ಸ್ಯಾಮ್ಸಂಗ್‌ ಗ್ಯಾಲಕ್ಸಿ ನೋಟ್‌ 10, 10+ ಮಂಗಳವಾರ ಮಾರುಕಟ್ಟೆಗೆ ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಸ್ಯಾಮ್ಸಂಗ್‌, ಭಾರತದ ಮಾರುಕಟ್ಟೆಗೆ ಗ್ಯಾಲಕ್ಸಿ ನೋಟ್‌ 10 ಮತ್ತು ನೋಟ್‌ 10+ ಸ್ಮಾರ್ಟ್‌ಫೋನ್‌ಗಳನ್ನು ಮಂಗಳವಾರ ಬಿಡುಗಡೆ ಮಾಡಲಿದೆ. ಬೆಂಗಳೂರಿನ ಬ್ರಿಗೆಡ್‌ ರಸ್ತೆಯಲ್ಲಿರುವ ಸ್ಯಾಮ್ಸಂಗ್‌ ಒಪೇರಾ ಹೌಸ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಈ ಹ್ಯಾಂಡ್‌ಸೆಟ್‌ಗಳನ್ನು ಬಿಡುಗಡೆ ಮಾಡಲಿದೆ. ಕಂಪ್ಯೂಟರ್, ಗೇಮಿಂಗ್‌ ಕನ್ಸೋಲ್, ಮೂವಿ ಟೆಕ್‌ ಕ್ಯಾಮೆರಾ, ಇಂಟಲಿಜೆಂಟ್ ಪೆನ್‌ ಹೀಗೆ ಎಲ್ಲವನ್ನೂ ಒಂದೇ ಸಾಧನದಲ್ಲಿ ಅನುಭವಿಸುವ ಅವಕಾಶವು ಈ ಸ್ಮಾರ್ಟ್‌ಫೋನ್‌ನಲ್ಲಿ ಸಿಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ವೈಶಿಷ್ಟ್ಯ ನೋಟ್‌ 10 –ನೋಟ್‌ 10+ ಪರದೆ:6.3 ಇಂಚು - 6.8 ಇಂಚು ಬ್ಯಾಟರಿ:3,500ಎಂಎಎಚ್ -4,300ಎಂಎಎಚ್ ರ್‍ಯಾಮ್:8ಜಿಬಿ -12ಜಿಬಿ ಸಂಗ್ರಹಣಾ ಸಾಮರ್ಥ್ಯ:512ಜಿಬಿ1ಟಿಬಿವರೆಗೂ ವಿಸ್ತರಣೆ ಸಾಧ್ಯ. ಕ್ಯಾಮೆರಾ:4 ಕ್ಯಾಮರಾ,3 ಹಿಂಬದಿ, 1 ಸೆಲ್ಫಿ ಎಸ್‌ಪೆನ್‌:10 ಗಂಟೆಗಳವರೆಗೆ ಸ್ಟ್ಯಾಂಡ್‌ಬೈ ಬ್ಯಾಟರಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.