ಗೃಹ ಸಾಧನಗಳ ಕ್ಷೇತ್ರಕ್ಕೆ ಥಾಮ್ಸನ್ ಪ್ರವೇಶ: ವಾಷಿಂಗ್‌ ಮೆಷಿನ್‌ ಬಿಡುಗಡೆ ಬೆಂಗಳೂರು: ಫ್ರೆಂಚ್ ಎಲೆಕ್ಟ್ರಾನಿಕ್ಸ್‌ ಬ್ರ್ಯಾಂಡ್‌ ಥಾಮ್ಸನ್, ಭಾರತದಲ್ಲಿ ಸೂಪರ್ ಪ್ಲಾಸ್ಟ್ರೋನಿಕ್ಸ್‌ ಲಿಮಿಟೆಡ್‌ಗೆ ತನ್ನ ಗೃಹ ಎಲೆಕ್ಟ್ರಾನಿಕ್‌ ವಲಯದ ವಿಸ್ತರಣೆಗೆ ಅನುಮತಿ ನೀಡಿದ್ದು, ವಾಷಿಂಗ್ ಮೆಷಿನ್‌ಗಳನ್ನು ಜೂನ್ 23ರಂದು ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಬಿಡುಗಡೆ ಮಾಡಿದೆ. ಈಗಾಲೇ ಟಿವಿಗಳನ್ನು ದೇಶೀಯವಾಗಿ ತಯಾರಿಸುತ್ತಿರುವ ಥಾಮ್ಸನ್‌, ವಾಷಿಂಗ್ ಮೆಷಿನ್‌ಗಳನ್ನೂ ಸಂಪೂರ್ಣವಾಗಿ ಭಾರತದಲ್ಲಿಯೇ ನಿರ್ಮಿಸುತ್ತಿದೆ. ಸೆಮಿ-ಆಟೊಮ್ಯಾಟಿಕ್ ಶ್ರೇಣಿಯ ವಾಷಿಂಗ್‌ ಮೆಷಿನ್‌ ಆರಂಭಿಕ ಬೆಲೆ ₹6,999 ನಿಗದಿ ಪಡಿಸಿದೆ. ಥಾಮ್ಸನ್ ಮುಂಬರುವ ದಿನಗಳಲ್ಲಿ ಹೊಸ ಮಾದರಿಗಳನ್ನು ಬಿಡುಗಡೆ ಮಾಡಲಿದೆ. ಈ ಸೆಮಿ-ಆಟೊಮ್ಯಾಟಿಕ್ ವಾಷಿಂಗ್ ಮೆಷಿನ್‌ಗಳು 3 ಭಿನ್ನ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 6.5 ಕೆ.ಜಿ, 7.5 ಕೆ.ಜಿ. ಮತ್ತು 8.5 ಕೆ.ಜಿ.ಗಳ ಪೈಕಿ ಉಪಯೋಗಕ್ಕೆ ಅನುಗುಣವಾಗಿ ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು. ಕಂಪನಿಯು ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ₹1,000 ಕೋಟಿ ಹೂಡಿಕೆ ಮಾಡಲಿದೆ. ಉತ್ಪಾದನಾ ಪಾಲುದಾರ ಮತ್ತು ಭಾರತದ ಥಾಮ್ಸನ್ ಬ್ರಾಂಡ್ ಲೈಸನ್ಸ್ ಪಡೆದ ಎಸ್‌ಪಿಪಿಎಲ್ ಕೂಡಾ ಉತ್ತರ ಪ್ರದೇಶದ ಹೊಸ ಘಟಕದಲ್ಲಿ ಹೂಡಿಕೆ ಮಾಡಿದ್ದು ಸದ್ಯದಲ್ಲೇ ಕಾರ್ಯಾಚರಣೆ ಪ್ರಾರಂಭಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.