ವಿವೊ ನೆಕ್ಸ್‌ 3: ಕೇವಲ 13 ನಿಮಿಷಗಳಲ್ಲಿ ಬ್ಯಾಟರಿ ಫುಲ್‌ ಚಾರ್ಜ್‌ ಬೆಂಗಳೂರು: ಚೀನಾದ ವಿವೊ ಕಂಪೆನಿಯ ಸ್ಮಾರ್ಟ್‌ಫೋನ್‌ ಅಂದ ತಕ್ಷಣ ನೆನಪಾಗುವುದು ಪಾಪ್‌ಅಪ್‌ ಸೆಲ್ಪಿ ಕ್ಯಾಮೆರಾ! ಇದೀಗ ಈ ಕಂಪೆನಿ ಅತಿ ವೇಗದಲ್ಲಿ ಚಾರ್ಜ್‌ ಆಗುವಮತ್ತು 5 ಜಿ ತಂತ್ರಜ್ಞಾನ ಹೊಂದಿರುವ ’ವಿವೊ ನೆಕ್ಸ್‌ 3‘ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಮುಂದಾಗಿದೆ. 2019ರ ಫೆಬ್ರುವರಿಯಲ್ಲಿ ನಡೆದಮೊಬೈಲ್ ವರ್ಲ್ಡ್‌ ಕಾಂಗ್ರೆಸ್‌ನಲ್ಲಿ 5 ಜಿ ತಂತ್ರಜ್ಞಾನ ಹಾಗೂ120W ಸಾಮರ್ಥ್ಯದ ಸೂಪರ್‌ ಫ್ಲ್ಯಾಶ್‌ ಚಾರ್ಜ್‌ ತಂತ್ರಜ್ಞಾನ ಸೌಲಭ್ಯ ಇರುವ ಸ್ಮಾರ್ಟ್‌ಫೋನ್‌ ತಯಾರಿಸುವುದಾಗಿ ಘೋಷಣೆ ಮಾಡಿತ್ತು. ಅದರಂತೆ ಈ ಎರಡು ವಿಶೇಷತೆಗಳನ್ನು ಒಳಗೊಂಡಿರುವವಿವೊ ನೆಕ್ಸ್‌ 3 ಫೋನ್ ಸೆಪ್ಟೆಂಬರ್‌ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಹಲವು ಗುಣವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಭಾರೀ ಗಮನ ಸೆಳೆದಿದೆ. ವಿವೋ ನೆಕ್ಸ್‌ 3 ಫೋನಿನ ಬಿಡುಗಡೆ ಬಗ್ಗೆ ದಿನಾಂಕ ಪ್ರಕಟವಾಗದಿದ್ದರೂ ಇದರ ವೈಶಿಷ್ಟ್ಯತೆಗಳನ್ನುಮೊಬೈಲ್‌ ಫೋನ್‌ಗಳ ಗುಣಮಟ್ಟ ಮಾಪನ ಮಾಡುವ ಕೆಲವು ಆನ್‌ಲೈನ್‌ ಪೊರ್ಟಲ್‌ಗಳು ಸೋರಿಕೆ ಮಾಡಿವೆ ಎನ್ನಲಾಗುತ್ತಿದೆ. ವಿವೊ 3 ನೆಕ್ಸ್‌ ಫೋನ್ 4,000mAH ಬ್ಯಾಟರಿಯನ್ನು ಹೊಂದಿದೆ. ಇದರ ಜತೆಗೆ 120W ಸಾಮರ್ಥ್ಯದ ಸೂಪರ್‌ ಫ್ಲ್ಯಾಶ್‌ ಚಾರ್ಜ್‌ ತಂತ್ರಜ್ಞಾನ ಹೊಂದಿದ್ದು ಕೇವಲ 13 ನಿಮಿಷಗಳಲ್ಲಿ4,000mAH ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್‌ ಆಗಲಿದೆ. ಸೋರಿಕೆಯಾಗಿರುವ ಇತರೆ ವೈಶಿಷ್ಟ್ಯಗಳು... * 64ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ, ಪಾಪ್‌ಅಪ್‌ ಸೆಲ್ಪಿ ಕ್ಯಾಮೆರಾ *ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ * 4ಕೆ ಹೈಡೆಫಿನಿಶನ್ ವಿಡಿಯೊ ಸೌಲಭ್ಯ ಉಳಿದಂತೆ ವಿವೊ ನೆಕ್ಸ್‌ ಸರಣಿಫೋನಿನ ವೈಶಿಷ್ಟ್ಯಗಳೇ ಮುಂದುವರಿಯಲಿವೇ ಎನ್ನಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.