: ಹೊಸ ಸರಣಿಯ ಆಕರ್ಷಕ ಐಮ್ಯಾಕ್ ಬಿಡುಗಡೆ ಮಾಡಿದ ಆ್ಯಪಲ್ ಬೆಂಗಳೂರು: ಮಂಗಳವಾರ ನಡೆದ ಆ್ಯಪಲ್ ವಿಶೇಷ ಈವೆಂಟ್‌ನಲ್ಲಿ ಹೊಸ ಐಮ್ಯಾಕ್ ಕಂಪ್ಯೂಟರ್ ಬಿಡುಗಡೆ ಮಾಡಿದೆ. ಆಕರ್ಷಕ ವಿನ್ಯಾಸ ಮತ್ತು ವಿವಿಧ ಬಣ್ಣಗಳಲ್ಲಿ ನೂತನ ಐಮ್ಯಾಕ್ ಮಾರುಕಟ್ಟೆ ಪ್ರವೇಶಿಸಿದೆ. ಏಳು ಆಕರ್ಷಕ ಬಣ್ಣಗಳು ಹಸಿರು, ಹಳದಿ, ಕಿತ್ತಳೆ, ನೀಲಿ, ನೇರಳೆ, ಗುಲಾಬಿ ಮತ್ತು ಬೆಳ್ಳಿ ಬಣ್ಣಗಳಲ್ಲಿ ಲಭ್ಯವಿದೆ. ಆಕರ್ಷಕ ವಿನ್ಯಾಸ ಡಾಲ್ಬಿ ಅಟ್ಮೋಸ್, 1080p ಫೇಸ್‌ಟೈಮ್ ಎಚ್‌ಡಿ ಕ್ಯಾಮರಾ, 4.5K 24 ಇಂಚಿನ ರೆಟಿನಾ ಡಿಸ್‌ಪ್ಲೇ ಇದರಲ್ಲಿದೆ. ಜತೆಗೆ ಆ್ಯಪಲ್ M1 ಚಿಪ್ ಸಹಿತ ನೂತನ ಐಮ್ಯಾಕ್‌ ದೊರೆಯಲಿದೆ. ಆ್ಯಪಲ್ ವೆಬ್‌ಸೈಟ್ ಮತ್ತು ಸ್ಟೋರ್ ಮೂಲಕ ಏಪ್ರಿಲ್ 30ರಿಂದ ಪ್ರಿ ಆರ್ಡರ್ ಲಭ್ಯವಿದೆ. ಮೇ ತಿಂಗಳಿನಲ್ಲಿ ಗ್ರಾಹಕರಿಗೆ ದೊರೆಯಲಿದೆ. ಬೆಲೆ ವಿವರ ಹೊಸ ಐಮ್ಯಾಕ್ ದರ ₹1,19,900 ರಿಂದ ಆರಂಭವಾಗುತ್ತದೆ. 8GB ಮೆಮೊರಿ ಮತ್ತು 256GB ಸ್ಟೋರೇಜ್ ಕೂಡ ಇದರಲ್ಲಿದೆ. ಜತೆಗೆ ಹೊಸ ವಿನ್ಯಾಸದಲ್ಲಿ ಮ್ಯಾಜಿಕ್ ಕೀಬೋರ್ಡ್, ಮ್ಯಾಜಿಕ್ ಮೌಸ್ ಕೂಡ ಬಿಡುಗಡೆಯಾಗಿದೆ. : ಹೊಸ ಐಫೋನ್ 12, ಐಪ್ಯಾಡ್ ಪ್ರೊ, ಏರ್‌ಟ್ಯಾಗ್, ಐಮ್ಯಾಕ್ ಬಿಡುಗಡೆ ಅಲ್ಲದೆ ಆ್ಯಪಲ್ ಈವೆಂಟ್‌ನಲ್ಲಿ ಹೊಸ ಮಾದರಿಯ ಆ್ಯಪಲ್ ಏರ್‌ಟ್ಯಾಗ್, ಐಪ್ಯಾಡ್ ಪ್ರೊ, ಐಫೋನ್ 12 ಪರ್ಪಲ್ ಕೂಡ ಬಿಡುಗಡೆಯಾಗಿದೆ. 12: ಆಕರ್ಷಕ ಪರ್ಪಲ್ ಐಫೋನ್ ಆವೃತ್ತಿ ಬಿಡುಗಡೆ ಮಾಡಿದ ಆ್ಯಪಲ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.