ಗಣರಾಜ್ಯೋತ್ಸವಕ್ಕೆ ಆಕರ್ಷಕ ಬೆಲೆಯಲ್ಲಿ ರಿಯಲ್‌ಮಿ ನವದೆಹಲಿ: ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ರಿಯಲ್‌ಮಿ, ಗಣರಾಜ್ಯೋತ್ಸವದ ಪ್ರಯುಕ್ತ ‘ರಿಯಲ್‌ಪಬ್ಲಿಕ್‌ ಸೇಲ್‌’ ಘೋಷಿಸಿದೆ. ಅತ್ಯಂತ ಜನಪ್ರಿಯವಾಗಿರುವ ಸ್ಮಾರ್ಟ್‌ಫೋನ್‌ಗಳಿಗೆ ₹ 2 ಸಾವಿರದವರೆಗೂ ರಿಯಾಯ್ತಿ ಸಿಗಲಿದೆ. ಜನವರಿ 19 ರಂದು ರಾತ್ರಿ 11.59ಕ್ಕೆ ಸರಿಯಾಗಿ ಫ್ಲಿಪ್‌ಕಾರ್ಟ್‌ ಮತ್ತು ರಿಯಲ್‌ಮಿ ಜಾಲತಾಣಗಳಲ್ಲಿ ಮಾರಾಟ ಆರಂಭವಾಗಲಿದ್ದು, 22ರಂದು ರಾತ್ರಿ11.59ಕ್ಕೆ ಮುಕ್ತಾಯವಾಗಲಿದೆ. ಈ ಅವಧಿಯಲ್ಲಿ ರಿಯಲ್‌ಮಿ 3, ರಿಯಲ್‌ಮಿ 5ಪ್ರೊ, ರಿಯಲ್‌ಮಿ ಎಕ್ಸ್‌ ಮತ್ತು ಎಕ್ಸ್‌ಟಿ ಸ್ಮಾರ್ಟ್‌ಫೋನ್‌ಗಳು ವಿಶೇಷ ಬೆಲೆಯಲ್ಲಿ ಫ್ಲಿಪ್‌ಕಾರ್ಟ್‌ ಮತ್ತು ರಿಯಲ್‌ಮಿಡಾಟ್‌ಕಾಂನಲ್ಲಿ ಖರೀದಿಗೆ ಲಭ್ಯವಾಗಲಿವೆ ಎಂದು ಕಂಪನಿ ತಿಳೀಸಿದೆ. ಜ.18ರಿಂದ 22ರ ಅವಧಿಯಲ್ಲಿ ರಿಯಲ್‌ಮಿ ಬಡ್ಸ್‌ 2 ಮತ್ತು ರಿಯಲ್‌ಮಿ ಬಡ್ಸ್‌ ವೈರ್‌ಲೆಸ್‌ ಆಕರ್ಷ ಬೆಲೆಯಲ್ಲಿ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದಾಗಿದೆ. ಬೆಲೆಯ ವಿವರ ಹ್ಯಾಂಡ್‌ಸೆಟ್‌–ಹಾಲಿ ಬೆಲೆ–ಮಾರಾಟ ಬೆಲೆ ರಿಯಲ್‌ಮಿ 3 (3+32ಜಿಬಿ)– ₹ 7,999–₹ 6,999 3+64ಜಿಬಿ–₹8,999₹ 7,499 4+64ಜಿಬಿ–₹9,999–₹ 7,999 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.