ಮೈಕ್ರೋಮ್ಯಾಕ್ಸ್ ಇನ್1 ಸ್ಮಾರ್ಟ್‌ಫೋನ್ ಬಿಡುಗಡೆ: ಏನಿದರ ವಿಶೇಷ? ನವದೆಹಲಿ: ಮೈಕ್ರೋಮ್ಯಾಕ್ಸ್ ಇ‌ನ್‌ಫೊಮ್ಯಾಟಿಕ್ಸ್ ಲಿಮಿಟೆಡ್ ಕಂಪನಿ ಇನ್1 ಸರಣಿಯ ನೂತನ ಸ್ಮಾರ್ಟ್‌ಫೋನ್‌ ಅನ್ನು ಶುಕ್ರವಾರ ಬಿಡುಗಡೆ ಮಾಡಿದೆ. ವರ್ತಮಾನದ ಅಗತ್ಯಕ್ಕೆ‌ ತಕ್ಕಂತೆ ಅಭಿವೃದ್ಧಿಪಡಿಸಲಾಗಿರುವ 'ಇನ್1' ಸ್ಮಾರ್ಟ್‌ಫೋನ್, ಭಾರತೀಯರನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲೇ ತಯಾರಿಸಿದ ಸ್ಮಾರ್ಟ್‌ಫೋನ್ ಎಂದು ಕಂಪನಿ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: 1b: ಅಗ್ಗದ ಬೆಲೆಯಲ್ಲಿ ಉತ್ತಮ ದೇಸೀ ಫೋನ್ ಏನೇನು ಫೀಚರ್ಸ್? ಮೈಕ್ರೋಮ್ಯಾಕ್ಸ್ ಇನ್1 ಸ್ಮಾರ್ಟ್‌ಫೋನ್ 6.67 ಎಫ್ಎಚ್‌ಡಿ + ಪಂಚ್-ಹೋಲ್ ಡಿಸ್‌ಪ್ಲೇ, 48 ಮೆಗಾ ಪಿಕ್ಸೆಲ್ ಟ್ರಿಪಲ್ ಎಐ ಕ್ಯಾಮೆರಾ, ಪವರ್‌ಫುಲ್ ಮೀಡಿಯಾಟೆಕ್ ಹಿಲಿಯೊ ಜಿ80 ಪ್ರೊಸೆಸರ್, ಆ್ಯಂಡ್ರಾಯ್ಡ್ ಓಎಸ್ ಒಳಗೊಂಡಿರಲಿದೆ. ಮೆಮೊರಿ ಎಷ್ಟು? ಇನ್1 ಸರಣಿಯಲ್ಲಿ ಎರಡು ಆವೃತ್ತಿ ಲಭ್ಯವಿವೆ. ಮೊದಲನೆಯದು 4 , 64 ಮೆಮೊರಿ ಹೊಂದಿದ್ದು, ಇನ್ನೊಂದು 6 ಮತ್ತು 128 ಮೆಮೊರಿ ಹೊಂದಿದೆ. ನೇರಳೆ ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಿವೆ.\ ಇದನ್ನೂ ಓದಿ:'' ಫಾರ್‌ ಇಂಡಿಯಾ; ಹೊಸ ರೂಪದಲ್ಲಿ ದೇಶೀಯ ಮೈಕ್ರೊಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ ಬೆಲೆ‌ ವಿವರ 4 , 64 ಮೆಮೊರಿಯ ಇನ್1 ಸ್ಮಾರ್ಟ್‌ಫೋನ್ ಬೆಲೆ ₹10,499 ಹಾಗೂ 6 ಮತ್ತು 128 ಮೆಮೊರಿಯ ಇನ್1 ಸ್ಮಾರ್ಟ್‌ಫೋನ್ ಬೆಲೆ ₹11,999 ಇರಲಿದೆ. ಎಲ್ಲಿ, ಯಾವಾಗ ಖರೀದಿಗೆ ಲಭ್ಯ? ಮೈಕ್ರೋಮ್ಯಾಕ್ಸ್ ಇನ್‌ಫೊ ಡಾಟ್ ಕಾಂ (.) ಹಾಗೂ ಫ್ಲಿಪ್‌ಕಾರ್ಟ್‌ಗಳಲ್ಲಿ ಮಾರ್ಚ್ 26ರ ಮಧ್ಯಾಹ್ನ 12 ಗಂಟೆಯಿಂದ ಇನ್1 ಸ್ಮಾರ್ಟ್‌ಫೋನ್ ಮಾರಾಟ ಆರಂಭವಾಗಲಿದೆ. ₹500 ರಿಯಾಯಿತಿ ಎರಡೂ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಿಗೆ ಆರಂಭಿಕ‌ ಕೊಡುಗೆಯಾಗಿ ₹500 ರಿಯಾಯಿತಿ ಘೋಷಿಸಲಾಗಿದೆ. ಇದರಿಂದಾಗಿ 4 , 64 ಮೆಮೊರಿಯ ಇನ್1 ಸ್ಮಾರ್ಟ್‌ಫೋನ್ ₹9999ಕ್ಕೆ ದೊರೆಯಲಿದ್ದು, 6 ಮತ್ತು 128 ಮೆಮೊರಿಯ ಇನ್1 ಸ್ಮಾರ್ಟ್‌ಫೋನ್ ₹11,499ಕ್ಕೆ ದೊರೆಯಲಿದೆ. ಸೀಮಿತ ಅವಧಿಗೆ ಮಾತ್ರ ಈ ರಿಯಾಯಿತಿ‌ ದೊರೆಯಲಿದೆ. ಇನ್1 ವೈಶಿಷ್ಟ್ಯ ಗಳು... * 48 ಮೆಗಾಪಿಕ್ಸೆಲ್ ಎಐ ತ್ರಿವಳಿ ಹಿಂಬದಿ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಡೆಪ್ತ್ ಆಫ್ ಫೀಲ್ಡ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಮ್ಯಾಕ್ರೊ ಕ್ಯಾಮರಾ ಹೊಂದಿದೆ. 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದ್ದು ಗುಣಮಟ್ಟದ ಸೆಲ್ಫಿ ಚಿತ್ರಗಳನ್ನು ಸೆರೆಹಿಡಿಯಲು ಅನುಕೂಲಕರವಾಗಿದೆ. ಅಟೋಮ್ಯಾಟಿಕ್‌ ಬ್ರೈಟ್‌ನೆಸ್ ಹೊಂದಾಣಿಕೆ, ಬ್ಯಾಕ್‌ಗ್ರೌಂಡ್ ಬ್ಲರ್ ಇತ್ಯಾದಿ ಆಯ್ಕೆಗಳನ್ನೂ ನೀಡಲಾಗಿದೆ. * 80 ಡಿಗ್ರಿ ವಿವಿಂಗ್ ಆ್ಯಂಗಲ್, 20:9 ಸ್ಕ್ರೀನ್ ರೇಶಿಯೊ, ಶೇ 91.4 ಸ್ಕ್ರೀನ್ ಟು ಬಾಡಿ ರೇಶಿಯೊ ಹೊಂದಿದೆ. * ಕಾರ್ಟೆಕ್ಸ್-ಎ75 ಹಾಗೂ ಎ55 ಸಿಪಿಯು ಜತೆಗೆ ಮೀಡಿಯಾಟೆಕ್ ಹಿಲಿಯೊ ಜಿ80 ಪ್ರೊಸೆಸರ್ ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಉತ್ತಮ ಗೇಮಿಂಗ್ ಅನುಭವ ನೀಡಬಲ್ಲದು ಎಂದು ಮೈಕ್ರೋಮ್ಯಾಕ್ಸ್ ಹೇಳಿದೆ. * ಶೇ 100ರಷ್ಟು ಭಾರತದಲ್ಲೇ ತಯಾರಿಸಲಾಗಿರುವ ಇನ್1 ಸ್ಮಾರ್ಟ್‌ಫೋನ್ 5000 ಎಂಎಎಚ್ ಬ್ಯಾಟರಿ ಒಳಗೊಂಡಿದೆ. ಎರಡು ದಿನಗಳವರೆಗೆ ಚಾರ್ಜ್ ಉಳಿಯಲಿದ್ದು 18ವ್ಯಾಟ್ ಫಾಸ್ಟ್ ಚಾರ್ಜರ್ ಸಹ ಒಳಗೊಂಡಿದೆ. * 9ಎಂಎಂ ತಿಕ್‌ನೆಸ್, ಮೆಟಾಲಿಕ್ ಫಿನಿಶ್ ಜತೆ ಉತ್ತಮ ವಿನ್ಯಾಸ ಹೊಂದಿರುವ ಇನ್1 ಸ್ಮಾರ್ಟ್‌ಫೋನ್ ನೋಡಲು ಆಕರ್ಷಕವಾಗಿದೆ‌ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.