ರಿಯಲ್‌ಮಿ 8 ಸರಣಿಯ ಸ್ಮಾರ್ಟ್‌ಫೋನ್‌ಗಳ ಬಿಡುಗುಡೆ ಬೆಂಗಳೂರು: ಸ್ಮಾರ್ಟ್‌ಫೋನ್‌ ತಯಾರಿಸುವ ರಿಯಲ್‌ಮಿ ಕಂಪನಿಯು ಭಾರತದ ಮಾರುಕಟ್ಟೆಗೆ ರಿಯಲ್‌ಮಿ 8 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬುಧವಾರ ಬಿಡುಗುಡೆ ಮಾಡಿದೆ. ರಿಯಲ್‌ಮಿ 8 ಪ್ರೊ ಸ್ಮಾರ್ಟ್‌ಫೋನ್‌ 6.4 ಇಂಚಿನಸೂಪರ್ ಅಮೊಎಲ್‌ಇಡಿ ಫುಲ್‌ ಸ್ಕ್ರೀನ್‌, ಸ್ನ್ಯಾಪ್‌ಡ್ರ್ಯಾಗನ್‌ 720ಜಿ ಪ್ರೊಸೆಸರ್, 108 ಮೆಗಾಪಿಕ್ಸಲ್‌ ಅಲ್ಟ್ರಾ ಕ್ವಾಡ್‌ ಕ್ಯಾಮೆರಾ, 4500 ಎಂಎಎಚ್‌ ಬ್ಯಾಟರಿ ಹೊಂದಿದೆ. ಬೆಲೆಯು ₹ 17,999 ₹ 19,999ರ ವರೆಗಿದೆ. ಗುರುವಾರದಿಂದ ಕಂಪನಿಯ ಜಾಲತಾಣ, ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ. ರಿಯಲ್‌ಮಿ 8 ಸ್ಮಾರ್ಟ್‌ಫೋನ್‌ 6.4 ಇಂಚಿನ ಸೂಪರ್ ಅಮೊಎಲ್‌ಇಡಿ ಫುಲ್‌ ಸ್ಕ್ರೀನ್‌, ಹೀಲಿಯೊ ಜಿ95 ಗೇಮಿಂಗ್‌ ಪ್ರೊಸೆಸರ್, 64 ಎಂಪಿ ಎಐ ಕ್ವಾಡ್‌ ಕ್ಯಾಮೆರಾ, 5000 ಎಂಎಎಚ್‌ ಬ್ಯಾಟರಿ ಹೊಂದಿದ್ದು, ಬೆಲೆಯು ₹ 14,999 ರಿಂದ ₹ 16,999ರವರೆಗಿದೆ. ಬುಧವಾರದಿಂದಲೇ ಖರೀದಿಗೆ ಮುಕ್ತವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.