  : ಅನಾವರಣಗೊಂಡು ವರ್ಷ ಕಳೆದಿಲ್ಲ…ಕುಸಿದು ಬಿದ್ದ ಶಿವಾಜಿ ಬೃಹತ್‌ ಪ್ರತಿಮೆ; ಒಬ್ಬ ಅರೆಸ್ಟ್‌
ಮುಂಬೈ: ಇತ್ತೀಚೆಗಷ್ಟೇ ಮಹಾರಾಷ್ಟ್ರ()ದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ(  ) ಕುಸಿದು ಬಿದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಅರೆಸ್ಟ್‌ ಮಾಡಲಾಗಿದೆ. ಸಿಂಧುದುರ್ಗ()ದಲ್ಲಿ ಇತ್ತೀಚೆಗೆ ಕುಸಿದು ಬಿದ್ದ ಛತ್ರಪತಿ ಶಿವಾಜಿ ಪ್ರತಿಮೆಯ ರಚನಾತ್ಮಕ ವಿನ್ಯಾಸ ಸಲಹೆಗಾರನನ್ನು ಬಂಧಿಸಲಾಗಿದೆ. ಪ್ರತಿಮೆ ಕುಸಿತದ ಬಗ್ಗೆ ಕೂಲಂಕುಷ ತನಿಖೆಗೆ ಕೋರಿ ಆಪ್ ನಾಯಕರು ಪ್ರತಿಭಟನೆ ನಡೆಸಿದ ಎರಡೇ  ದಿನಗಳ ನಂತರ ಈ ಬಂಧನವಾಗಿದೆ. ಸಿಂಧುದುರ್ಗದ ಮಾಲ್ವಾನ್‌ನಲ್ಲಿರುವ ರಾಜ್‌ಕೋಟ್ ಕೋಟೆಯಲ್ಲಿ ಪತನಗೊಂಡ ಪ್ರತಿಮೆಯ ರಚನಾತ್ಮಕ ಸಲಹೆಗಾರ ಚೇತನ್ ಪಾಟೀಲ್ ಅವರನ್ನು ಗುರುವಾರ ರಾತ್ರಿ ಕೊಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಈ ಘಟನೆ ನಡೆದಿದ್ದು, ಬಳಿಕ ಪಾಟೀಲ್ ಪರಾರಿಯಾಗಿದ್ದರು, ಇದು ಭಾರೀ ಸಾರ್ವಜನಿಕ ಆಕ್ರೋಶ ಮತ್ತು ರಾಜಕೀಯ ಕೋಲಾಹಲವನ್ನು ಹುಟ್ಟುಹಾಕಿತ್ತು. ಇನ್ನು ಪ್ರತಿಮೆಯ ನಿರ್ಮಿಸಿದ ಶಿಲ್ಪಿ ಜಯದೀಪ್ ಆಪ್ಟೆ ಇನ್ನೂ ಪೊಲೀಸ್ ಕಣ್ತಪ್ಪಿಸಿ ಭುಗತಗೊಂಡಿದ್ದಾರೆ. ಕೊಲ್ಹಾಪುರ ಪೊಲೀಸರು, ಸಿಂಧುದುರ್ಗ ಪೊಲೀಸರು ಮತ್ತು ಥಾಣೆ ಪೊಲೀಸರ ಕನಿಷ್ಠ ಆರು ತನಿಖಾ ತಂಡಗಳು ಪಾಟೀಲ್‌ ಮತ್ತು ಆಪ್ಟೆಯ ಪತ್ತೆಗಾಗಿ ಬಲೆ ಬೀಸಿದ್ದವು. ಭಾರೀ ಹುಡುಕಾಟದ ಬಳಿಕ ನಿನ್ನೆ ರಾತ್ರಿ ಪಾಟೀಲ್ ಸಿಕ್ಕಿಬಿದ್ದಿದ್ದಾರೆ.
ಏನಿದು ಪ್ರಕರಣ?
ಕಳೆದ ವರ್ಷ ಡಿಸೆಂಬರ್ 4 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೌಕಾಪಡೆಯ ದಿನಾಚರಣೆಯ ಅಂಗವಾಗಿ ಸಿಂಧುದುರ್ಗದಲ್ಲಿ ಮೊದಲ ಬಾರಿಗೆ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಈ ಪ್ರತಿಮೆಯು ಮರಾಠಾ ನೌಕಾಪಡೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಕಡಲ ರಕ್ಷಣೆ ಮತ್ತು ಭದ್ರತೆಯ ಪರಂಪರೆಯನ್ನು ಗೌರವಿಸುವ ಗುರಿಯನ್ನು ಹೊಂದಿದೆ ಮತ್ತು ಆಧುನಿಕ ಭಾರತೀಯ ನೌಕಾಪಡೆಯೊಂದಿಗೆ ಅದರ ಐತಿಹಾಸಿಕ ಸಂಬಂಧವನ್ನು ಹೊಂದಿದೆ.   35 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸೋಮವಾರ ಮಧ್ಯಾಹ್ನ ಕುಸಿದು ಬಿದ್ದಿದೆ. ಇನ್ನು ಈ ಘಟನೆ ತನಿಖೆಗಾಗಿ ಭಾರತೀಯ ನೌಕಾಪಡೆಯ ನೇತೃತ್ವದ ಜಂಟಿ ತಾಂತ್ರಿಕ ಸಮಿತಿಯನ್ನು ಮಹಾರಾಷ್ಟ್ರ ಸರ್ಕಾರ ಮತ್ತು ತಾಂತ್ರಿಕ ತಜ್ಞರ ಪ್ರತಿನಿಧಿಗಳೊಂದಿಗೆ ರಚಿಸಲಾಗುತ್ತಿದೆ.
ಬಿಜೆಪಿ ವಿರುದ್ಧ ಕಿಡಿ
ಇನ್ನು ಘಟನೆಗೆ ಸಂಬಂಧಿಸಿದಂತೆ ಆಡಳಿತದಲ್ಲಿರುವ ಶಿವಸೇನೆ-ಬಿಜೆಪಿ ಮೈತ್ರಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಕಿಡಿ ಕಾರಿವೆ. ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಪ್ರತಿಮೆ ನಿರ್ಮಾಣದ ವಿಷಯದಲ್ಲಿ ಆಡಳಿತಾರೂಢ ಸರ್ಕಾರದ ಭ್ರಷ್ಟಾಚಾರ ಎಸಗಿದೆ. ಅದರ ಪರಿಣಾಮವಾಗಿಯೇ ಇಂತಹ ದುರಂತ ಸಂಭವಿಸಿದೆ ಎಂದು ದೂರಿದೆ. ಅಲ್ಲದೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜೀನಾಮೆಗೆ ಒತ್ತಾಯಿಸಿದೆ.
://.///1828043517127467139