ಶಿಯೋಮಿ ಸ್ಮಾರ್ಟ್‌ ಉತ್ಪನ್ನ | ₹54,999ಕ್ಕೆ 65 ಇಂಚಿನ ಮಿ ಟಿವಿ 4ಎಕ್ಸ್‌ ಬೆಂಗಳೂರು: ಶಿಯೋಮಿ ಕಂಪನಿಯು ‘ಸ್ಮಾರ್ಟರ್‌ ಲಿವಿಂಗ್–2020’ ಪರಿಕಲ್ಪನೆಯಡಿಹಲವು ಸ್ಮಾರ್ಟ್‌ ಸಾಧನಗಳನ್ನು ಮಂಗಳವಾರಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಪ್ರತಿಯೊಬ್ಬರಿಗೂ 4ಕೆ ಟಿವಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಮಿ4ಕೆ ಸರಣಿ ಘೋಷಿಸಲಾಗಿದೆ. 43,50 ಮತ್ತು 65 ಇಂಚಿನ ಸ್ಮಾರ್ಟ್‌ ಟಿವಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹೊಸ ಟಿವಿಗಳು ಆಂಡ್ರಾಯ್ಡ್‌ 9.0 ಆಧಾರಿತ ಪ್ಯಾಚ್‌ವಾಲ್‌ನಿಂದ ಕಾರ್ಯನಿರ್ವಹಿಸುತ್ತವೆ.ಮಿ ಗ್ರಾಹಕರ ಬೇಡಿಕೆಯನ್ನು ಈ ಟಿವಿಗಳಲ್ಲಿ ಈಡೇರಿಸಲಾಗಿದೆ. ನೆಟ್‌ಫ್ಲಿಕ್‌ ಮತ್ತು ಅಮೆರಜಾನ್‌ನ ಪ್ರೈಮ್‌ ವಿಡಿಯೊ ಕಂಟೆಂಟ್‌ಗಳನ್ನೂ ಆನಂದಿಸಬಹುದು ಎಂದು ಕಂಪನಿ ತಿಳಿಸಿದೆ. ಡೇಟಾ ಸೇವರ್:ಗೂಗಲ್‌ನ ಡೇಟಾ ಸೇವರ್‌ ಮೋಡ್‌ ಅಳವಡಿಸಲಾಗಿದೆ. ಇದರಿಂದ ಮೂರು ಪಟ್ಟು ಹೆಚ್ಚಿನ ವೀಕ್ಷಣೆ ಸಾಧ್ಯವಾಗಲಿದೆ ಎಂದೂ ಹೇಳಿದೆ. ಇನ್ನು, ಮಿ ಸ್ಮಾರ್ಟ್ ವಾಟರ್‌‌ಪ್ಯೂರಿಫೈಯರ್‌, ಮಿ ಸ್ಮಾರ್ಟ್‌ ಬ್ಯಾಂಡ್‌ 4 ಹಾಗೂ ಮೋಷನ್‌ ಆ್ಯಕ್ಟಿವೇಟೆಡ್‌ ನೈಟ್‌ ಲೈಟ್‌ 2 ಸಹ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗಿದೆ. ‘ಶಿಯೋಮಿ ಸ್ಮಾರ್ಟ್‌ಫೋನ್‌ ಕಂಪನಿಯಾಗಿ ಮಾತ್ರವೇ ಉಳಿದಿಲ್ಲ. ನಿತ್ಯ ಜೀವನದ ಅಗತ್ಯಕ್ಕೆ ಬೇಕಾದಂತಹ ಸ್ಮಾರ್ಟ್‌ ಸಾಧನಗಳನ್ನು ಪರಿಚಯಿಸಲಾಗುತ್ತಿದೆ. ಭಾರತದಲ್ಲಿ ಸ್ಮಾರ್ಟ್‌ಫೋನ್‌ ಮತ್ತು ಸ್ಮಾರ್ಟ್‌ ಟಿವಿ ವಿಭಾಗದಲ್ಲಿ ಶಿಯೋಮಿ ಬ್ರ್ಯಾಂಡ್‌ ಮೊದಲ ಸ್ಥಾನ ಪಡೆದುಕೊಂಡಿದೆ.5 ವರ್ಷದಲ್ಲಿ 10 ಕೋಟಿ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲಾಗಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೆಶಕ ಮನು ಕುಮಾರ್‌ ಜೈನ್‌ ಅವರು ಮಾಹಿತಿ ನೀಡಿದರು. ಸ್ಮಾರ್ಟ್‌ ಸಾಧನಗಳ ಬೆಲೆ * ಮಿಟಿವಿ 4ಎಕ್ಸ್‌65 ಇಂಚು; ₹54,999 * ಮಿಟಿವಿ 4ಎಕ್ಸ್‌ 50 ಇಂಚು; ₹29,999 * ಮಿಟಿವಿ 4ಎಕ್ಸ್‌ 43 ಇಂಚು; ₹ 24,999 * ಮಿಟಿವಿ 4ಎ 40 ಇಂಚು; ₹17,999 * ಮಿ ಸ್ಮಾರ್ಟ್‌ ವಾಟರ್‌ ಪ್ಯೂರಿಫೈಯರ್; ₹11,999 * ಮಿ ಸ್ಮಾರ್ಟ್‌ ಬ್ಯಾಂಡ್‌ 4; ₹ 2,299 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.