ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳ ನಿಯಂತ್ರಣ, ತಡೆಗಟ್ಟುವಿಕೆಗೆ ತಂತ್ರಜ್ಞಾನ ನವದೆಹಲಿ: ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಲು ತಜ್ಞರು ಕೃತಕ ಬುದ್ದಿಮತ್ತೆ (ಎಐ) ಮೊರೆ ಹೋಗಿದ್ದು ದೆಹಲಿ ಮೂಲದ ಆ ದಿಸೆಯಲ್ಲಿ ಹೆಜ್ಜೆ ಇಟ್ಟಿದೆ. ' ಎಂಬ ಕ್ರಮದ ಮೂಲಕ ಮಧುಮೇಹ ಹಾಗೂ ಇತರೆ ಜಿರ್ಣಾಂಗವ್ಯೂಹಗಳಿಗೆ ಸಂಬಂಧಿಸಿದ ಕಾಯಿಲೆಗಳ ಮೇಲೆ ಸಂಪೂರ್ಣ ನಿಗಾ ವಹಿಸಬಹುದು ಮತ್ತು ಅವುಗಳನ್ನು ತಡೆಗಟ್ಟಬಹುದು ಎಂದು ತಜ್ಞರು ಹೇಳಿದ್ದಾರೆ. ‘ದೀರ್ಘಕಾಲದ ಚಯಾಪಚಯ ರೋಗಗಳನ್ನು ನಿರ್ವಹಿಸಲು ಮತ್ತು ಹಿಮ್ಮೆಟ್ಟಿಸಲು ವ್ಯಕ್ತಿಯ ಬಗೆಗಿನ ಪೌಷ್ಟಿಕಾಂಶ, ನಿದ್ರೆ, ಚಟುವಟಿಕೆ ಮತ್ತು ಉಸಿರಾಟದ ಬಗ್ಗೆ ವೈಯಕ್ತಿಕರಣಗೊಳಿಸಿದ ಅಂಶಗಳೊಂದಿಗೆ (ಕಸ್ಟಮೈಸ್ಡ್) ನಿಖರವಾದ ಮಾರ್ಗದರ್ಶನ ನೀಡಲು ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಇದನ್ನು ವೈಜ್ಞಾನಿಕವಾಗಿ ದೃಢಿಕರಿಸಿಕೊಳ್ಳಲಾಗಿದೆ’ ಎಂದು ದೆಹಲಿಯ ಗಂಗಾರಾಮ್ ಆಸ್ಪತ್ರೆಯ ವೈದ್ಯ ಮೋಹ್ಸಿನ್ ವಾಲಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ವೆಬ್ ಮತ್ತು ಆ್ಯಪ್ ಮೂಲಕ ಕೆಲಸ ಮಾಡಲಿದೆ. ಡಯಾಬಿಟೀಸ್ ಹಿನ್ನೆಲೆಯಲ್ಲಿ ಇಡೀ ದೇಹದ ಮೇಲೆ ನಿಗಾ ಇಡುವುದು ಇದರಿಂದ ಸಾಧ್ಯವಾಗಲಿದೆ. ಇದು ಕ್ರಾಂತಿಕಾರಕ ಹೆಜ್ಜೆ ಎಂದು ತಿಳಿಸಿದ್ದಾರೆ. ಎಐ ತಂತ್ರಜ್ಞಾನದ ಮೂಲಕ ಡಯಾಬಿಟೀಸ್ ಉಪಶಮನ ಹಾಗೂ ರಿವರ್ಸ್ ಮಾಡಲು ಕ್ಲಿನಿಕಲ್ ಪರೀಕ್ಷೆಗಳನ್ನು ಯಶಸ್ವಿಗೊಳಿಸಲಾಗಿದೆ ಎಂದು Healthನ ವಿಜ್ಞಾನಿ ಡಾ. ಶಶಾಂಕ್ ಜೋಶಿ ತಿಳಿಸಿದ್ದಾರೆ. ಇದು ಕೇವಲ ಡಯಾಬಿಟೀಸ್ ಮಾತ್ರವಲ್ಲದೇ ವ್ಯಕ್ತಿಯ ಒಟ್ಟು ಆರೋಗ್ಯದ ಶ್ರೇಯೋಭಿವೃದ್ಧಿಗೆ ಸಹಾಯ ಮಾಡಲಿದೆ. ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಲಾಗಿನ್ ಆಗಿ ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.