ಆಕರ್ಷಕ ಶ್ರೇಣಿಯ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ ‌ಥಾಮ್ಸನ್; ಇಲ್ಲಿದೆ ವಿವರ ಬೆಂಗಳೂರು: ಆಕರ್ಷಕ ವಿನ್ಯಾಸ ಮತ್ತು ಗರಿಷ್ಠ ಬಾಳಿಕೆಯ ಬ್ಯಾಟರಿ ಸಹಿತ ‌ಥಾಮ್ಸನ್ ನೂತನ ಲ್ಯಾಪ್‌ಟಾಪ್ ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಇದರ ಬೆಲೆ ₹14,990ರಿಂದ ಪ್ರಾರಂಭವಾಗಲಿದೆ. 52 ದೇಶಗಳಲ್ಲಿ ಅತಿದೊಡ್ಡ ಆನ್‌ಲೈನ್‌ ಸೆಲ್ಲಿಂಗ್ ಬ್ರ್ಯಾಂಡ್‌ ಎಂಬ ಖ್ಯಾತಿ ಪಡೆದಿರುವ ಥಾಮನ್ಸ್‌, ಇದೀಗ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ವೈವಿಧ್ಯಮಯ ಲ್ಯಾಪ್‌ಟಾಪ್‌ಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಅನಾವರಣಗೊಳಿಸಿದೆ. ಈ ಲ್ಯಾಪ್‌ಟಾಪ್‌ಗಳು 12th ಇಂಟೆಲ್ ಕೋರ್ i3, i5, i7 ಪ್ರೊಸೆಸರ್ ಮತ್ತು ಇಂಟೆಲ್‌ ಸೆಲೆರಾನ್‌ ಪ್ರೊಸೆಸರ್‌ ಅನ್ನು ಒಳಗೊಂಡಿರಲಿವೆ. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಮತ್ತು ಟೆಕ್ ಉದ್ಯೋಗಿಗಳ ಅಗತ್ಯವನ್ನು ಈಡೇರಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿಯು ತಿಳಿಸಿದೆ. ಹೊಸ ಲ್ಯಾಪ್‌ಟಾಪ್‌ಗಳು ಎಲ್ಲಾ ಆನ್‌ಲೈನ್‌ ಸ್ಟೋರ್‌ಗಳಲ್ಲಿ ಲಭ್ಯ ಇವೆ ಎಂದು ಕಂಪನಿ ಮಾಹಿತಿ ನೀಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.