ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮಾಲ್‌ವೇರ್‌ ಇರುವ ಕ್ಯಾಮೆರಾ ಆ್ಯಪ್ಸ್! ಬೆಂಗಳೂರು: ಗೂಗಲ್‌ನ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವ ಕ್ಯಾಮೆರಾ ಆ್ಯಪ್‌ಗಳಲ್ಲಿ ಮಾಲ್‌ವೇರ್‌ ಇರುವುದಾಗಿ ಮ್ಯಾಕ್ಸಿಮೆ ಇನ್‌ಗ್ರಾವೊ ಎಚ್ಚರಿಕೆ ನೀಡಿದ್ದಾರೆ. ಫ್ರಾನ್ಸ್‌ನ ಎವಿನಾ ಟೆಕ್‌ನಲ್ಲಿ ಭದ್ರತಾ ಸಂಶೋಧಕರಾಗಿರುವ ಮ್ಯಾಕ್ಸಿಮೆ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮಾಲ್‌ವೇರ್‌ ತೊಂದರೆಗೊಳಗಾಗಿರುವ ಆ್ಯಪ್‌ಗಳ ವಿವರ ಬಿಡುಗಡೆ ಮಾಡಿದ್ದಾರೆ. ಫನ್ನಿ ಕ್ಯಾಮೆರಾ ಮತ್ತು ರೇಝರ್ ಕೀಬೋರ್ಡ್ ಆ್ಯಂಡ್ ಥೀಮ್ ಎಂಬ ಎರಡು ಆ್ಯಪ್‌ಗಳಲ್ಲಿನ ಭದ್ರತಾ ಲೋಪವನ್ನು ಬಳಸಿಕೊಂಡು ಮಾಲ್‌ವೇರ್‌ ಹರಿಯಬಿಡಲಾಗಿದೆ ಎಂದು ಮ್ಯಾಕ್ಸಿಮೆ ಹೇಳಿದ್ದಾರೆ. ಈ ಕುರಿತು ಅವರು ಗೂಗಲ್‌ ಪ್ಲೇ ಸ್ಟೋರ್‌ಗೆ ವಿವರ ನೀಡಿದ ಕೂಡಲೇ, ಗೂಗಲ್ ಈ ಎರಡು ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ. ಆದರೆ, ಈಗಾಗಲೇ ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಬಳಸುತ್ತಿರುವವರು ಈ ಎರಡು ಆ್ಯಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡುವುದು ಉತ್ತಮ. ಜತೆಗೆ ಉತ್ತಮ ಆ್ಯಂಟಿವೈರಸ್ ಬಳಸುವುದರಿಂದ ಇಂತಹ ಮಾಲ್‌ವೇರ್‌, ವೈರಸ್‌ಗಳಿಂದ ದೂರವಿರಬಹುದು ಎಂದು ಭದ್ರತಾ ಸಂಶೋಧಕರು ತಿಳಿಸಿದ್ದಾರೆ. ಆ್ಯಪಲ್, ಆ್ಯಂಡ್ರಾಯ್ಡ್ ಫೋನ್‌ಗೆ ಇಟಾಲಿಯನ್ ಸ್ಪೈವೇರ್ ಕಂಟಕ ಮಾಲ್‌ವೇರ್‌ ದಾಳಿಗೆ ಸಿಲುಕಿರುವ ಆ್ಯಪ್‌ಗಳ ವಿವರ ಇಲ್ಲಿದೆ. ಇವುಗಳನ್ನು ನೀವು ನಿಮ್ಮ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಬಳಸುತ್ತಿದ್ದರೆ, ಕೂಡಲೇ ಅನ್‌–ಇನ್‌ಸ್ಟಾಲ್ ಮಾಡುವುದು ಒಳಿತು. ಕಾರ್ಡ್‌ ಡೇಟಾ ರಕ್ಷಣೆಗೆ ಟೋಕನ್‌ ವ್ಯವಸ್ಥೆ , 3D , , , , v1.1, , & . ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.