X3 : ದೇಶದ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಬೆಂಗಳೂರು: ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಪ್ರಮುಖ ಕಂಪನಿ ಪೋಕೋ, ಹೊಸ ಎಕ್ಸ್ ಸರಣಿಯಲ್ಲಿ X3 ಫೋನ್ ಬಿಡುಗಡೆ ಮಾಡಿದೆ. ನೂತನ ಪೋಕೋ X3 ಸ್ಮಾರ್ಟ್‌ಫೋನ್, 6.67 ಇಂಚಿನ ಫುಲ್ ಎಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ, ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 860 ಒಕ್ಟಾ ಕೋರ್ ಪ್ರೊಸೆಸರ್ ಜತೆಗೆ, ಅಡ್ರೆನೊ 640 ಬೆಂಬಲ ಹೊಂದಿದೆ. ಆಂಡ್ರಾಯ್ಡ್ 11 ಆಧಾರಿತ 12 ಕಾರ್ಯಾಚರಣೆ ವ್ಯವಸ್ಥೆ, 6 ಮತ್ತು 8 LPDDR4X ಜತೆಗೆ 128 ಸ್ಟೋರೇಜ್ ಹೊಂದಿದೆ. 5,160mAh ಬ್ಯಾಟರಿ ಹಾಗೂ 33W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇದರ ವಿಶೇಷತೆಯಾಗಿದೆ. ಕ್ಯಾಮರಾ ಎಷ್ಟಿದೆ? ಹೊಸ ಪೋಕೋ X3 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ನಾಲ್ಕು ಕ್ಯಾಮರಾ ಲೆನ್ಸ್ ವ್ಯವಸ್ಥೆ ಹೊಂದಿದೆ. 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮರಾ ಜತೆಗೆ, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್, 2+2 ಮೆಗಾಪಿಕ್ಸೆಲ್ ಹಾಗೂ 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಇದರಲ್ಲಿದೆ. ಬೆಲೆ ಮತ್ತು ಲಭ್ಯತೆ ಪೋಕೋ X3 ಫೋನ್, ಗೋಲ್ಡನ್, ಗ್ರಾಫೈಟ್ ಬ್ಲ್ಯಾಕ್ ಮತ್ತು ಸ್ಟೀಲ್ ಬ್ಲೂ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಫ್ಲಿಪ್‌ಕಾರ್ಟ್ ಮೂಲಕ ಏಪ್ರಿಲ್ 6 ರಿಂದ ದೊರೆಯಲಿದೆ. 6GB + 128GB ಮಾದರಿಗೆ ₹18,999 ಮತ್ತು 8GB + 128GB ಆವೃತ್ತಿಗೆ ₹20,999 ದರವಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.