: ಭಾರತದಲ್ಲಿ ಮಿವಿ ಸೂಪರ್‌ಪಾಡ್ಸ್ ಒಪೆರಾ ಬಿಡುಗಡೆ, ವೈಶಿಷ್ಟ್ಯಗಳು ಬೆಂಗಳೂರು: ವೈರ್‌ಲೆಸ್ ಆಡಿಯೊ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಮಿವಿ ಸಂಸ್ಥೆಯು ಅತಿ ನೂತನ ಟ್ರೂ ವೈರ್‌ಲೈಸ್ ಸ್ಟಿರಿಯೊ (ಟಿಡಬ್ಲ್ಯುಎಸ್) ಇಯರ್‌ಬಡ್ಸ್ ಒಪೆರಾ ಅನ್ನು ಬಿಡುಗಡೆಗೊಳಿಸಿದೆ. ಸೂಪರ್‌ಪಾಡ್ಸ್ ಶ್ರೇಣಿಯ ಮೂರನೇ ತಲೆಮಾರಿನ ಈ ಇಯರ್‌ಬಡ್ಸ್, ಅತ್ಯುತ್ತಮ ಧ್ವನಿ ಒದಗಿಸುವುದರಲ್ಲಿ ಬದ್ಧತೆಯನ್ನು ಕಾಯ್ದುಕೊಂಡಿದೆ. ಜಪಾನ್ ಆಡಿಯೊ ಸೊಸೈಟಿಯಿಂದ 'ಹೈ-ರೆಸೊಲ್ಯೂಷನ್ ವೈರ್‌ಲೆಸ್ ಆಡಿಯೊ' ಮಾನ್ಯತೆ ಪಡೆದ ಭಾರತದ ಮೊದಲ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಮಿವಿ ಸೂಪರ್‌ಪಾಡ್ಸ್ ಒಪೆರಾ ಭಾಜನವಾಗಿದೆ. ಈ ಮೂಲಕ ವೈರ್‌ಲೆಸ್ ಆಡಿಯೊ ತಂತ್ರಗಾರಿಕೆಯಲ್ಲಿ ಮಗದೊಂದು ಮೈಲಿಗಲ್ಲು ಸಾಧಿಸಿದೆ. ಪ್ರಮುಖ ವೈಶಿಷ್ಟ್ಯಗಳು: ಕಟ್ಟಿಂಗ್ ಎಡ್ಜ್ ತಂತ್ರಜ್ಞಾನ, ಅಲ್ಟ್ರಾ ಎಚ್‌ಡಿ ಸೌಂಡ್, ಹೈ-ರೆಸೊಲ್ಯೂಷನ್ ಆಡಿಯೊ, : ಉನ್ನತ ಗುಣಮಟ್ಟದ ವೈರ್‌ಲೆಸ್ ಆಡಿಯೊ ಟ್ರಾನ್ಸ್‌ಮಿಷನ್, 3ಡಿ ಸೌಂಡ್‌ಸ್ಟೇಜ್, ಸೌರಂಡ್ ಸೌಂಡ್ ಅನುಭವ, ದೀರ್ಘ ಬಾಳ್ವಿಕೆಯ ಬ್ಯಾಟರಿ, ಮಿವಿ ಆಡಿಯೊ ಆ್ಯಪ್, ಬ್ಲೂಟೂತ್ v5.4, ಮಲ್ಟಿ ಡಿವೈಸ್ ಕನೆಕ್ಟಿವಿಟಿ, ಬೆಲೆ: ₹2199 ಎಲ್ಲಿ ಲಭ್ಯ? ಫ್ಲಿಪ್‌ಕಾರ್ಟ್, ಮಿವಿ ವೆಬ್‌ಸೈಟ್, ಆಯ್ದ ಮಾರಾಟ ಮಳಿಗೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.