ಅಕ್ಟೋಬರ್ 5ರವರೆಗೆ ಶಾಲೆಗಳು ಬಂದ್: ದೆಹಲಿ ಸರ್ಕಾರ
ನವದೆಹಲಿ:ರಾಜಧಾನಿಯಲ್ಲಿ ಕೋವಿಡ್‍ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದರಿಂದ ಮುಂದಿನ ಅಕ್ಟೋಬರ್ 5ರವರೆಗೂ ಶಾಲೆಗಳನ್ನು ತೆರೆಯದಿರಲು ದೆಹಲಿ ಸರ್ಕಾರ ನಿರ್ಧರಿಸಿದ್ದು, ಆದೇಶ ಹೊರಡಿಸಿದೆ.
ಶಾಲೆಗಳು, ಸರ್ಕಾರಿ ಕಚೇರಿಗಳು ಅಕ್ಟೋಬರ್ 5ರವರೆಗೂ ಮುಚ್ಚಿರಲಿದ್ದು, ಈ ಹಿಂದಿನಂತೆ ಆನ್‍’ಲೈನ್‍ ಕೋಚಿಂಗ್‍ ಮುಂದು ವರಿಯಲಿವೆ ಎಂದು ದೆಹಲಿ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರೌಢಶಾಲೆ ವಿದ್ಯಾರ್ಥಿಗಳು ಶಾಲೆಗಳಿಗೆ ಬಂದು, ಅಧ್ಯಾಪಕರಿಂದ ಅಗತ್ಯ ಮಾರ್ಗದರ್ಶನ ಪಡೆಯುವ ಕುರಿತು ಸರ್ಕಾರ ನಿರ್ದೇಶನ ನೀಡಿತ್ತಾದರೂ, ಈಗ ಯಾವುದೇ ಶಿಕ್ಷಣ ಸಂಸ್ಥೆಗಳನ್ನು ತೆರೆಯದಿರಲು ನಿರ್ಧರಿಸಿದೆ.
ದೇಶಾದ್ಯಂತ ಕೋವಿಡ್‍ ಮಹಾಮಾರಿ ಹರಡಿದ ಕಾರಣ, ಮುಂಜಾಗೃತಾ ಕ್ರಮವಾಗಿ, ಕಳೆದ ಮಾರ್ಚ್ 16ರಿಂದ ಶಾಲೆಗಳುಹಾಗೂ ವಿಶ್ವವಿದ್ಯಾಲಯಗಳು ಮುಚ್ಚಲಾಗಿತ್ತು. ಇದೇ ತಿಂಗಳ 21ರಿಂದ ಕೆಲವೊಂದು ರಾಜ್ಯಗಳಲ್ಲಿ ಶಾಲೆಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, ನಾಲ್ಕು ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಲು ಸೂಚನೆ ನೀಡಲಾಗಿತ್ತು. ಕಳೆದ ಗುರುವಾರ ದೆಹಲಿಯಲ್ಲಿ 4432 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು.