ವಾಟ್ಸ್‌ಆ್ಯಪ್‌: ವಿಡಿಯೊ ಮೂಲಕ ಗೂಢಚರ್ಯೆ! ನಿಮ್ಮ ವಾಟ್ಸ್‌ಆ್ಯಪ್‌ಗೆ ವಿಡಿಯೊ ಕಳುಹಿಸುವ ಮೂಲಕವೂ ಗೂಢಚರ್ಯೆ ನಡೆಸುವ ಸಾಧ್ಯತೆ ಇದೆ ಎಂದು ಇಂಡಿಯನ್‌ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ ಹೇಳಿದೆ. ಹೀಗಾಗಿ ತಕ್ಷಣವೇ ವಾಟ್ಸ್‌ಆ್ಯಪ್‌ ಅಪ್‌ಡೇಟ್‌ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಎಂಪಿ4 ವಿಡಿಯೊ ಕಳುಹಿಸಿ ಅದರ ಮೂಲಕ ಯಾವುದೇ ರೀತಿಯ ಅನುಮತಿ ಕೇಳದೇ ಮೊಬೈಲ್‌ಗೆ ಕುತಂತ್ರಾಂಶ ಸೇರಿಕೊಳ್ಳುವಂತೆ ಮಾಡಲಾಗುತ್ತದೆ. ಆ ಮೂಲಕ ಮೊಬೈಲ್‌ ಮೇಲೆ ನಿಯಂತ್ರಣ ಸಾಧಿಸಲಾಗುತ್ತದೆ.‌ ಇದನ್ನೂ ಓದಿ:ಅಂಗೈ ಅಗಲದ ಅಮೆಜಾನ್ ಸ್ಮಾರ್ಟ್‌ ಸ್ಪೀಕರ್‌ 'ಇಕೊ ಫ್ಲೆಕ್ಸ್‌'; ಭಾರತದಲ್ಲಿ ₹2,999 ವಾಟ್ಸ್‌ಆ್ಯಪ್‌ ಅಪ್‌ಡೇಟ್‌ ಮಾಡಿಕೊಳ್ಳುವಂತೆ ಕಂಪನಿಯು ಪದೇ ಪದೇ ಸೂಚನೆ ನೀಡುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಆಂಡ್ರಾಯ್ಡ್‌ ಬಳಕೆದಾರರು ಕನಿಷ್ಠ 2.19.274 ವರ್ಷನ್‌ ಮತ್ತು ಆ್ಯಪಲ್‌ ಐಫೋನ್‌ ಬಳಕೆದಾರರು ಕನಿಷ್ಠ 2.19.100 ವರ್ಷನ್‌ ಹೊಂದಿರಲೇಬೇಕು ಎಂದು ಹೇಳಿದೆ. ವರ್ಷನ್‌ ಚೆಕ್‌ ಮಾಡಲು: ಐಫೋನ್‌: > ಆಂಡ್ರಾಯ್ಡ್‌: >> ‘ ’. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.