ನಾಗಾಲ್ಯಾಂಡ್ ‌ಉಪಚುನಾವಣೆಯಲ್ಲಿ ಪಕ್ಷೇತರರಿಗೆ ಮುನ್ನಡೆ
ಕೋಹಿಮಾ:ಪಕ್ಷೇತರ ಅಭ್ಯರ್ಥಿಗಳು ನಾಗಾಲ್ಯಾಂಡ್‌ನ ದಕ್ಷಿಣ ಅಂಗಮಿ  ಮತ್ತು ಪುಂಗ್ರೊ ಕಿಫೈರ್ ಸ್ಥಾನಗಳಿಗೆ ಉಪಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಚುನಾವಣಾ ಆಯೋಗದ ಪ್ರಕಾರ ದಕ್ಷಿಣ ಅಂಗಮಿ ಅಭ್ಯರ್ಥಿ  ಸ್ಥಾನದಲ್ಲಿ ಸ್ವತಂತ್ರ ಅಭ್ಯರ್ಥಿ ಸೆಯೆವಿಲಿ ಪೀಟರ್ ಜಶುಮೋ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿ (ಎನ್‌ ಡಿಪಿಪಿ) ಯ ಮೆಡೊ ಯೋಖಾ ಅವರಿಗಿಂತ 922 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಪುಂಗ್ರೊ ಕಿಫೈರ್ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಟಿ.ಯಾಂಗ್ಸಿಯಾ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಮತ್ತು ಬಿಜೆಪಿ ಪಕ್ಷದ ನಾಮಿನಿ ಲಿರಿಮೊಂಗ್ ಸಾಂಗ್ಟಮ್ ಅವರಿಗಿಂತ 1,161 ಮತಗಳ ಮುನ್ನಡೆಯಲ್ಲಿದ್ದಾರೆ.
ವಿಖೋ-ಒ ಯೋಶು ಮತ್ತು ಟಿ.ಟೊರೆಚು ಅವರ ಮರಣದ ನಂತರ ನ.3 ರಂದು ದಕ್ಷಿಣ ಅಂಗಾಮಿ-  ಮತ್ತು ಪುಂಗ್ರೊ-ಕಿಫೈರ್ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಿತ್ತು.