ಮೊಬೈಲ್‌ ಬಳಕೆದಾರರಿಗೆ ‘ಫೇಸ್‌ ಸ್ಕ್ಯಾನ್‌’ ಕಡ್ಡಾಯ ಬೀಜಿಂಗ್‌: ಹೊಸ ಮೊಬೈಲ್‌ ಖರೀದಿಸುವ ಗ್ರಾಹಕರಿಗೆ ‘ಫೇಸ್‌ ಸ್ಕ್ಯಾನ್‌’ ಅನ್ನು ಚೀನಾ ಕಡ್ಡಾಯಗೊಳಿಸಿದೆ. ಸೈಬರ್‌ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಭಾನುವಾರದಿಂದಲೇ ಮೊಬೈಲ್ ಮಾರಾಟ ಅಂಗಡಿಗಳಲ್ಲಿ ಈ ನಿಯಮ ಜಾರಿಗೊಂಡಿದೆ ಎಂದು ಮಾಹಿತಿ ತಂತ್ರಜ್ಞಾನ ಪ್ರಾಧಿಕಾರ ತಿಳಿಸಿದೆ. ಆನ್‌ಲೈನ್‌ನಲ್ಲಿ ನಾಗರಿಕರ ಹಕ್ಕುಗಳು ಮತ್ತು ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಕಳೆದ ಸೆಪ್ಟೆಂಬರ್‌ನಲ್ಲಿ ಚೀನಾದ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಿತ್ತು. ಈ ಸೂಚನೆ ಅನ್ವಯ ಮೊಬೈಲ್‌ ಬಳಕೆದಾರರು ಸಿಮ್‌ ಪಡೆಯಲು ಹಾಗೂ ಮೊಬೈಲ್‌ ಖರೀದಿಸಲು ಫೇಸ್‌ ಸ್ಕ್ಯಾನ್‌ ಮಾಡಿಸುವುದು ಕಡ್ಡಾಯವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.