಲ್ಲಿಈ ನಿಷೇಧವು ಬಂದಿದೆ.  ದೆಹಲಿಯಲ್ಲಿ, ಈರುಳ್ಳಿಯ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ 40 ರೂಪಾಯಿ ಆಗಿದೆ.