ಥಾಮ್ಸನ್ ಟಿವಿಯಿಂದ ಕನಿಷ್ಠ ಬೆಲೆಯಲ್ಲಿ ಸ್ಮಾರ್ಟ್ ಟಿವಿಗಳ ಕೊಡುಗೆ ನವದೆಹಲಿ: ದೀಪಾವಳಿ ಮತ್ತು ಬಿಗ್ ಬಿಲಿಯನ್ ಡೇಸ್, ಫ್ಲಿಪ್ಕಾರ್ಟ್ ಟಿವಿ ಡೇಸ್ ಮಾರಾಟದಲ್ಲಿ ಭರ್ಜರಿ ಯಶಸ್ಸಿನ ಬಳಿಕ ಥಾಮ್ಸನ್ ಸ್ಮಾರ್ಟ್ ಟಿವಿಗಳು, ವರ್ಷಾಂತ್ಯದಲ್ಲಿ ಡಿಸೆಂಬರ್ 26ರಿಂದ 30ರವರೆಗೆ ನಡೆಯಲಿರುವ 'ಫ್ಲಿಪ್ಕಾರ್ಟ್ ಎಲೆಕ್ಟ್ರಾನಿಕ್ಸ್ ಮಾರಾಟ' ಮೇಳದಲ್ಲಿ ಗ್ರಾಹಕರಿಗೆ ಹೆಚ್ಚಿನ ಖುಷಿ ಮತ್ತು ಉತ್ಸಾಹ ನೀಡಲು ಮತ್ತೊಮ್ಮೆ ಸಿದ್ಧತೆ ನಡೆಸಿವೆ. ಮನೆಗೆ ಸ್ಮಾರ್ಟ್ ಟಿವಿಗಳನ್ನು ತರಲೊಂದು ಸೂಕ್ತ ಕಾರಣ ಹಾಗೂ ಗ್ರಾಹಕರಿಗೆ ಸ್ಮಾರ್ಟ್ ಆಯ್ಕೆಗಳನ್ನು ನೀಡುವ ಮೂಲಕ ಥಾಮ್ಸನ್, ಇತ್ತೀಚೆಗೆ ಬಿಡುಗಡೆಗೊಳಿಸಿರುವ ಪಾಥ್ ಹಾಗೂ ಓಥ್-ಪ್ರೋ ಸರಣಿಯ ಎಲ್ಲ ಟಿವಿಗಳಿಗೆ ಭಾರಿ ರಿಯಾಯಿತಿ ಘೋಷಿಸಿದೆ. ರೂ.7,999ರ ಕನಿಷ್ಠ ಆರಂಭಿಕ ಬೆಲೆಗಳಲ್ಲಿ ಸ್ಮಾರ್ಟ್ ಟಿವಿ ಲಭ್ಯವಾಗಲಿದೆ. ಸರಣಿ, ಸ್ಕ್ರೀನ್ ಗಾತ್ರ ಹಾಗೂ ದರ ಪಟ್ಟಿ ಇಲ್ಲಿದೆ ಬ್ರ್ಯಾಂಡ್ ಗಾತ್ರ ಹಾಗೂ ಸರಣಿ ಕೊಡುಗೆಯ ಬೆಲೆ ಥಾಮ್ಸನ್ 24”TM2490 7,999 ಥಾಮ್ಸನ್ 32”TM3290 11,499 ಥಾಮ್ಸನ್ 32”PATH0011 12,999 ಥಾಮ್ಸನ್ 32”PATH0011BL 13,499 ಥಾಮ್ಸನ್ 40”PATH7777 17,499 ಥಾಮ್ಸನ್ 43”PATH0009 21,999 ಥಾಮ್ಸನ್ 43”PATH4545 22,999 ಥಾಮ್ಸನ್ 43”OATHPRO2000 24,999 ಥಾಮ್ಸನ್ 50”PATH1010 28,999 ಥಾಮ್ಸನ್ 50 OATHPRO1212 30,999 ಥಾಮ್ಸನ್ 55PATH5050 34,999 ಥಾಮ್ಸನ್ 55 0101 37,499 ಥಾಮ್ಸನ್ 65 OATHPRO2020 49,999 ಥಾಮ್ಸನ್ 75 OATHPRO2121 99,999 ಜಾಗತಿಕವಾಗಿ ತನ್ನ ಅತ್ಯುತ್ತಮ ಹಾಗೂ 'ಸ್ನೇಹಮಯ ತಂತ್ರಜ್ಞಾನ'ಕ್ಕಾಗಿ ಹೆಸರು ಗಳಿಸಿರುವ ಥಾಮ್ಸನ್ ಟಿವಿಗಳು, ಅಗಲವಾದ ಪರದೆಗಳಲ್ಲಿ ಜೀವಂತ ಚಿತ್ರಗಳಿಗೆ ಸರಿಸಮವಾದ ವೀಕ್ಷಣಾ ಅನುಭವವನ್ನು ನೀಡುತ್ತಾ ಬಂದಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.