9: ಆ್ಯಪಲ್‌ ವಾಚ್‌ಗೆ ಬಂತು ಹೊಸ ಓಎಸ್‌ ಅಪ್‌ಡೇಟ್ ಬೆಂಗಳೂರು: ಪ್ರಮುಖ ಟೆಕ್ ಮತ್ತು ಗ್ಯಾಜೆಟ್ ಕಂಪನಿ ಆ್ಯಪಲ್, ಸ್ಮಾರ್ಟ್‌ವಾಚ್ ಬಳಕೆದಾರರಿಗೆ ನೂತನ ವಾಚ್‌ ಓಎಸ್ 9 ಬಿಡುಗಡೆ ಮಾಡಿದೆ. ಆ್ಯಪಲ್ ಡೆವಲಪರ್ ಈವೆಂಟ್‌ನಲ್ಲಿ ಘೋಷಿಸಿದಂತೆಯೇ, ಹೊಸ ಅಪ್‌ಡೇಟ್ ಬಳಕೆದಾರರಿಗೆ ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಲು ಲಭ್ಯವಿದೆ. ನೂತನ ವಾಚ್‌ ಓಎಸ್ 9ರಲ್ಲಿ ಹೊಸ ವಾಚ್ ಫೇಸ್, ವರ್ಕೌಟ್ ಆ್ಯಪ್, ಸ್ಲೀಪ್, ಕಾಂಪಾಸ್ ಆ್ಯಪ್ ಮತ್ತು ಮೆಡಿಕೇಶನ್ ಆ್ಯಪ್‌ ಇದ್ದು, ನೂತನ ವಿನ್ಯಾಸದಲ್ಲಿ ಪರಿಚಯಿಸಲ್ಪಟ್ಟಿದೆ. ಆ್ಯಪಲ್ ವಾಚ್‌ನ ಪ್ರಮುಖ ಫೀಚರ್‌ಗಳಲ್ಲಿ ಒಂದಾದ ವರ್ಕೌಟ್ ಆ್ಯಪ್‌ನಲ್ಲಿ, ಮತ್ತಷ್ಟು ವಿಶಿಷ್ಟ ವಿನ್ಯಾಸ ಮತ್ತು ಹೆಚ್ಚುವರಿ ಆಯ್ಕೆಗಳನ್ನು ಪರಿಚಯಿಸಲಾಗಿದೆ. ಮೆಡಿಕೇಶನ್ ಆ್ಯಪ್ ಮೂಲಕ, ಸುಲಭದಲ್ಲಿ ದಿನವೂ ತೆಗೆದುಕೊಳ್ಳಬೇಕಾದ ಔಷಧಗಳ ಪಟ್ಟಿಯನ್ನು ನೋಡಬಹುದು, ಜತೆಗೆ ಸಮಯಾಧಾರಿತ ರಿಮೈಂಡರ್ ಕೂಡ ಇರಲಿದೆ. ನಿದ್ದೆಯಲ್ಲಿನ ವ್ಯತ್ಯಾಸ, ಸಮಯವನ್ನು ಸ್ಲೀಪ್ ಆ್ಯಪ್ ಅಪ್‌ಡೇಟ್ ಮೂಲಕ ಅಳೆಯಬಹುದು. ಆಕರ್ಷಕ ವಾಚ್ ಫೇಸ್‌ಗಳು ನೂತನ 9 ವಿಶೇಷತೆಯಾಗಿದೆ. ಅಕ್ಸೆಸಿಬಿಲಿಟಿ ಫೀಚರ್‌ಗಳು ಮತ್ತಷ್ಟು ಸುಧಾರಿತವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಆ್ಯಪಲ್ ಹೇಳಿದೆ. ಯಾವೆಲ್ಲ ಆ್ಯಪಲ್ ವಾಚ್‌ಗಳಿಗೆ ನೂತನ 9 ಲಭ್ಯವಿದೆ? 4 5 6 7 8 16 | ಆ್ಯಪಲ್ ನೂತನ ಐಓಎಸ್ ಸಾಫ್ಟ್‌ವೇರ್ ಅಪ್‌ಡೇಟ್: ಯಾವ ಐಫೋನ್‌ಗೆ ಲಭ್ಯ? ಜತೆಗೆ, 9 ಕೆಲಸ ಮಾಡಲು ಐಫೋನ್ 8 ಮತ್ತು ಅದರ ನಂತರದ ಐಫೋನ್ ಜತೆಗೆ, 16 ಅಪ್‌ಡೇಟ್ ಆಗಿರುವುದು ಅಗತ್ಯವಾಗಿದೆ ಎಂದು ಆ್ಯಪಲ್ ತಿಳಿಸಿದೆ. 14 ಬಿಡುಗಡೆ: ಹಳೆಯ ಐಫೋನ್ ಬೆಲೆ ಇಳಿಕೆ | ಪರಿಷ್ಕೃತ ದರ ಇಲ್ಲಿದೆ.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.