ರಿಲಯನ್ಸ್ ಡಿಜಿಟಲ್‌ನಲ್ಲಿ ಗ್ಯಾಲಕ್ಸಿ ಎಫ್‌ 62 ಸ್ಮಾರ್ಟ್‌ಫೋನ್‌ ಬೆಂಗಳೂರು: ಸ್ಯಾಮ್‌ಸಂಗ್‌ ಕಂಪನಿಯ ‘ಗ್ಯಾಲಕ್ಸಿ ಎಫ್‌ 62’ ಹೊಸ ಸ್ಮಾರ್ಟ್‌ಫೋನ್‌ ರಿಲಯನ್ಸ್‌ ಡಿಜಿಟಲ್ ಮತ್ತು ಮೈಜಿಯೋ ಸ್ಟೋರ್‌ಗಳಲ್ಲಿ ಸೋಮವಾರದಿಂದ ಲಭ್ಯವಾಗಲಿದೆ. ‘ಗ್ಯಾಲಕ್ಸಿ ಎಫ್‌ 62’ ಸ್ಮಾರ್ಟ್‌ಫೋನ್‌ನಲ್ಲಿ 2.73 ಗಿಗಾಹರ್ಟ್ಸ್ ಒಕ್ಟಾ ಕೋರ್ ಪ್ರೊಸೆಸರ್, 128 ಜಿ.ಬಿ. ವಿಸ್ತರಿಸಬಹುದಾದ ಸ್ಟೊರೇಜ್‌ ಮತ್ತು ಕಲರ್ ಸೂಪರ್ ಅಮೊಲೆಡ್‌ ಸ್ಕ್ರೀನ್ ಇವೆ. 7,000 ಎಂಎಎಚ್‌ ಬ್ಯಾಟರಿಯಿಂದಾಗಿ ಇದು ಆಟ ಆಡಲು ಕೂಡ ಅತ್ಯಂತ ಸೂಕ್ತವಾಗಿದೆ ಎಂದು ಕಂಪನಿ ಹೇಳಿದೆ. ₹ 21,499ರಿಂದ ಇದರ ಬೆಲೆ ಆರಂಭವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.