ಹೊಸ , , ಸರಣಿಯ ಸ್ಮಾರ್ಟ್‌ಫೋನ್ ಪರಿಚಯಿಸಿದ ನೋಕಿಯಾ ಫಿನ್‌ಲ್ಯಾಂಡ್ ಮೂಲದ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕ ಸಂಸ್ಥೆ ಎಚ್‌ಎಂಡಿ ಗ್ಲೋಬಲ್, ಹೊಸ ನೋಕಿಯಾ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೋಕಿಯಾ ನೂತನ ಸರಣಿಯಲ್ಲಿ ಎಕ್ಸ್, ಜಿ ಮತ್ತು ಸಿ ಸ್ಮಾರ್ಟ್‌‌ಫೋನ್‌ಗಳು ಬಿಡುಗಡೆಯಾಗಿವೆ. ಹೊಸ ಎಕ್ಸ್ ಸರಣಿಯಲ್ಲಿ X20 ಮತ್ತು X10 ಎಂಬ ಎರಡು ಆಕರ್ಷಕ ಮಾದರಿಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ. ಜಿ ಸರಣಿಯಲ್ಲಿ G20 ಮತ್ತು G10 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದರೆ, ಸಿ ಸರಣಿಯಲ್ಲಿ C20 ಮತ್ತು C10 ಎಂಬ ಎರಡು ಮಾದರಿಗಳು ಹೊಸದಾಗಿ ಪರಿಚಯಿಸಲ್ಪಟ್ಟಿವೆ. ಹೊಸ ಸರಣಿಯಲ್ಲಿ 6 ನೂತನ ಸ್ಮಾರ್ಟ್‌ಫೋನ್ ಜತೆಗೇ, ನೋಕಿಯಾ ಲೈಟ್ ಇಯರ್‌ಬಡ್ಸ್ ಕೂಡ ಬಿಡುಗಡೆಯಾಗಿದೆ. ಲೈಟ್ ಇಯರ್‌ಬಡ್ಸ್ ಏಪ್ರಿಲ್ 8ರಿಂದಲೇ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ಪೈಕಿ ಎಕ್ಸ್ ಸರಣಿಯ ಸ್ಮಾರ್ಟ್‌ಫೋನ್‌ಗಳು ಜೂನ್‌ನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ. ಜಿ ಸರಣಿ ಮೇ ತಿಂಗಳಿನಲ್ಲಿ ಮತ್ತು ಸಿ ಸರಣಿ ಕೂಡ ಜಾಗತಿಕವಾಗಿ ಮೇ ತಿಂಗಳಿನಲ್ಲಿಯೇ ಬಳಕೆದಾರರಿಗೆ ಖರೀದಿಗೆ ಲಭ್ಯವಾಗಲಿದೆ. F19: ದೇಶದ ಮಾರುಕಟ್ಟೆಗೆ ತ್ರಿವಳಿ ಕ್ಯಾಮರಾ ಸಹಿತ ಒಪ್ಪೊ ಫೋನ್ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.