ಥಾಮ್ಸನ್‌ ಸ್ಮಾರ್ಟ್‌ ಟಿವಿ ರಿಯಾಯಿತಿ ಕೊಡುಗೆ: ₹9,999ರಿಂದ ಆರಂಭ ನವದೆಹಲಿ: ಥಾಮ್ಸನ್‌ ತನ್ನ ಹೊಸ ಟಿವಿಗಳ ದರ ಕಡಿತ ಘೋಷಿಸಿದೆ. ಮಾರ್ಚ್‌ 19ರಿಂದ ಆರಂಭವಾಗಿರುವಫ್ಲಿಪ್‌ಕಾರ್ಟ್‌ ಬಿಗ್‌ ಸೇಲ್‌ ಡೇನಲ್ಲಿ ಅತಿ ಕಡಿಮೆ ಬೆಲೆಗೆ ಥಾಮ್ಸನ್‌ ಟಿವಿ ಲಭ್ಯವಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ 40 ಇಂಚುಗಳ 4ಕೆ ಟಿವಿ 21,999ಕ್ಕೆ ಲಭ್ಯವಿದೆ. ಪೂರ್ಣ ಸ್ಮಾರ್ಟ್‌ ಆಯ್ಕೆಗಳನ್ನು ಒಳಗೊಂಡಿರುವ ಥಾಮ್ಸನ್‌ ಟಿವಿಗಳಿಗೆ ₹9,999ರಿಂದ ₹17,999 ಬೆಲೆ ನಿಗದಿಯಾಗಿದೆ. 40 ಇಂಚು 4ಕೆ ಟಿವಿಗಳ ಆರಂಭಿಕ ಬೆಲೆ ₹19,499 ಇದೆ. ಸ್ಮಾರ್ಟ್‌ ಅಲ್ಲದ ಎಲ್‌ಇಡಿ ಟಿವಿಗಳು ₹7,499ಕ್ಕೆ ಲಭ್ಯವಿದೆ. 2019ರಲ್ಲಿ ಥಾಮ್ಸನ್‌ 4ಕೆ ಮತ್ತು ಆ್ಯಂಡ್ರಾಯ್ಡ್‌ ಸ್ಮಾರ್ಟ್‌ ಟಿವಿಗಳನ್ನು ಪರಿಚಯಿಸಿತು. ಭಾರತದ ಗ್ರಾಹಕರಿಗೆ ಕೈಗೆಟುಕುವ ಬೆಲೆಗೆ ಉತ್ತಮ ಆಯ್ಕೆಗಳನ್ನು ಹೊಂದಿರುವ ಹಾಗೂ 4ಕೆ ಗುಣಮಟ್ಟದ ವಿಡಿಯೊಗಳ ವೀಕ್ಷಣೆಗೆ ಸಹಕಾರಿಯಾಗುವ ಟಿವಿಗಳನ್ನು ಪೂರೈಸಲು ಕಂಪನಿ ಪ್ರಯತ್ನಿಸುತ್ತಿದೆ. ಥಾಮ್ಸನ್‌ ಪೂರ್ಣ ಭಾರತದಲ್ಲಿಯೇ ತಯಾರಾಗುತ್ತಿರುವ ಏಕೈಕ ಟಿವಿ ಬ್ರ್ಯಾಂಡ್‌ ಆಗಿದೆ.ಸೂಪರ್‌ ಪ್ಲಾಸ್ಟ್ರಾನಿಕ್ಸ್‌ ಪ್ರೈ. ಲಿ. () ಟಿವಿಗಳ ತಯಾರಿ, ಮಾರಾಟ ನಡೆಸುತ್ತಿದೆ. ಕಂಪನಿಯಅಧಿಕೃತ ವೆಬ್‌ಸೈಟ್‌ .. ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. 32 ಇಂಚು ಎಚ್‌ಡಿ ಎಲ್‌ಇಡಿ ಸ್ಮಾರ್ಟ್‌ ಟಿವಿ– ₹9,999 40 ಇಂಚು ಅಲ್ಟ್ರಾ ಎಚ್‌ಡಿ (4ಕೆ)ಎಲ್‌ಇಡಿ ಸ್ಮಾರ್ಟ್‌ ಟಿವಿ– ₹19,499 65 ಇಂಚು ಅಲ್ಟ್ರಾ ಎಚ್‌ಡಿ (4ಕೆ)ಎಲ್‌ಇಡಿ ಸ್ಮಾರ್ಟ್‌ ಟಿವಿ– ₹52,999 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.