ಐಫೋನ್, ಐಪ್ಯಾಡ್‌, ಮ್ಯಾಕ್‌ಗಳಲ್ಲಿ ಭದ್ರತಾ ದೋಷ: ಆ್ಯಪಲ್ ಎಚ್ಚರಿಕೆ ಸ್ಯಾನ್ ಫ್ರಾನ್ಸಿಸ್ಕೊ: ಐಫೋನ್, ಐಪ್ಯಾಡ್ ಹಾಗೂ ಮ್ಯಾಕ್‌ಗಳಲ್ಲಿ ಭದ್ರತಾ ದೋಷದ ಕುರಿತು ಆ್ಯಪಲ್ ಎಚ್ಚರಿಕೆ ನೀಡಿದೆ. ಭದ್ರತಾ ದೋಷದಿಂದಾಗಿ ಹ್ಯಾಕರ್‌ಗಳಿಗೆ ಡಿವೈಸ್ ಮೇಲೆ ಸಂಪೂರ್ಣ ನಿಯಂತ್ರಣ ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಹಾಗಾಗಿ ತುರ್ತಾಗಿ ಸಾಫ್ಟ್‌ವೇರ್ ಅಪ್‌ಡೇಟ್ ಇನ್‌ಸ್ಟಾಲ್ ಮಾಡುವಂತೆ ಕಂಪನಿಯು ವಿನಂತಿಸಿದೆ. ಇದನ್ನೂ ಓದಿ:85 ಲಕ್ಷ ಚಂದಾದಾರರನ್ನು ಹೊಂದಿದ್ದ 8 ಯೂಟ್ಯೂಬ್ ಚಾನಲ್ ನಿಷೇಧ: ಯಾವುವು? ಐಫೋನ್ 6ಎಸ್ ಹಾಗೂ ನಂತರದ ಮಾದರಿಗಳು, ಐಪ್ಯಾಡ್‌ನ 5ನೇ ತಲೆಮಾರಿನ ಸೇರಿದಂತೆ ಹಲವು ಡಿವೈಸ್, ಐಪ್ಯಾಡ್ ಪ್ರೊ, ಐಪ್ಯಾಡ್ ಏರ್ 2, ಮ್ಯಾಕ್ ಕಂಪ್ಯೂಟರ್ ( )ಹಾಗೂ ಕೆಲವು ಐಪಾಡ್ಡಿವೈಸ್‌ಗಳಲ್ಲಿ ದೋಷ ಕಂಡುಬರುವ ಭೀತಿಯಿದೆ. ಈ ದೋಷದಿಂದಾಗಿ ಹ್ಯಾಕರ್‌ಗಳು ಡಿವೈಸ್ ಮೇಲೆ ಸಂಪೂರ್ಣ ಆಡ್ಮಿನ್ ಆಕ್ಸೆಸ್ ಪಡೆಯುವ ಸಾಧ್ಯತೆಯಿದೆ ಎಂದು ಸೋಷಿಯಲ್ ಫ್ರೂಫ್ ಸೆಕ್ಯೂರಿಟಿ ಸಿಇಒ ರಾಚೆಲ್ ಟೊಬ್ಯಾಕ್ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.