ಕಡಿಮೆ ಬೆಲೆಯ ‘ರೆಡ್‌ಮಿ 9’ ದೇಶದ ಮುಂಚೂಣಿ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಮಿ ಇಂಡಿಯಾ, ದೇಶದ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್‌ ‘ರೆಡ್‌ಮಿ 9’ ಬಿಡುಗಡೆ ಮಾಡಿದೆ. ಪ್ರತಿಯೊಬ್ಬರಿಗೂ ನವೀನ ತಂತ್ರಜ್ಞಾನ ಲಭ್ಯವಾಗಿಸುವಉದ್ದೇಶದ ಭಾಗವಾಗಿ ಕಡಿಮೆ ಬೆಲೆಗೆ ಗರಿಷ್ಠ ಮೌಲ್ಯ ತಂದುಕೊಂಡುವ ಹೊಸ ಸ್ಮಾರ್ಟ್‌ಫೋನ್‌ ಇದು ಎಂದು ಕಂಪನಿ ಹೇಳಿಕೊಂಡಿದೆ. ‘ಜಾಗತಿಕವಾಗಿ ರೆಡ್‌ಮಿ 8 ಸರಣಿಯ 2.5 ಕೋಟಿ ಸ್ಮಾರ್ಟ್‌ಫೋನ್‌ ಮಾರಾಟವಾಗಿವೆ. ಇದು ಕಂಪನಿಯ ಬಗ್ಗೆ ಗ್ರಾಹಕರು ಹೊಂದಿರುವ ನಂಬಿಕೆಯನ್ನು ಸೂಚಿಸುತ್ತದೆ. ಇದೀಗ ರೆಡ್‌ಮಿ 9 ಮೂಲಕ ಸರಣಿ ಮುಂದುವರಿಸಲಾಗುತ್ತಿದೆ’ ಎಂದು ರೆಡ್‌ಮಿ ಇಂಡಿಯಾದ ಮುಖ್ಯಸ್ಥೆ ಸ್ನೇಹಾ ತೈನ್‌ವಾಲಾ ತಿಳಿಸಿದ್ದಾರೆ. ರೆಡ್‌ಮಿ 9, ಕಾರ್ಬನ್‌ ಬ್ಲಾಕ್‌, ಸ್ಪೋರ್ಟಿ ಆರೇಂಜ್‌, ಸ್ಕೈ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ. ಅಮೆಜಾನ್‌ ಇಂಡಿಯಾ, ಮಿ ಹೋಮ್ಸ್‌ ಮತ್ತು ಮಿ ಸ್ಟೂಡಿಯೋಸ್‌ಗಳಲ್ಲಿ ಇದೇ ತಿಂಗಳ 31ರಿಂದ ಖರೀದಿಸಬಹುದು. ವೈಶಿಷ್ಟ್ಯ *ಡಿಸ್‌ಪ್ಲೇ; 6.53 ಎಚ್‌ಡಿ ಪ್ಲಸ್ *ಹಿಂಬದಿ ಕ್ಯಾಮೆರಾ; 13ಎಂಪಿ, 2 ಎಂಪಿ ಡೆಪ್ತ್‌ ಸೆನ್ಸರ್ *ಮುಂಬದಿ ಕ್ಯಾಮೆರಾ; 5 ಎಂಪಿ *ಪ್ರೊಸೆಸರ್; ಮೀಡಿಯಾ ಟೆಕ್‌ ಹೀಲಿಯೊ ಜಿ35 12ಎನ್‌ಎಂ ಪ್ರೊಸೆಸರ್‌ ಟೆಕ್ನಾಲಜಿ. ಆಕ್ಟಾ ಕೋರ್‌ ಸಿಪಿಯು *ಒಎಸ್‌; ಆಂಡ್ರಾಯ್ಡ್‌ 10 ಆಧಾರಿತ 12 *ಸೆಕ್ಯುರಿಟಿ: ಫ್ರಿಂಗರ್‌ಪ್ರಿಂಟ್‌ ಸ್ಕ್ಯಾನರ್‌, ಎಐ ಫೇಸ್‌ ಅನ್‌ಲಾಕ್‌ *ಬ್ಯಾಟರಿ; 5,000 ಎಂಎಎಚ್‌ ಬ್ಯಾಟರಿ. 10ಡಬ್ಲ್ಯು ಇನ್‌ ಬಾಕ್ಸ್‌ ಚಾರ್ಜರ್‌ *ನೆಟ್‌ವರ್ಕ್‌; ಡ್ಯುಯಲ್‌ 4ಜಿ ಸ್ಟ್ಯಾಂಡ್‌ಬೈ *ಬೆಲೆ: 4+64ಜಿಬಿ; ₹ 8,999. 4+128ಜಿಬಿ; ₹ 9,999 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.