ಗೂಗಲ್ ಕ್ರೋಮ್‌ನಲ್ಲಿ ಸಮಸ್ಯೆ: ಸರ್ಟ್–ಇನ್ ಎಚ್ಚರಿಕೆ ಗೂಗಲ್ ಕ್ರೋಮ್‌ ಬ್ರೌಸರ್‌ನಲ್ಲಿ ಕಾಣಿಸಿಕೊಂಡಿರುವ ಬಗ್ ಒಂದರ ಕುರಿತು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಸ್ಪಂದನಾ ತಂಡ (ಸರ್ಟ್‌–ಇನ್) ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಗೂಗಲ್ ಕ್ರೋಮ್ ಬ್ರೌಸರ್‌ನ ಬಗ್‌ನಿಂದಾಗಿ ಹ್ಯಾಕರ್‌ಗಳು, ರಿಮೋಟ್ ಮೂಲಕ ಸಿಸ್ಟಂ ವ್ಯವಸ್ಥೆಯನ್ನು ಹಾಳುಗೆಡವುವ ಇಲ್ಲವೇ ತಮ್ಮ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ಸರ್ಟ್‌–ಇನ್ ಎಚ್ಚರಿಸಿದೆ. ಕ್ರೋಮ್‌ನಲ್ಲಿರುವ ಲೋಪವನ್ನು ಹ್ಯಾಕರ್ಸ್ ತಿಳಿದುಕೊಂಡರೆ, ಬಳಕೆದಾರರ ಕಂಪ್ಯೂಟರ್ ಅನ್ನು ಪ್ರವೇಶಿಸಿ, ಅದರ ಕೋಡ್ ಮತ್ತು ಡಾಸ್ ವ್ಯವಸ್ಥೆಯನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಳ್ಳಬಹುದು. ಹೀಗಾಗಿ ಸೂಕ್ತ ಭದ್ರತಾ ಅಪ್‌ಡೇಟ್ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದೆ. ಗೂಗಲ್ ಕ್ರೋಮ್ ಬಳಕೆದಾರರೇ, ಬ್ರೌಸರ್ ಅಪ್‌ಡೇಟ್ ಮಾಡಿಕೊಳ್ಳಿ: ತಜ್ಞರ ಎಚ್ಚರಿಕೆ ಈ ಹಿಂದೆಯೂ ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿನ ಬಗ್ ಒಂದರ ಕುರಿತು ಸರ್ಟ್–ಇನ್ ಬಳಕೆದಾರರಿಗೆ ಎಚ್ಚರಿಕೆ ನೀಡಿತ್ತು. ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ಗೆ ಗುಡ್‌ ಬೈ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.