M02: ಸ್ಯಾಮ್‌ಸಂಗ್ ಹೊಸ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಬಿಡುಗಡೆ ಬೆಂಗಳೂರು: ಜಗತ್ತಿನ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕೊರಿಯಾ ಮೂಲದ ಸ್ಯಾಮ್‌ಸಂಗ್ ಕಂಪನಿ, ದೇಶದ ಮಾರುಕಟ್ಟೆಗೆ ಕಡಿಮೆ ಬಜೆಟ್ ದರದ ಆಕರ್ಷಕ ಸ್ಮಾರ್ಟ್‌ಫೋನ್ ಒಂದನ್ನು ಪರಿಚಯಿಸಿದೆ. ಗ್ಯಾಲಕ್ಸಿ ಸರಣಿಯಲ್ಲಿ ಸ್ಯಾಮ್‌ಸಂಗ್ ಹೊಸ M02 ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಸ್ಯಾಮ್‌ಸಂಗ್ ಫೋನ್ ವಿಶೇಷತೆಯೇನು? ಸ್ಯಾಮ್‌ಸಂಗ್ ಗ್ಯಾಲಕ್ಸಿ ಸರಣಿಯಲ್ಲಿ ಎಂ.ಜೆ.ಎಸ್.ಎ ಮತ್ತು ಎಫ್ ಸರಣಿಯಲ್ಲಿ ವಿವಿಧ ಮಾದರಿಯ ಫೋನ್‌ಗಳನ್ನು ಪರಿಚಯಿಸುತ್ತದೆ. ಈ ಪೈಕಿ, ಈ ಬಾರಿ ಎಂ ಸರಣಿಯಲ್ಲಿ ಬಜೆಟ್ ದರದ ಗ್ಯಾಲಕ್ಸಿ M02 ಫೋನ್ ಬಿಡುಗಡೆ ಮಾಡಿದೆ. ಗ್ಯಾಲಕ್ಸಿ M02 ಹೊಸ ಗ್ಯಾಲಕ್ಸಿ M02 ಫೋನ್, 6.5 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, ಮೀಡಿಯಾಟೆಕ್ MT6739W ಒಕ್ಟಾ ಕೋರ್ ಪ್ರೊಸೆಸರ್ ಮತ್ತು GE8100 ಬೆಂಬಲ ಹೊಂದಿದೆ. ಆಂಡ್ರಾಯ್ಡ್ 10 ಆಧಾರಿತ ಓಎಸ್ ಇದರಲ್ಲಿದೆ. 2 ಮತ್ತು 3 , ಹಾಗೂ 32 ಸ್ಟೋರೇಜ್ ಇದರಲ್ಲಿದೆ. ಜತೆಗೆ 5000mAh ಬ್ಯಾಟರಿ ಸೌಲಭ್ಯವಿದೆ. ಕ್ಯಾಮರಾ ಎಷ್ಟಿದೆ? ಸ್ಯಾಮ್‌ಸಂಗ್ ಗ್ಯಾಲಕ್ಸಿ M02 ಸ್ಮಾರ್ಟ್‌ಫೋನ್‌ನಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮರಾ ಜತೆಗೆ 2 ಮೆಗಾಪಿಕ್ಸೆಲ್ ಹಾಗೂ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಇದೆ. ಇದನ್ನೂ ಓದಿ:ಜಗತ್ತಿನ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರಾಟ ಕಂಪನಿಯಾಗಿ ಹೊರಹೊಮ್ಮಿದ ಆ್ಯಪಲ್ ಬೆಲೆ ಎಷ್ಟು? ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ M02 ಫೋನ್, 2GB + 32GB ಮಾದರಿಗೆ ₹6,999 ದರ ಹೊಂದಿದೆ. ಇದನ್ನೂ ಓದಿ: M3: ತ್ರಿವಳಿ ಕ್ಯಾಮರಾ ಸಹಿತ ಹೊಸ ಫೋನ್ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.