ಆ್ಯಪಲ್ ‘ಐಫೋನ್ 13’ ಇನ್ನು ‘ಮೇಡ್ ಇನ್ ಇಂಡಿಯಾ’ ನವದೆಹಲಿ: ಭಾರತದಲ್ಲಿ ‘ಐಫೋನ್ 13’ ಸರಣಿಯ ಸ್ಮಾರ್ಟ್‌ಫೋನ್‌ಗಳ ತಯಾರಿಕೆ ಆರಂಭಿಸಲಾಗಿದೆ ಎಂದು ಆ್ಯಪಲ್ ಕಂಪನಿ ಸೋಮವಾರ ತಿಳಿಸಿದೆ. ಕಂಪನಿಯು 2017ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಐಫೋನ್‌ಗಳ ತಯಾರಿಕೆ ಆರಂಭಿಸಿತ್ತು. ಓದಿ:ಆ್ಯಪಲ್ ಐಫೋನ್ 13: ಉತ್ತಮ ಕ್ಯಾಮೆರಾ, ಸಿನೆಮ್ಯಾಟಿಕ್ ಮೋಡ್, ಆಕರ್ಷಕ ನೋಟ ‘ಉತ್ತಮ ವಿನ್ಯಾಸ, ವಿಡಿಯೊ ಮತ್ತು ಫೋಟೊಗಳಿಗಾಗಿ ಅತ್ಯಾಧುನಿಕ ಕ್ಯಾಮರಾ ವ್ಯವಸ್ಥೆ, ಅತ್ಯುತ್ತಮ ಕಾರ್ಯನಿರ್ವಹಣೆಯ ‘ಎ15 ಬಯೋನಿಕ್ ಚಿಪ್’ ಹೊಂದಿರುವ ಐಫೋನ್ 13 ಅನ್ನು ಭಾರತದಲ್ಲಿ ತಯಾರಿಸಲು ಸಂತಸಗೊಂಡಿದ್ದೇವೆ. ಈ ಫೋನ್ ಈಗ ಸ್ಥಳೀಯರಿಗಾಗಿ ಇಲ್ಲಿಯೇ ಸಿದ್ಧವಾಗುತ್ತಿದೆ’ ಎಂದು ‘ಐಎಎನ್‌ಎಸ್’ ಸುದ್ದಿಸಂಸ್ಥೆ ಜತೆ ಹಂಚಿಕೊಂಡಿರುವ ಪ್ರಕಟಣೆಯಲ್ಲಿ ಆ್ಯಪಲ್ ತಿಳಿಸಿದೆ. ಆ್ಯಪಲ್ ಕಂಪನಿಯು ಐಫೋನ್ 11, ಐಫೋನ್ 12 ಸ್ಮಾರ್ಟ್‌ಫೋನ್‌ಗಳನ್ನು ಈಗಾಗಲೇ ದೇಶದಲ್ಲಿ ತಯಾರಿಸುತ್ತಿದೆ. ಇದೀಗ ಐಫೋನ್ 13 ಆ ಸಾಲಿಗೆ ಸೇರಿದೆ. ಓದಿ: 13: ಭಾರತಕ್ಕಿಂತ ಕಡಿಮೆ ಬೆಲೆಗೆ ಈ ದೇಶಗಳಲ್ಲಿ ಲಭ್ಯ! ಐಫೋನ್ 13 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಯು ಕಳೆದ ವರ್ಷ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈ ಸರಣಿಯಲ್ಲಿ ಐಫೋನ್ 13 ಮಿನಿ, ಐಫೋನ್ 13, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಮಾದರಿಗಳು ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ಗಳ ಬೆಲೆ ದೇಶದಲ್ಲಿ ₹69,900ರಿಂದ ಆರಂಭವಾಗಿ ₹1,79,900 ವರೆಗೂ ಇದೆ. ಓದಿ:ಐಫೋನ್ 13 ಪ್ರೋ ಹೇಗಿದೆ? ಇಲ್ಲಿದೆ ಮಾಹಿತಿ– 13 : ಛಾಯಾಗ್ರಾಹಕರ ಕನಸಿನ ಶಕ್ತಿಶಾಲಿ ಫೋನ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.