20 ಕೋಟಿ ಮೌಲ್ಯದ ಮೆಪೆಡ್ರೊನ್‌ ವಶ, ಐವರ ಬಂಧನ
ಪುಣೆ:ಶೆಲ್‌ ಪಿಂಪಲಗಾಂವ್‌ ಗ್ರಾಮದ ಸಮೀಪ ಡ್ರಗ್ಸ್‌ ಜಾಲದ ಮೇಲೆ ದಾಳಿ ನಡೆಸಿರುವ ಪಿಂಪ್ರಿ ಚಿಂಚವಾಡ ಪೊಲೀಸರು 20 ಕೋಟಿ ಮೌಲ್ಯದ ಮೆಪೆಡ್ರೊನ್‌ ವಶಪಡಿಸಿಕೊಂಡಿದ್ದು, ಐವರನ್ನು ಬಂಧಿಸಿದ್ದಾರೆ.
‘ಡ್ರಗ್ಸ್‌ ಜಾಲದ ಕುರಿತ ಖಚಿತ ಮಾಹಿತಿಯ ಮೇರೆಗೆ ಮಧ್ಯಾಹ್ನ ದಾಳಿ ನಡೆಸಿ, ಅವರಿಂದ 20 ಕೆ.ಜಿ. ಮೆಪೆಡ್ರೊನ್ ಹಾಗೂ ಕಾರನ್ನು‌ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ ಹಾಗೂ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸ ಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
